Mokshitha pai Gouthami Jadav : ಅನಿವಾರ್ಯಾವಾಗಿ ಮೋಕ್ಷಿತ ಪೈ ತನ್ನ ಹಳೆ ಗೆಳತಿ ಗೌತಮಿ ಬಳಿ ಸಹಾಯ ತೆಗೆದುಕೊಳುವ ಅನಿವಾರ್ಯತೆ ಬಂದಿದೆ. ಈ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಮೋಕ್ಷಿತಾ ಪೈ ಏನ್ ಹೇಳ್ತಾರೆ ಅನ್ನೋ ಪ್ರಶ್ನೇ ಎಲ್ಲರಲ್ಲೂ ಕೂತುಹಲ ಮೂಡಿಸಿದೆ. ಮೋಕ್ಷಿತಾ ಪೈ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ, ಆಟವನ್ನೇ ಆಡೋದಿಲ್ಲ ಎಂದು ಹಠಮಾಡುತ್ತಿದ್ದಾರೆ, ಕೊನೆಯಲ್ಲಿ ಏನ್ ಅಗುತ್ತೆ ಅನ್ನೋದೇ ಇವತ್ತೀನ ಸಂಚಿಕೆಯ ಕುತೂಹಲ.


COMMERCIAL BREAK
SCROLL TO CONTINUE READING

ಹೌದು.. ಈ ಒಂದು ಪ್ರಶ್ನೇ ಈಗ ಎಲ್ಲ ಬಿಗ್‌ಬಾಸ್‌ ವೀಕ್ಷಕರಲ್ಲಿ ಎದ್ದಿದೆ. ಆರಂಭದಲ್ಲಿ ನೋಡುಗರಿಗೆ ಮಾದರಿಯಂತ್ತಿಂದ ಈ ಮೂವರ ಸ್ನೇಹ ಈಗ ಕೆಲವೊಂದು ಮನಸ್ತಾಪಗಳಿಂದ ಕೆಲವು ದಿನಗಳಿಂದ ದೂರೂ ಉಳಿದಿದ್ದಾರೆ, ಮೋಕ್ಷಿತಾ ಪೈ ಏಕಾಂಗಿಯಾಗಿ ಆಟ ಆಡ್ಬೇಕು ಅಂತ ದೋಸ್ತಿ ಬಿಟ್ಟು ಬಂದಿದ್ದಾರೆ, ಸದ್ಯ ಮಂಜಣ್ಣನ ವಿರುದ್ದ ಕೆಂಡಕಾರುತ್ತಿರುವ ಇವರು ಗೌತಮಿಯ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿಕೊಂಡು ಓಡಾಡುತ್ತದ್ದಾರೆ.


ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಮದುವೆ ಡೇಟ್‌ ಫಿಕ್ಸ್‌!? ಈ ವಿಷಯ ಕೇಳಿ ಫ್ಯಾನ್ಸ್‌ ಫುಲ್‌ ಖುಷ್‌


ಈ ವಿಷಯ ತಿಳಿದ ಗೌತಮಿ ಬೇಸರ ಮಾಡಿಕೊಂಡಿದ್ದಾರೆ, ಇನ್ನು ಸೋಲೋದೇ ಇಲ್ಲ ಅಂತಲೂ ಹಠಕ್ಕೆ ಬಿದ್ದಿದ್ದಾರೆ. ಆ ಮೋಕ್ಷಿತಾ ಕೂಡ ಅದೇ ರೀತಿಯ ಮನಸ್ಥತಿಯಲ್ಲಿಯೇ ಕೋಲ್ಡ್ ವಾರ್‌ ಮುಂದುವರೆಸುತ್ತಿದ್ದಾರೆ ಆದರೆ ಈಗ ಕ್ಯಾಪ್ಟನ್ಸಿ ಆಟ ಬಂದಿದೆ, ಅನಿವಾರ್ಯವಾಗಿ ಈ ಹಳೆ ಸ್ನೇಹಿತರು ಆಟವನ್ನು ಆಡಲೇಬೇಕಿದೆ.


ಮೋಕ್ಷಿತಾ ಪೈ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾರೆ, ಕ್ಯಾಪ್ಟನ್ಸಿ ಓಟದಲ್ಲಿ ಇರಬೇಕೆಂದ್ರೆ ಒಬ್ಬರನ್ನು ಸಹಾಯಕ್ಕೆ ತೆಗೆದುಕೊಳ್ಳಬೇಕಿದೆ. ಮನೆಯ ಎಲ್ಲರು ಅವರಿಗೆ ತಕ್ಕ ಜೋಡಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ, ಕೊನೆಯಲ್ಲಿ ಉಳಿದವರು ಗೌತಮಿ ಮಾತ್ರ ಈಗ ಮೋಕ್ಷಿತಾಗೆ ಬೇರೆ ಆಯ್ಕೆಯೇ ಇಲ್ಲವಾಗಿದೆ, ಆದ್ದರಿಂದ ಮೋಕ್ಷಿತಾಗೆ ಟೆನ್ಷನ್‌ ಶುರುವಾಗಿದೆ.


