ಯಾರೆಲ್ಲ ಈ ಸಲದ ಬಿಗ್ ಬಾಸ್ ಕಂಟೆಸ್ಟಂಟ್ ಗಳು? ಹೇಗಿದೆ ತಯಾರಿ? ಇಲ್ಲಿದೆ ಮಾಹಿತಿ…
Bigg Boss Kannada Update: ಪ್ರತಿ ಸಲದಂತೆ ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ಪತ್ರಕರ್ತರು, ರೀಲ್ಸ್ ಮಾಡುವವರು, ಯೂಟ್ಯೂಬ್ ಮೂಲಕ ಫೇಮಸ್ ಆಗಿರುವವರು ಈ ಸಲವೂ ಬಿಗ್ ಬಾಸ್ ಕಂಟೆಸ್ಟಂಟ್ ಗಳಾಗಲಿದ್ದಾರೆ. ಜೊತೆಗೆ ಈ ಸಲ ರಾಜಕೀಯ ಮತ್ತು ವಕೀಲಿಕೆ ವೃತ್ತಿಯಲ್ಲಿ ಇರುವವರನ್ನೂ ಪರಿಗಣಿಸಲಾಗುತ್ತಿದೆ.
Bigg Boss Kannada 11: ರಾಜ್ಯದ ಪ್ರಮುಖ ಜಿಇಸಿ ವಾಹಿನಿ ಕಲರ್ಸ್ ಕನ್ನಡದ (Colours Kannada) ಅತಿ ನಿರೀಕ್ಷಿತ ಕಾರ್ಯಕ್ರಮ ಬಿಗ್ ಬಾಸ್ (Big Boos) ಷೋ ಬಗ್ಗೆ ಈಗಾಗಲೇ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಷೋ ಆರಂಭವಾಗುವ ದಿನಾಂಕವನ್ನೂ (ಸೆಪ್ಟೆಂಬರ್ 29ರಿಂದ) ಘೋಷಿಸಲಾಗಿದೆ. ಈ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮವನ್ನೂ ಕಿಚ್ಚ ಸುದೀಪ್ (Kiccha Sudeep) ಅವರೇ ನಡೆಸಿಕೊಡುವುದು ಖಾತ್ರಿಯಾಗಿದೆ. ಉಳಿದಿರುವ ಕುತೂಹಲ ಏನೆಂದರೆ ಈ ಸಲದ ಬಿಗ್ ಬಾಸ್ ಕಂಟೆಸ್ಟಂಟ್ ಗಳು ಯಾರು ಎನ್ನುವುದು.
ಬಿಗ್ ಬಾಸ್ (Bigg Boss) ಕಾರ್ಯಕ್ರಮದಲ್ಲಿ ಹೊಸತನ ತರಬೇಕು ಎಂದು ಬಯಸಿರುವ ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಇದೇ ಹಿನ್ನೆಲೆಯಲ್ಲಿ ಈ ಸಲದ ಬಿಗ್ ಬಾಸ್ ಕಂಟೆಸ್ಟಂಟ್ ಗಳ ಆಯ್ಕೆಯಲ್ಲಿ ಅತ್ಯಂತ ಎಚ್ಚರ ವಹಿಸುತ್ತಿದೆ. ಪ್ರತಿ ಕಂಟಸ್ಟೆಂಟ್ ಗಳ ಬಗ್ಗೆಯೂ ಪ್ರತ್ಯೇಕವಾದ ಅಧ್ಯಯನ ಮಾಡಿ, ಅವರ ಹಿನ್ನೆಲೆ, ಒಲವು-ನಿಲುವು-ವ್ಯವಹಾರಗಳ ಮಾಹಿತಿಯನ್ನು ಕಲೆಹಾಕುತ್ತಿದೆ. ಅದಕ್ಕಾಗಿಯೇ ಕಂಟೆಸ್ಟಂಟ್ ಗಳ ಆಯ್ಕೆ ಪ್ರಕ್ರಿಯೆ ತಡವಾಗುತ್ತಿದೆ ಎನ್ನಲಾಗಿದೆ.
ಪ್ರತಿ ಸಲದಂತೆ ಹಿರಿತೆರೆ ಮತ್ತು ಕಿರುತೆರೆ ಕಲಾವಿದರು, ಪತ್ರಕರ್ತರು, ರೀಲ್ಸ್ ಮಾಡುವವರು, ಯೂಟ್ಯೂಬ್ ಮೂಲಕ ಫೇಮಸ್ ಆಗಿರುವವರು ಈ ಸಲವೂ ಬಿಗ್ ಬಾಸ್ ಕಂಟೆಸ್ಟಂಟ್ ಗಳಾಗಲಿದ್ದಾರೆ. ಜೊತೆಗೆ ಈ ಸಲ ರಾಜಕೀಯ ಮತ್ತು ವಕೀಲಿಕೆ ವೃತ್ತಿಯಲ್ಲಿ ಇರುವವರನ್ನೂ ಪರಿಗಣಿಸಲಾಗುತ್ತಿದೆ ಎಂದು ಬಿಗ್ ಬಾಸ್ ಮನೆಯ ‘ಮೂಲೆ’ಯಿಂದ ತಿಳಿದುಬಂದಿದೆ.
