ಬೆಂಗಳೂರು : ಇಂಟರ್‌ನೆಟ್‌ ಸೆನ್ಸೇಷನ್ ತಜಕಿಸ್ತಾನದ ಅಬ್ದು ರೋಜಿಕ್‌ ತಮ್ಮ ಹಾಡುಗಾರಿಕೆಯಿಂದಲೇ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ನ್ಯೂನ್ಯತೆಯಿಂದ ಆಕಾರದಲ್ಲಿ ಚಿಕ್ಕದಾಗಿರುವ ಅಬ್ದು ಲೈಫ್‌ ಜರ್ನಿ ಮಾತ್ರ ದೊಡ್ಡದು. ಬೀದಿಯಲ್ಲಿ ಹಾಡು ಹಾಡುತ್ತಿದ್ದ ಬಾಲಕ ಇಂದು ಫುಟ್ ಬಾಲ್ ದೈತ್ಯ ಕ್ರಿಸ್ಟಿಯಾನೋ ರೊನಾಲ್ಡೊ, ನಟ ಸಲ್ಮಾನ್‌ ಖಾನ್‌, ಸಂಗೀತ ನಿರ್ದೇಶಕ ಎ.ಆರ್‌ ರೆಹಮಾನ್‌ ನಂತಹ ದಿಗ್ಗಜರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ʼಸಬ್ಕಾ ಭಾಯ್ ಸಬ್ಕಿ ಜಾನ್‌ʼನ ಭಾಗವಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಸಾವ್ರಿಕುಲ್ ಮುಹಮ್ಮದ್ರೋಜಿಕಿ, ಸದ್ಯ ಅಬ್ದು ರೋಜಿಕ್ ಎಂದು ಹೆಸರುವಾಸಿ. 2003 ರಲ್ಲಿ ತಜಕಿಸ್ತಾನ್‌ದಲ್ಲಿ ಜನಿಸಿದ ಈತ ಕೇವಲ 20 ದಿನ ಮಾತ್ರ ಶಾಲೆಗೆ ಹಾಜರಾಗಿದ್ದ, ಇದಕ್ಕೆ ಕಾರಣ ಬಡತನ. ಆದರೂ ಬರವಣಿಗೆ ಮತ್ತು ಓದುವ ತರಗತಿಗೆ ಸೇರಿ ಕಲಿತ. ಇನ್ನು ಸಂಕಷ್ಟದಿಂದ ಕೂಡಿದ್ದ ಮನೆಯನ್ನು ನೋಡಿಕೊಳ್ಳಲು ಚಿಕ್ಕ ವಯಸ್ಸಿನಲ್ಲೇ ಗಿಶ್ದರ್ವದ ಬೀದಿಗಳಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದ್ದ.


ಇದನ್ನೂ ಓದಿ: ನಾ ಕಂಡ ʼಪರಿಶುದ್ಧ ಆತ್ಮ ಅಪ್ಪುʼ : ನಗುಮೊಗದ ದೊರೆ ನೆನೆದ ಜಾನಿ ಮಾಸ್ಟರ್‌


ಆರಂಭಿಕ ಜೀವನ : ಅಬ್ದು ಮಗುವಾಗಿದ್ದಾಗ ರಿಕೆಟ್ಸ್, ಬೆಳವಣಿಗೆಯ ಹಾರ್ಮೋನ್ ಕೊರತೆ ಇಂದ ಬಳಲುತ್ತಿದ್ದ. ಅವರ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರ ಕುಟುಂಬಕ್ಕೆ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಅವರ ದೈಹಿಕ ಬೆಳವಣಿಗೆಗೆ ಕುಂಟಿತವಾಯಿತು. ಸಂದರ್ಶನವೊಂದರಲ್ಲಿ ಅವರ ಆಕಾರ ಅವರ ಸ್ವಾಭಿಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಅವರು ʼಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವಿಶೇಷರಾಗಿದ್ದಾರೆʼ ಎಂದು ಉತ್ತರಿಸಿ ಎಲ್ಲರ ಗಮನ ಸೆಳೆದಿದ್ದರು.


