ಎಲ್ಲಾರಿಗೂ ನಾನು ಆಪ್ ಇಡ್ತಿದ್ದೆ ಇವಾಗ ಎಲ್ರೂ ನನಗೆ ಆಪ್ ಇಟ್ರು..!
ಸದಾ ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ನಗುವಿಗೂ ಕಾರಣ ಆರ್ಯವರ್ಧನ್ ಗುರೂಜಿ. ಏನಾದರೊಂದು ಕಿತಾಪತಿ ಮಾಡುವ ಮೂಲಕ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ. ಸದ್ಯ ಮನೆ ಮಂದಿಗೆಲ್ಲ ಗ್ರಹಗಳ ಹೊಲಿಕೆ ಮಾಡಲು ಹೋಗಿ ತಮ್ಮ ಮೇಲೆ ತಾವೇ ಗೂಬೆ ಕೂರಿಸಿಕೊಂಡಿದ್ದಾರೆ.
BBKS 9 : ಸದಾ ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ನಗುವಿಗೂ ಕಾರಣ ಆರ್ಯವರ್ಧನ್ ಗುರೂಜಿ. ಏನಾದರೊಂದು ಕಿತಾಪತಿ ಮಾಡುವ ಮೂಲಕ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ. ಸದ್ಯ ಮನೆ ಮಂದಿಗೆಲ್ಲ ಗ್ರಹಗಳ ಹೊಲಿಕೆ ಮಾಡಲು ಹೋಗಿ ತಮ್ಮ ಮೇಲೆ ತಾವೇ ಗೂಬೆ ಕೂರಿಸಿಕೊಂಡಿದ್ದಾರೆ.
ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಆರ್ಯವರ್ಧನ್ ಗುರೂಜಿಗೆ ಕಿಚ್ಚ ಸುದೀಪ್ ಅವರು, ಮನೆಯಲ್ಲಿರುವ ಸದಸ್ಯರಿಗೆ ಯಾವ ಯಾವ ಗ್ರಹಗಳನ್ನು ಹೋಲಿಕೆ ಮಾಡುತ್ತಿರಾ ಅಂತ ಕೇಳಿದ್ದಾರೆ. ಅದಕ್ಕೆ ಗುರೂಜಿ ರಾಕೇಶ್ ಅಡಿಗ ಕೇತು ಗ್ರಹ... ಅವ ಜ್ಞಾನಕಾರಕ, ಯಾವಾಗ್ಲೂ ನನಗೆ ಜ್ಞಾನ ಇದೆ.. ಜ್ಞಾನ ಇದೆ ಹೂಹೂಹೂ ಅಂತಾ ಇರ್ತಾನೆ ಎಂದಾಗ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಾರೆ. ಇನ್ನು ರೂಪೇಶ್ ರಾಜಣ್ಣ ಪೂರ್ತಿ ಶುಕ್ರಗ್ರವಾಗಿಬಿಟ್ಟಿದಾರೆ. ಬರೀ ನಾಲಿಗೆಗೆ ಮಾತ್ರ ಕೆಲಸ ಕೊಡ್ತಾರೆ ಮನಸು ಬಾಡಿಗೆಲ್ಲ ಮರೆತುಬಿಟ್ಟವರೆ ಎಂಬ ಗುರೂಜಿ ಮಾತು ರೂಪೇಶ್ ರಾಜಣ್ಣ ಮುಖದ ಮೇಲಿನ ನಗು ತರಿಸಿತು.
ಇದನ್ನೂ ಓದಿ: ಯಾರದ್ದೋ ಲವ್ ಸ್ಟೋರಿ, ಇನ್ಯಾರದ್ದೋ ಮೇಲಿನ ದ್ವೇಷ : ಬಲಿಯಾಗಿದ್ದು ಅಮಾಯಕ..!
ಇನ್ನು ಕಿಚ್ಚ ಸುದೀಪ್ ಅವರು ಅರುಣ್ ಸಾಗರ್‌ಗೆ ನೀವು ಆರ್ಯವರ್ಧನ್ ಅವರಿಗೆ ಯಾವ ಗ್ರಹ ಹೊಲಿಸ್ತೀರಾ ಎಂದಾಗ ಅರುಣ್ ಸಾಗರ್ ಆರ್ಯವರ್ಧನ ಗುರೂಜಿಯವರಿಗೆ ಸೂರ್ಯ ಗ್ರಹ ಕೋಡ್ತೀನಿ... ಯಾಕಂದ್ರೆ ಅವರು ತುಂಬಾ ಬೆಳಗುತ್ತಾರೆ, ಬೇರೆಯವರು ಕಾಣದಿರಂಗೆ ಅಂತ್ಯ ಕಾಮಿಡಿ ಮಾಡಿದ್ರು. ಆಗ ಆರ್ಯವರ್ಧನ್ ಗುರೂಜಿಯವರು ನಾನು ಎಲ್ಲಾರಿಗೂ ಆಪ್ ಇಡ್ತೀದ್ದೆ ಇವರು ನನಗೆ ಆಪ್ ಇಟ್ಟು ಬಿಟ್ಟರು ಎನ್ನುತ್ತಾರೆ. ಗುರೂಜಿ ಮಾತಿಗೆ ದೊಡ್ಮನೆ ಮಂದಿ ನಗೆಗಡಲಿನಲ್ಲಿ ತೆಲಿದರು.
ಇನ್ನು ಎಲ್ಲರಿಗೂ ಪ್ರ್ಯಾಂಕ್ ಮಾಡಲು ಹೋಗಿ ರಾಕೇಶ್ ಅಡಿಗ ಖೈದಿಯ ಬಟ್ಟೆ ತೊಟ್ಟು ಜೈಲು ಸೇರಿದ್ದಾರೆ. ಹೊಸ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ ಚಾರ್ಜ್ ತೆಗೆದುಕೊಂಡಿದ್ದಾರೆ. ಇನ್ನು ಬಿಗ್‌ಬಾಸ್ ಕೂಡ ಪ್ರ್ಯಾಂಕ್ ಮಾಡಿ ಇಡೀ ಮನೆಯ ಎಲ್ಲ ಸದಸ್ಯರಿಗೂ ಶಾಕ್ ಕೊಟ್ಟಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.