BBK OTT : ರಾಕೇಶ್ - ರೂಪೇಶ್ ನಡುವೆ ನಿಜವಾಗ್ಲೂ ನಡೀತಾ ಕಿರಿಕ್!?
Bigg Boss Kannada OTT : ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿರುತ್ತಾರೆ. ಈ ವೇಳೆ ಆಟ ಆಡುತ್ತಲೇ ರಾಕೇಶ್ ಹಾಗೂ ರೂಪೇಶ್ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ. ಬಳಿಕ ವಾಗ್ವಾದ ತಾರಕಕ್ಕೇರುತ್ತದೆ. ಈ ವೇಳೆ ಜೊತೆಯಲಿದ್ದ ಉಳಿದ ಸ್ಪರ್ಧಿಗಳು ಅಡ್ಡ ಬರುತ್ತಾರೆ.
Bigg Boss Kannada OTT : ಜೋಶ್ ಸಿನಿಮಾ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ನಟ ರಾಕೇಶ್ ಅಡಿಗ ಅವರು ಸದ್ಯ ಬಿಗ್ ಬಾಸ್ ಕನ್ನಡ ಒಟಿಟಿ ಶೋನಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇವರ ಜೊತೆಗೆ ಕರಾವಳಿಯ ಸೂಪರ್ ಸ್ಟಾರ್ ತುಳು ನಟ ರೂಪೇಶ್ ಶೆಟ್ಟಿ ಸಹ ದೊಡ್ಮನೆಯಲ್ಲಿದ್ದಾರೆ. ಕನ್ನಡ ಬಿಗ್ ಬಾಸ್ ಒಟಿಟಿಯಲ್ಲಿ ಸ್ಪರ್ಧೆಗಳೆಲ್ಲ ತಮ್ಮದೇ ಗೇಮ್ ಪ್ಲ್ಯಾನ್‌ನಿಂದ ಆಟ ಆಡುತ್ತಿದ್ದಾರೆ. ಇದರ ಮಧ್ಯೆ ಆಗಾಗ್ಗೆ ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಸಹ ಆಡುತ್ತಿದ್ದಾರೆ. ಅಲ್ಲದೇ, ಕೆಲವೊಮ್ಮೆ ಬಿಗ್ ಬಾಸ್ ಕಂಟೆಸ್ಟಂಟ್‌ಗಳಿಗೆ ಸೀಕ್ರೇಟ್ ಟಾಸ್ಕ್‌ನ್ನು ಕೂಡ ಕೋಡ್ತಾರೆ. ವೂಟ್ ಆ್ಯಪ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿ ಅಳು, ನಗುವಿನ ಜೊತೆ ಕಿತ್ತಾಟ ಕೂಡ ಶುರುವಾಗಿದೆ. ಇದೀಗ ರಾಕೇಶ್ - ರೂಪೇಶ್ ನಡುವೆ ದೊಡ್ಡ ಜಗಳವೇ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
Sonu Gowda: ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ನಡೀತಾರಾ ಸೋನು ಗೌಡ?
ಹೌದು, ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿರುತ್ತಾರೆ. ಈ ವೇಳೆ ಆಟ ಆಡುತ್ತಲೇ ರಾಕೇಶ್ ಹಾಗೂ ರೂಪೇಶ್ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ. ಬಳಿಕ ವಾಗ್ವಾದ ತಾರಕಕ್ಕೇರುತ್ತದೆ. ಈ ವೇಳೆ ಜೊತೆಯಲಿದ್ದ ಉಳಿದ ಸ್ಪರ್ಧಿಗಳು ಅಡ್ಡ ಬರುತ್ತಾರೆ. ಜಗಳ ಬಿಡಿಸಲು ಸಹ ಪ್ರಯತ್ನಿಸುತ್ತಾರೆ. ಆದರೆ ಇವರಿಬ್ಬರು ಮಾತ್ರ ಜಗಳ ಮುಂದುವರೆಸುತ್ತಾರೆ. ಬಳಿಕ ಇವರ ನಡುವಿನ ಈ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತದೆ. ಆ ವೇಳೆ ಜಸ್ವಂತ್ ಅಡ್ಡ ಬರುತ್ತಾರೆ. ತಕ್ಷಣ ರೂಪೇಶ್ ಹಾಗೂ ರಾಕೇಶ್ ಜೋರಾಗಿ ನಗುತ್ತಾ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ. ಇದನ್ನು ಕಂಡು ಮನೆಮಂದಿಗೆಲ್ಲ ಶಾಕ್ ಆಗುತ್ತದೆ.
ತಾರಕಕ್ಕೇರಿದ ಜಗಳ ಅಪ್ಪುಗೆಯಲ್ಲಿ ಅಂತ್ಯವಾಗಿದ್ದನ್ನು ಕಂಡು ಸ್ಪರ್ಧಿಗಳಿಗೆ ಆಶ್ಚರ್ಯವಾಗುತ್ತದೆ. ಇದರಿಂದ ರೂಪೇಶ್ ಹಾಗೂ ರಾಕೇಶ್ ನಿಜವಾಗ್ಲೂ ಜಗಳವಾಡಿದ್ದಾ ಅಥವಾ ಇಬ್ಬರು ಮನೆಯವರಿಗೆ ಚಮಕ್ ನೀಡಿದ್ದಾ ಇಲ್ಲವೇ ಬಿಗ್ ಬಾಸ್ ಏನಾದರೂ ಸೀಕ್ರೇಟ್ ಟಾಸ್ಕ್ ಕೊಟ್ಟಿದ್ರಾ ಎಂದು ಮನೆಯವರು ಯೋಚಿಸಲು ಆರಂಭಿಸುತ್ತಾರೆ. ಬಿಗ್ ಬಾಸ್ ಒಟಿಟಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಅನೇಕರು ಬಂದಿದ್ದಾರೆ. ಶುರುವಾದ ಎರಡೇ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಮೊದಲ ದಿನ ಕಣ್ಣೀರ ಕಹಾನಿ ನಡೆಯಿತು. ಎರಡನೇ ದಿನ ಜಗಳದಲ್ಲೇ ದಿನ ಕಳೆಯಿತು. ಇನ್ನೂ ಮುಂದಿನ 40 ದಿನಗಳ ಕಾಲ ಈ ಶೋ ಯಾವ ರೀತಿ ಸಾಗಲಿದೆ ಎಂಬ ಕುತೂಹಲ ನೋಡುಗರನ್ನು ಕಾಡುತ್ತಿದೆ.
ಇದನ್ನೂ ಓದಿ : BBK OTT: ಬಿಗ್ಬಾಸ್ ಮನೆಯೊಳಗೆ ಜಶ್ವಂತ್ - ನಂದು.. ಮಾಡ್ತಾರಾ ಮೋಡಿ ರೋಡೀಸ್ ಜೋಡಿ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.