ಹೌದು, ನಾನು ಗೌತಮಿ ಸಹಾಯ ತೆಗೆದುಕೊಂಡು ಕ್ಯಾಪ್ಟನ್‌ ಆಗುವುದಿಲ್ಲ, ಆ ರೀತಿನೇ ಇದ್ದರೆ ಆಟವನ್ನೇ ಆಡೋದಿಲ್ಲ. ಈ ಆಟದಿಂದ ದೂರವೇ ಉಳಿಯುತ್ತೇನೆ. ಗೌತಮಿಯನ್ನು ಹೋಗಿ ನಾನು ಕೇಳೋದೇ ಇಲ್ಲ, ಅದು ನನ್ನಿಂದ ಆಗೋದೇ ಇಲ್ಲ ಅಂತನೇ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ:'ನನಗೆ ದೇವಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ' ಎಂದ ಈ ನಟಿ ಹೇಳಿಕೆಗೆ ಫ್ಯಾನ್ಸ್ ಶಾಕ್...!


ಗೌತಮಿ ಜಾದವ್‌ ಮಂದಹಾಸ ಬೀರಿದ್ದಾರೆ. ಗೌತಮಿಯ ಈ ನಡವಳಿಕೆ ಮೋಕ್ಷಿತಾ ಪೈ ಸ್ಥಿತಿಗೆ ಕಾರಣವಾಯಿತೇನೋ? ಆದರೆ ಇವರ ನಗುವಿನಲ್ಲೇ ಸಾಕಷ್ಟು ಅರ್ಥ ಕೂಡಿದೆ. ಮೋಕ್ಷಿತಾ ಕಥೆ ಬೇರೆನೇ ಇದೆ. ಗೌತಮಿ ಜೊತೆ ಸೇರಿ ಆಟ ಆಡೋಕೆ ಸಾಧ್ಯವೇ ಇಲ್ಲ ಅನ್ನು ಅರ್ಥದಲ್ಲಿಯೇ ಹೇಳಿಕೊಂಡಿದ್ದಾರೆ.


ಈಗ ಬಿಗ್ ಬಾಸ್‌ ಒಂದು ಶಾಕ್‌ ನೀಡಿದೆ. ಆ ಶಾಕ್‌ ಏನು ಅಂದ್ರೆ, ನಮ್ಮ ನಿಯಮಗಳಿಗೆ ವಿರುದ್ದವಾಗಿ ನೀವು ದೊಡ್ಡ ನಿರ್ಧಾರ ತೆಗೆದುಕೊಂಡ್ರೆ ಅದಕ್ಕೆ ದೊಡ್ಡ ಬೆಲೆನೇ ಕಟ್ಟಬೇಕಾಗುತ್ತದೆ ಅಂತಲೇ ಸೂಚನೆ ನೀಡಿದ್ದಾರೆ. ಇದನ್ನು ಕೇಳಿದ ಉಗ್ರಂ ಮಂಜು ತಮ್ಮ ಎಂದಿನ ನಗುವಿನೊಂದಿಗೆ ಚಪ್ಪಾಳೆ ಖುಷಿ ವ್ಯಕ್ತಪಡಿಸಿದ್ದಾರೆ.


ಗೌತಮಿ ಈ ವಿಚಾರ ಕುರಿತು ಯಾವುದೇ ಮಾತನ್ನು ಹೇಳಿಕೊಂಡಿಲ್ಲ, ಅದರೆ ಮೋಕ್ಷಿತಾ ಪೈಗೆ ಎನೋ ಸಮಸ್ಯೆ ಕಾಡುತ್ತಿದೆ. ಸೆಲ್ಪ್ ರೆಸ್ಪೆಕ್ಟ್‌ ಅಂತಿದ್ದಾರೆ, ಗೌತಮಿಯಿಂದ ಕ್ಯಾಪ್ಟನ್‌ ಆಗೋದೇ ಆದ್ರೇ ಬೇಡ್ವೆ ಬೇಡ ಅಂತಲೂ ಹೇಳುತ್ತಿದ್ದಾರೆ. ಐಶ್ವರ್ಯಾ ಸಿಂಧೋಗಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಮೋಕ್ಷಿತಾ ಪೈ ಅದನ್ನು ಕೇಳ್ತಾನೆ ಇಲ್ಲ ಅನಿಸುತ್ತಿದೆ. ಒಟ್ಟಾರೆ ಈ ವಾರ ಮನೆಯ ಕ್ಯಾಪ್ಟನ್‌ ಆಟ ಬೇರೆ ರೀತಿನೇ ಇದ್ದು ಮಾಜಾ ಕೊಡುತ್ತೆ ಅನ್ನೋ ಕುತೂಹಲ ಮೂಡಿಸುತ್ತಿದೆ ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.