Bigboss season 10  Contestants : ಸಾಕಷ್ಟು ಜನಪ್ರಿಯತೆ ಪಡೆದಿರುವ ಬಿಗ್‌ಬಾಸ್‌ ಶೋ ಒಂದು ಸೀಸನ್ ಮುಗಿಯುತ್ತಿದ್ದಂತೆ ಮತ್ತೆ ಹೊಸ ಸೀಸನ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. 9 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಿಗ್‌ ಬಾಸ್‌ ಶೋನಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳೂ ಕೂಡ ಬಿಗ್‌ ಬಾಸ್‌ ಸ್ಪರ್ಧಿಗಳಾಗಿದ್ದರು.


COMMERCIAL BREAK
SCROLL TO CONTINUE READING

ಇನ್ನು ಬಿಗ್‌ ಬಾಸ್‌ ಸೀಸನ್‌ 9 ರಲ್ಲಿ ರೂಪೇಶ್‌ ಶೆಟ್ಟಿ ವಿನ್ನರ್‌ ಆಗಿ ರಾಕೇಶ್‌ ಅಡಿಗ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಸೀಸನ್‌ 10 ಬಗ್ಗೆ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಗೆ ಬರುವ ಸ್ಪರ್ಧಿಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.


ಇದನ್ನೂ ಓದಿ-ಟೋಬಿಗೆ ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಯಾವುದು?


ಹೌದು ಸೀಸನ್‌ 10 ರಲ್ಲಿ ಯಾರು ಬರಲಿದ್ದಾರೆ ಎನ್ನುವುದು ಎಲ್ಲರಿಗೂ ಕುತೂಹಲ ಹೆಚ್ಚಿಸುವ ವಿಚಾರವೇ. ಇನ್ನು ಸೀಸನ್‌ 9ರಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಓಟಿಟಿ ಮೂಲಕ ಪರಿಚಿತರಾಗಿದ್ದರು. ನಂತರ ಆಯ್ಕೆಯಾಗಿ ಟಿವಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಓಟಿಟಿ ಅಷ್ಟು ಓಡಲಿಲ್ಲ ಎನ್ನಲಾಗಿದೆ. ಆದ್ದರಿಂದ ಈ ಸೀಸನ್‌ 10ನಲ್ಲಿ ಸ್ಪರ್ಧಿಗಳು ಮನೆಯ ಟಿವಿಗೆ ನೇರವಾಗಿಯೇ ಬರಲಿದ್ದಾರೆ ಎನ್ನಲಾಗಿದೆ. 


ಈ ಬಾರಿ ದೊಡ್ಡಮನೆಯಲ್ಲಿಕ ಮಿಂಚಲಿರುವ ಸ್ಪರ್ಧಿಗಳು ಅಂದರೆ ನಮೃತಾ ಗೌಡ,  ಕಿಚ್ಚ ಸಿನಿಮಾದ ನಾಯಕಿ ರೇಖಾ,  ಭೂಮಿಕಾ ಬಸವರಾಜ್,  ಅಗ್ನಿಸಾಕ್ಷಿ ರಾಜೇಶ್ ದ್ರುವ,  ಕಾಫಿ ನಾಡು ಚಂದು, ವರ್ಷ ಕಾವೇರಿ ಸದ್ಯ ಇವರೆಲ್ಲರ ಹೆಸರು ಜೋರಾಗಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ಯಾವುದೇ ಘೋಷಣೆಗಳಾಗಿಲ್ಲ. ಹಾಗಾಗಿ ಇದು ನಿಜಾನಾ? ಸುಳ್ಳಾ? ಅನ್ನೋದನ್ನು ಕಾದು ನೋಡಬೇಕು. 


ಇದನ್ನೂ ಓದಿ-ಬಾಲಿವುಡ್‌ ಖ್ಯಾತ ನಟ ಪಂಕಜ್‌ ತ್ರಿಪಾಠಿಯವರ ತಂದೆ ನಿಧನ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.