ಗಾಯಕನಾಗಿ ಅಬ್ದು ಮ್ಯಾಜಿಕ್‌ : ಗಾಯಕನಾಗಿ ಪಯಣ ಆರಂಭಿಸಿದಾಗ ಅವರಿಗೆ ಕೇವಲ ಆರು ವರ್ಷ. ರೋಜಿಕ್‌ ತಮ್ಮ ಕುಟುಂಬವನ್ನು ಸಲಹಲು ಹಾಡುತ್ತಿದ್ದರು. ಅವರ ಜನಪ್ರಿಯ ಹಾಡುಗಳಲ್ಲಿ ʼಓಹಿ ದಿಲ್ ಜೋರ್ʼ, ʼಚಾಕಿ ಚಾಕಿ ಬೋರೋನ್ʼ ಮತ್ತು ʼಮೋದರ್ʼ ಸೇರಿವೆ.


ಎಂಎಂಎ ಫೈಟರ್‌ : ಕುಬ್ಜರ ಎಂಎಂಎ ಪಂದ್ಯಗಳಲ್ಲಿಯೂ ಅಬ್ದು ಭಾಗವಹಿಸಿದ್ದಾರೆ. ವೃತ್ತಿಪರ ಬಾಕ್ಸಿಂಗ್ ತರಬೇತಿಯನ್ನು ಬ್ರಿಟಿಷ್ ಬಾಕ್ಸರ್ ಮತ್ತು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಅಮೀರ್ ಖಾನ್ ಅವರಿಂದ ಕಲಿತಿದ್ದಾರೆ. ರಷ್ಯಾದ ಟಿಕ್ ಟಾಕರ್‌ ಮತ್ತು ಎಂಎಂಎ ಸ್ಪರ್ಧಿ ಹಸ್ಬುಲ್ಲಾ ಮೇ 2021 ರಲ್ಲಿ ತಮ್ಮ ವಿರುದ್ಧ ಆಡುವಂತೆ ಸವಾಲು ಹಾಕಿದ್ದರು. ಆದರೆ ಅಷ್ಟರಲ್ಲಿ ರಷ್ಯಾದ ಡ್ವಾರ್ಫ್ ಅಥ್ಲೆಟಿಕ್ ಅಸೋಸಿಯೇಷನ್ (RDAA) ಇದನ್ನು ನಿರಾಕರಿಸಿತು ಮತ್ತು ಅನೈತಿಕವೆಂದು ಪರಿಗಣಿಸಿತು. ಯುಎಇ 17ನೇ ವಯಸ್ಸಿಗೆ ಅಬ್ದುಗೆ ಗೋಲ್ಡನ್ ವೀಸಾ ನೀಡಿದೆ. 


ಇದನ್ನೂ ಓದಿ: ಬಳ್ಳಾರಿ ಪ್ರವೇಶಕ್ಕೆ ಜನಾರ್ಧನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ..!


ಇನ್ನು 2021 ರಲ್ಲಿ ಸರ್ಬಿಯಾದಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಉದ್ಘಾಟನಾ ಸಮಾರಂಭಕ್ಕೆ ಅಂತರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (AIBA) ಅಧ್ಯಕ್ಷರು ಅವರನ್ನು ವೈಯಕ್ತಿಕವಾಗಿ ಆಹ್ವಾನಿಸಿದರು. ಅಲ್ಲದೆ, ಸ್ಪ್ಯಾನಿಷ್ ಫುಟ್ಬಾಲ್ ಲೀಗ್ (ಲಾ ಲಿಗಾ) ಮತ್ತು ಪೂಮಾ 2021 ರಲ್ಲಿ ಲೋಗೊ ಲಾಂಚ್‌ ಮಾಡಲು ಅಬ್ದುವನ್ನು ಅಹ್ವಾನಿಸಿದ್ದರು. 


ಬಿಗ್‌ಬಾಸ್‌ 16ರಲ್ಲಿ ಅಬ್ದು : ದೇಶದ ಗಡಿ ಮೀರಿ ಬೆಳೆದಿರುವ ಈ ಪ್ರತಿಭೆಗೆ ಭಾರತ ದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದೆ. ಪ್ರಸ್ತುತ ಅಬ್ದು ಕಲರ್ಸ್ ಟಿವಿಯ ಬಿಗ್ ಬಾಸ್ 16 ರ ಭಾಗವಾಗಿದ್ದಾರೆ. ಭಾರತೀಯ ಪ್ರೇಕ್ಷಕರಿಂದ ಅಪಾರವಾಗಿ ಅಬ್ದು ರೋಜಿಕ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.