Varthur santhosh: ಬಿಗ್‌ಬಾಸ್‌ ಮನೆಗೆ ಹೋಗಿ ಬಂದಾಗಿನಿಂದ ವರ್ತೂರ್‌ ಸಂತೋಷ್‌ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇನ್ನೂ, ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಸಂತೋಷ್‌ ತಾನು ಸಿಂಗಲ್‌ ಅಂತಾ ಹೇಳಿಕೊಂಡಿದ್ದರು, ತನಿಷ ಕುಪ್ಪಂಡ ಅವರ ಜೊತೆ ಕ್ಲೋಸ್‌ ಆಗಿದ್ದನ್ನು ನೋಡಿ ಎಲ್ಲರು ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಬಾವಿಸಿದ್ದರು. ಇದರ ಬೆನ್ನಲ್ಲೆ ವರ್ತೂರ್‌ ಸಂತೋಷ್‌ ಅವರ ಮದುವೆಯ ಕುರಿತಾದ ಸುದ್ದಿಯೊಂದು ಹೊರಬಿದ್ದಿತ್ತು. ಮಗುವಿನ ಜನನಕ್ಕೆ ತವರು ಮನೆಗೆ ಬಂದಿದ್ದ ಪತ್ನಿಯನ್ನು ವರ್ತೂರ್‌ ಸಂತೋಷ್‌ ಮತ್ತೆ ವಾಪಸ್‌ ಮನೆಗೆ ಕರೆದುಕೊಂಡು ಹೋಗಲೇ ಇಲ್ಲ ಎನ್ನುವ ಸುದ್ದಿ ಎಲ್ಲರು ಅವರ ಮೇಲೆ ಕಿಡಿ ಕಾರುವಂತೆ ಮಾಡಿತ್ತು, ನಂತರ ಒಂದೇ ಭಾರಿ ಸೌಂಡ್‌ ಮಾಡಿದ್ದ ಈ ಸುದ್ದಿ ಸೌಂಡ್‌ ಮಾಡಿದ್ದ ಸ್ಪೀಡ್‌ನಲ್ಲೆ ಸೈಲೆಂಟ್‌ ಆಗಿತ್ತು.


COMMERCIAL BREAK
SCROLL TO CONTINUE READING


ಇನ್ನೂ, ಇದಾದ ನಂತರ ತನಿಷಾ ಕುಪ್ಪಂಡ ಹಾಗೂ ವರ್ತೂರ್‌ ಸಂತೋಷ್‌ ಅವರ ಮಧ್ಯೆ ಒಳ್ಳೆಯ ಗೆಲತನ ಬೆಳೆದಿತ್ತಿ. ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್‌ ಆಗಿತ್ತು. ಬಿಗ್‌ ಬಾಸ್‌ ಮನೆಯಿಂದ ಹೊರಬಂದ ನಂತರವೂ ಕೂಡ ಈ ಜೋಡಿ ಹಲವು ಜಾಗಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಈ ಜೋಡಿ ಮದುವೆಯಾಗೋದು ಫಿಕ್ಸ್‌ ಎಂದು ನೆಟ್ಟಿಗರು ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಯಾರು ಎಷ್ಟೇ ಇವರ ಕುರಿತು ವದಂತಿಗಳನ್ನು ಹಬ್ಬಿಸಿದರೂ ಕೂಡ ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಕುಪ್ಪಂಡ ಇಬ್ಬರೂ ಕೂಡ ತಾವಿಬ್ಬರು ಪ್ರೀತಿಸುತ್ತಿದ್ದೇವೆ ಎನ್ನುವ ವಿಚಾರವನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಿರಲಿಲ್ಲ.


ಇದೀಗ, ಅದರಂತೆಯೇ ವರ್ತೂರ್‌ ಸಂತೋಷ್‌ ಅವರು ತಮ್ಮ ಲವ್‌ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ, ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಮಗೆ ಲವರ್‌ ಇದ್ದಾರೆ ಎನ್ನುವ ವಿಷಯವನ್ನು ಬಿಚ್ಚಿಟ್ಟಿದ್ದಾರೆ. "ನನಗೆ ಟೂ ಸೈಡ್‌ ಲವ್‌ ಇದೆ, ಇದನ್ನು ನೀವು ಲವ್‌ ಕ್ರಶ್‌ ಏನಾದ್ರೂ ತಿಳ್ಕೊಬಹುದು. ನಾನು ಡಿಪ್ರೆಶನ್‌ಗೆ ಹೋಗಿದ್ದೆ ಆಗ ಆ ಹುಡುಗಿನೆ ನಾನು ಡಿಪ್ರಶನ್‌ನಿಂದ ಹೊರಬರುವುದಕ್ಕೆ ಸಹಾಯ ಮಾಡಿದ್ದರು. ನನ್ನ ಅಮ್ಮನ ನಂತರ ನನ್ನ ಜೀವನದಲ್ಲಿ ನಂತರದ ಸ್ಥಾನ ಆ ಹುಡುಗಿಗೆ ಮಾತ್ರ. ಈ ವಿಚಾರವನ್ನು ನಾನು ಎಲ್ಲೂ ಹೇಳಿರಲಿಲ್ಲ, ಅಷ್ಟಕ್ಕೂ ಆ ಹುಡುಗಿ ನನ್ನ ನೇಮ್‌ ಫೇಮ್‌ ನೋಡಿ ಬಂದವಳಲ್ಲ. ನನ್ನ ಬಳಿ ಏನು ಇಲ್ಲದ್ದಕ್ಕೂ ಮುಂಚೆಯಿಂದಲೂ ಆ ಹುಡುಗಿ ನನ್ನ ಜೊತೆ ಇದ್ದಾಳೆ." ಎಂದು ಆ ಹುಡುಗಿಯ ಕುರಿತು ಗುಣಗಾನ ಮಾಡಿದ್ದಾರೆ.


ವರ್ತೂರು ಸಂತೋಷ್‌ ಆ ಹುಡುಗಿಯ ಹೆಸರು ಬಿಚ್ಚಿಟ್ಟಿಲ್ಲವಾದ್ರೂ ಇಬ್ಬರಿಗೂ ಇಬ್ಬರ ಮೇಲಿನ ಪ್ರೀತಿ ಎಂತಹದ್ದು ಎಂಬುದನ್ನು ಅವರ ಮಾತುಗಳೇ ತೋರಿಸಿಕೊಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್