ಇದನ್ನೂ ಓದಿ- ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಹೊಸ ಪ್ರೋಮೋ ರಿಲೀಸ್, ಕಿಚ್ಚ ಸುದೀಪ್ ಹೇಳಿದ್ದೇನು?
ಲಾಯರ್ ಜಗದೀಶ್, ಕಾಫಿನಾಡು ಚಂದ್ರು, ಬೆಳ್ಳುಳ್ಳಿ ಕಬಾಬ್ ಸ್ಪೆಷಲಿಸ್ಟ್ ಸೇರಿದಂತೆ ಕೆಲವು ಸಿಂಪಲ್ ಪ್ರೊಫೈಲ್ ಕಂಟೆಸ್ಟಂಟ್ ಗಳು ಕೂಡ ಈ ಸಲ ಬಿಗ್ ಬಾಸ್ ಮನೆಗೆ ಬರಲಿ. ಜೊತೆಗೆ ಕೆಲ ಹೈ ಪ್ರೊಫೈಲ್ ಪರ್ಸನಾಲಿಟಿಗಳು ಇರಲಿ ಎಂದು ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ನಿಶ್ಚಿಯಿಸಿದೆಯಂತೆ.
ಈಗಾಗಾಲೇ ಶಾರ್ಟ್ ಲಿಸ್ಟ್ ಆಗಿರುವ ಕಂಟೆಸ್ಟಂಟ್ ಗಳ ಜೊತೆ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಒಂದೆರಡು ಸುತ್ತಿನ ಮಾತುಕತೆ ನಡೆಸಿದೆ. ಬಹುತೇಕ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಷೋನಲ್ಲಿ (Bigg Boss Show) ಭಾಗವಹಿಸಲು ಒಪ್ಪಿದ್ದಾರೆ. ಈಗ ರೇಮಂಡ್ ರೇಷನ್ ಬಗ್ಗೆ ಕೂಡ ಚರ್ಚೆ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ಸಲದ ಬಿಗ್ ಬಾಸ್ ಕಂಟೆಸ್ಟಂಟ್ ಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವ ಸಾಧ್ಯತೆ ಇದೆ. ಕೆಲವು ಸರ್ ಪ್ರೈಸ್ ಕ್ಯಾಂಡಿಡೇಟ್ ಗಳ ಹೆಸರು ಕಡೆ ಗಳಿಗೆಯಲ್ಲಿ ಗೊತ್ತಾಗಬಹುದು.
ಇದು ಹೇಳಿ ಕೇಳಿ ಸೋಷಿಯಲ್ ಮೀಡಿಯಾ ಜಮಾನ. ಯಾರಾದ್ರೂ ಹೇಳಲಿ, ಬಿಡಲಿ, ವಾಹಿನಿ ಕಡೆಯಿಂದ ಅಥವಾ ಕಂಟೆಸ್ಟಂಟ್ ಗಳ ಕಡೆಯಿಂದ ಮಾಹಿತಿ ಸಿಗಲಿ, ಬಿಡಲಿ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಕೆಲವು ಹೆಸರುಗಳು ಚರ್ಚೆಯಾಗಿವೆ. ಆ ಹೆಸರುಗಳ ಬಗ್ಗೆ ಸಂಬಂಧಪಟ್ಟವರೂ ತಲೆಕೆಡಿಸಿಕೊಂಡಿಲ್ಲ. ಬಿಟ್ಟಿ ಪ್ರಚಾರ ತೆಗೆದುಕೊಂಡು ಸುಮ್ಮನಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವ ಹೆಸರುಗಳನ್ನು ಕಲರ್ಸ್ ಕನ್ನಡ ವಾಹಿನಿ ಗಂಭೀರವಾಗಿ ಪರಿಗಣಿಸಿದೆ. ಆ ಹೆಸರುಗಳ ಬಗ್ಗೆ ಚರ್ಚೆಯನ್ನೂ ಮಾಡಿದೆ. ಆದ್ರೆ ಅಂತಿಮವಾಗಿ ‘ಯಾರೂ ನಿರೀಕ್ಷಿಸದ ಕೆಲವರನ್ನು’ ಬಿಗ್ ಬಾಸ್ ಷೋಗೆ ಕರೆತರಲು ಪ್ರಯತ್ನಿಸುತ್ತಿದೆ.
ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿಆರ್‌ಪಿ ಇದ್ದು ಅದನ್ನು ಉಳಿಸಿಕೊಳ್ಳಬೇಕು ಮತ್ತು ಬೇರೆ ವಾಹಿನಿಗಳ ಪೈಪೋಟಿಯ ನಡುವೆ ಈ ಸಲ ಬಿಗ್ ಬಾಸ್ ಹೆಚ್ಚು ಜನಕ್ಕೆ ರೀಚ್ ಆಗುವಂತೆ ಮಾಡಬೇಕು ಎನ್ನುವ ಆಲೋಚನೆ ಕೂಡ ವಾಹಿನಿಗೆ ಇದೆಯಂತೆ. ಅದಕ್ಕಾಗಿ ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಷೋ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆಯಂತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.