BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ - ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?

Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಭರ್ಜರಿಯಾಗಿ ಗ್ರ್ಯಾಂಡ್‌ ಓಪನಿಂಗ್‌ ಆಗಿದ್ದು, ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ. ಬಿಗ್‌ ಬಾಸ್‌ ಮಿನಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ. 

Written by - Chetana Devarmani | Last Updated : Aug 8, 2022, 10:12 AM IST
  • ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​
  • ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ
  • ಬಿಗ್​ಬಾಸ್​ ​ಮನೆಯೊಳಗೆ ರೋಡೀಸ್​ ಜೋಡಿ ಜಶ್ವಂತ್ - ನಂದು
BBK OTT: ಬಿಗ್​ಬಾಸ್​ ​ಮನೆಯೊಳಗೆ ಜಶ್ವಂತ್ - ನಂದು.. ಮಾಡ್ತಾರಾ ಮೋಡಿ ರೋಡೀಸ್​ ಜೋಡಿ?
ಬಿಗ್ ಬಾಸ್​

Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್​ ಒಟಿಟಿ ಭರ್ಜರಿಯಾಗಿ ಗ್ರ್ಯಾಂಡ್‌ ಓಪನಿಂಗ್‌ ಆಗಿದ್ದು, ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ. ಬಿಗ್‌ ಬಾಸ್‌ ಮಿನಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ. ಫಿಟ್‌ನೆಸ್ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಜಶ್ವಂತ್ ಬೋಪಣ್ಣ, ಅನೇಕ ಟೆಲಿವಿಶನ್ ಬ್ರ್ಯಾಂಡ್​ಗಳ ಜೊತೆ ಕೆಲಸ ಮಾಡಿದ್ದಾರೆ. 23 ವರ್ಷದ ಜಶ್ವಂತ್ ಬೋಪಣ್ಣ ಬೆಂಗಳೂರಿನಲ್ಲಿ ಜನಿಸಿದ್ದು, ಇಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ತಮ್ಮ ವೃತ್ತಿಜೀವನವನ್ನು ಫಿಟ್ನೆಸ್ ತರಬೇತುದಾರ ಮತ್ತು ಫಿಟ್ನೆಸ್ ಮಾಡೆಲ್ ಆಗಿ ಪ್ರಾರಂಭಿಸಿದರು. ಸರಳವಾದ ಡ್ಯಾನ್ಸ್ ಸ್ಟೆಪ್ಸ್ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುವುದರಲ್ಲಿ ಜಶ್ವಂತ್‌ ಫೇಮಸ್.‌ 

Add Zee News as a Preferred Source

ಇದನ್ನೂ ಓದಿ: Keerthy Suresh‌ Marriage : ಶೀಘ್ರದಲ್ಲೇ ನಟಿ ಕೀರ್ತಿ ಸುರೇಶ್ ಮದುವೆ

ಎಂಟಿವಿ ರೋಡೀಸ್ ಸೀಸನ್ 18 ರಲ್ಲಿ ಭಾಗವಹಿಸಿದ್ದ ಜಶ್ವಂತ್, ರನ್ನರ್ ಅಪ್​ ಆಗಿದ್ದರು. ಜಶ್ವಂತ್ ರಂಗಭೂಮಿ ಕಲಾವಿದರೂ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಸಾವಿರಾರು ಜನರು ಫಾಲೋ ಮಾಡುತ್ತಿದ್ದಾರೆ. ಇನ್ನು ಮತ್ತೊಬ್ಬ ಸ್ಪರ್ಧಿ ನಂದಿನಿ ಕೂಡ ರೋಡೀಸ್​ 2022ರ ವಿನ್ನರ್‌ ಆಗಿದ್ದಾರೆ. ಇಲ್ಲಿ ವಿಶೇಷವೆಂದರೆ ಜಶ್ವಂತ್ ಮತ್ತು ನಂದಿನಿ ಸದ್ಯ ಡೇಟಿಂಗ್ ಮಾಡುತ್ತಿದ್ದಾರೆ. ಮೂಲತಃ ಬೆಂಗಳೂರಿನವರಾದ ನಂದಿನಿ ಚಿನಕುರಳಿ ನಂದು ಎಂದೇ ಫೇಮಸ್‌ ಆಗಿದ್ದಾರೆ​. 25 ವರ್ಷದ ನಂದಿನಿ ಡ್ಯಾನ್ಸರ್​, ಫುಟ್​ಬಾಲರ್, ಅಥ್ಲೆಟ್​ ಹಾಗೂ ಫಿಟ್​ನೆಸ್​ ಮಾಡೆಲ್​ ಆಗಿದ್ದಾರೆ. 

ಬೈಕ್​ ರೈಡ್​, ಟ್ರೆಕ್ಕಿಂಗ್ ಹೀಗೆ ಅಡ್ವೆಂಚರ್‌ ಹವ್ಯಾಸಗಳನ್ನು ನಂದಿನಿ ಹೊಂದಿದ್ದಾರೆ. ಸದ್ಯ ಬಿಗ್ ​ಬಾಸ್​ ಕನ್ನಡ ಒಟಿಟಿ ಸೀಸನ್‌ 1 ಗೆ ಈ ಜೋಡಿ ಕಾಲಿಟ್ಟಿದ್ದು, ಎಲ್ಲರ ಚಿತ್ತ ಸದ್ಯ ಇವರ ಮೇಲಿದೆ. ಆರ್ಯವರ್ಧನ್​ ಗುರೂಜಿ, ಸೋನು ಗೌಡ, ಸ್ಫೂರ್ತಿ ಗೌಡ, ನಂದು-ಜಶ್ವಂತ್​, ಚೈತ್ರಾ ಹಳ್ಳಿಕೇರಿ , ಅಕ್ಷತಾ ಕುಕ್ಕಿ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಸೋಮಣ್ಣ, ರಾಕೇಶ್ ಅಡಿಗ, ಸಾನ್ಯಾ, ಉದಯ್ ಸೂರ್ಯ ಮತ್ತು ರೂಪೇಶ್​ ಶೆಟ್ಟಿ ದೊಡ್ಮನೆಯಲ್ಲಿ ಲಾಕ್‌ ಆಗಿದ್ದು, ಯಾರೆಲ್ಲ ಪ್ರೇಕ್ಷಕ ಪ್ರಭುವಿನ ಮನಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

ಇದನ್ನೂ ಓದಿ: BBK OTT: ಭಾರತದ ರಾಷ್ಟ್ರಪತಿ ನರೇಂದ್ರ ಮೋದಿ ಎಂದ ‘ಬಿಗ್ ಬಾಸ್’ ಸ್ಪರ್ಧಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News