ಟೋಬಿಗೆ ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಯಾವುದು?

Toby Censor Certificate : ಆಗಸ್ಟ್ 28 ರಿಂದ ಟೋಬಿ ಸಿನಿಮಾ ರಿಲೀಸ್‌ ಆಗಲಿದೆ. ರಾಜ್ಯದ್ಯಂತ ಚಿತ್ರತಂಡ ಟೋಬಿಯ ಭರ್ಜರಿ ಪ್ರಚಾರವನ್ನೂ ಮಾಡುತ್ತಿದೆ. ಟೋಬಿ ರಿಲೀಸ್‌ಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Written by - Chetana Devarmani | Last Updated : Aug 21, 2023, 04:24 PM IST
  • ಟೋಬಿ ಸಿನಿಮಾ ರಿಲೀಸ್‌ಗೆ ದಿನಗಣನೆ
  • ಟೋಬಿ ರಿಲೀಸ್‌ಗೆ ಕಾತುರದಿಂದ ಕಾಯುತ್ತಿರುವ ಫ್ಯಾನ್ಸ್‌
  • ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಯಾವುದು?
ಟೋಬಿಗೆ ಸೆನ್ಸಾರ್ ಮಂಡಳಿಯಿಂದ ಸಿಕ್ಕ ಸರ್ಟಿಫಿಕೇಟ್ ಯಾವುದು?  title=
Toby

Toby Movie Updates : ನಟ ರಾಜ್ ಬಿ ಶೆಟ್ಟಿ ಅವರು ತಮ್ಮ ಮುಂದಿನ ಟೋಬಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸಿದ್ದಾರೆ. ಅವರ ಹಿಂದಿನ ಸಿನಿಮಾ ಗರುಡ ಗಮನ ವೃಷಭ ವಾಹನಕ್ಕಿಂತ ಈ ಚಿತ್ರ ವಿಭಿನ್ನವಾಗಿದೆ. ಆಗಸ್ಟ್ 28 ರಿಂದ ಟೋಬಿ ಸಿನಿಮಾ ರಿಲೀಸ್‌ ಆಗಲಿದೆ. ರಾಜ್ಯದ್ಯಂತ ಚಿತ್ರತಂಡ ಟೋಬಿಯ ಭರ್ಜರಿ ಪ್ರಚಾರವನ್ನೂ ಮಾಡುತ್ತಿದೆ. ಸೆಂಟಿಮೆಂಟ್ ಜೊತೆಗೆ ಮಾಸ್ ಕತೆ ಹೇಳು ಟೋಬಿ ಸಿನಿಮಾ ಜನರಲ್ಲಿ ಕುತೂಹಲ ಹೆಚ್ಚಿಸಿದೆ. 

ಇದನ್ನೂ ಓದಿ: ಕಾರ್ಟೂನ್‌ ಫೋಟೋ ಹಂಚಿಕೊಂಡು...ಚಂದ್ರಯಾನ 3 ಬಗ್ಗೆ ಅಪಹಾಸ್ಯ ಮಾಡಿದ ನಟ ಪ್ರಕಾಶ್‌ ರಾಜ್! 

ಸದಾ ವಿಭಿನ್ನ ರೀತಿಯ ಸಿನಿಮಾ ಮಾಡುವ ರಾಜ್‌ ಬಿ ಶೆಟ್ಟಿ, ಈಗ ಮತ್ತೊಮ್ಮೆ ಹೊಸ ರೀತಿಯ ಕತೆ ಹೊತ್ತು ಜನರ ಮುಂದೆ ಬಂದಿದ್ದಾರೆ. ಟೋಬಿ ರಿಲೀಸ್‌ಗೆ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಟ್ರೇಲರ್‌ನ ಪ್ರಕಾರ, ಟೋಬಿ ಒಂದು ಸರಳವಾದ ಕಥೆಯಾಗಿದೆ. ತನ್ನ ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ಸೇಡು ತೀರಿಸಿಕೊಳ್ಳುವ ಅವತಾರವಾಗಿ ವಿಕಸನಗೊಳ್ಳುವ ವ್ಯಕ್ತಿಯ ಕತೆ ಇದು.  

 

 

ಇದೀಗ ಟೋಬಿ ಸಿನಿಮಾದ ಸೆನ್ಸಾರ್‌ ಸರ್ಟಿಫಿಕೇಟ್‌ ವಿಚಾರ ಹರಿದಾಡುತ್ತಿದೆ. ಟೋಬಿ ಸಿನಿಮಾಗೆ ಸೆನ್ಸಾರ್‌ ಮಂಡಳಿಯಿಂದ ಯು/ಎ (U/A) ಸರ್ಟಿಫಿಕೇಟ್‌ ದೊರೆತಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಟೋಬಿ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್‌ ಸಿನಿಮಾ ಆಗುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. 

ಇದನ್ನೂ ಓದಿ: ಆಗಸ್ಟ್ 23ಕ್ಕೆ ಚಂದ್ರನ ಅಂಗಳಕ್ಕೆ ʼಚಂದ್ರಯಾನ 3ʼ : ಅದೇ ದಿನ ʼರಾನಿʼ ಚಿತ್ರದ ಟೀಸರ್ ರಿಲೀಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News