Bigg Boss Kannada OTT : ಬಿಗ್ ಬಾಸ್ ಮನೆಯಿಂದ ಒಂದೇ ದಿನ ಇಬ್ಬರು ಸ್ಪರ್ಧಿಗಳು ಔಟ್!
Bigg Boss Kannada OTT : ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಶುರುವಾಗಿ ಎರಡು ವಾರಗಳು ಉರುಳಿವೆ. ವಾದ, ವಿವಾದ, ಮನರಂಜನೆ, ಹಾಸ್ಯ, ಎಲಿಮಿನೇಷನ್, ನಗು, ಅಳು ಎಲ್ಲವನ್ನು ಮನೆ ಮಂದಿ ನೋಡಾಗಿದೆ. ಬಿಗ್ ಬಾಸ್ ಮನೆಯಿಂದ ಎರಡನೇ ವಾರದ ಮುಕ್ತಾಯದ ವೇಳೆಗೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ.
Bigg Boss Kannada OTT : ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಮಿನಿ ಬಿಗ್ ಬಾಸ್ ಕನ್ನಡ ಪ್ರೇಕ್ಷಕರನ್ನು ಸಖತ್ ಆಗಿ ರಂಜಿಸುತ್ತಿದೆ. ಎರಡನೇ ವಾರದ ಎಲಿಮಿನೇಷನ್ ಕೂಡ ನಿನ್ನೆ ನಡೆದಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್ಗೆ ನಾಮಿನೇಟ್ ಆಗಿದ್ದರು. ಅವರಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಹೊರಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ಬಿಗ್ ಬಾಸ್ ನೋಡುಗರಿಗೆ ಶಾಕ್ ಒಂದು ಕಾದಿತ್ತು. ನಿನ್ನೆ ಒಂದೇ ದಿನ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದಾರೆ. ಕಳೆದ ವಾರದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಭುಜಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಅರ್ಜುನ್ ರಮೇಶ್, ಹ್ಯಾಂಗಿಂಗ್ಸ್ ಹಾಕಿಕೊಂಡೇ ಒಂದು ವಾರ ಕಳೆದಿದ್ದಾರೆ. ಆದರೆ ಅವರಿಗೆ ನೋವು ಮಾತ್ರ ಕಡಿಮೆ ಆಗಿರಲಿಲ್ಲ. ಇದೇ ಕಾರಣಕ್ಕೆ ನಾಮಿನೇಟ್ ಆಗದೇ ಇದ್ದರು ಸಹ ಅರ್ಜುನ್ ರಮೇಶ್ ಮನೆಯಿಂದ ಹೊರ ನಡೆಯಬೇಕಾಯಿತು. ಇನ್ನೂ ಬಿಗ್ ಬಾಸ್ ಸ್ಪರ್ಧಿಗಳಿಂದ ನಾಮಿನೇಟ್ ಆಗಿ, ವೀಕ್ಷಕರಿಂದ ಅತೀ ಕಡಿಮೆ ವೋಟ್ಸ್ ಬಂದ ಸ್ಫೂರ್ತಿ ಗೌಡ ಈ ವಾರ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿದ್ದಾರೆ.
ಇದನ್ನೂ ಓದಿ:ಅಜ್ಜನಾದ ಅನಿಲ್ ಕಪೂರ್, ತಾಯಿಯಾದ ಸೋನಂ ಕಪೂರ್...!
ಎರಡನೇ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಫೂರ್ತಿ ಗೌಡ ಅಷ್ಟೊಂದು ಉತ್ಸಾಹ ತೋರಿರಲಿಲ್ಲ. ಆಟದಲ್ಲಿ ಅವಕಾಶ ಸಿಕ್ಕರೂ ಅದನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಸ್ಫೂರ್ತಿ ಗೌಡ ವಿಫಲರಾಗಿದ್ದರು. ವೀಕ್ಷಕರನ್ನ ಸೆಳೆಯುವಲ್ಲಿ ಸ್ಫೂರ್ತಿ ಗೌಡ ಅಷ್ಟೇನು ಕರಾಮತ್ತು ಮಾಡಲಿಲ್ಲ. ಇದೇ ಅಂಸಗಳು ಈ ವಾರ ಸ್ಫೂರ್ತಿಗೌಡ ಮನೆಯಿಂದ ಹೊರ ನಡೆಯಲು ಕಾರಣವಾಗಿವೆ. ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ, ಸಾನ್ಯ ಅಯ್ಯರ್, ಸೋಮಣ್ಣ ಮಾಚಿಮಾಡ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಅಕ್ಷತಾ ಕುಕ್ಕಿ, ಜಯಶ್ರೀ ಆರಾಧ್ಯ ಮತ್ತು ಸ್ಫೂರ್ತಿ ಗೌಡ ನಾಮಿನೇಟ್ ಆಗಿದ್ದರು. ಇತರರಿಗೆ ಹೋಲಿಸಿದರೆ ಸ್ಫೂರ್ತಿ ಗೌಡ ಅವರಿಗೆ ಕಡಿಮೆ ವೋಟ್ ಬಂದಿದೆ. ಕಡಿಮೆ ವೋಟ್ ಬಂದಿರುವ ಸ್ಪರ್ಧಿ ಹೊರನಡೆಯುವುದು ಬಿಗ್ ಬಾಸ್ ಮನೆಯ ರೂಲ್ಸ್ ಆದ ಕಾರಣ ಈ ವಾರ ಸ್ಫೂರ್ತಿ ಗೌಡ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇನ್ನೂ ಈ ವಾರ ಕಳಪೆ ಹಣೆಪಟ್ಟಿ ಕೂಡ ಸ್ಫೂರ್ತಿ ಗೌಡ ಅವರಿಗೆ ಸಿಕ್ಕಿತ್ತು. ಟಾಸ್ಕ್‌ಗಳಲ್ಲಿ ಸರಿಯಾಗಿ ಪರ್ಫಾಮ್ ಮಾಡದ ಕಾರಣ ಸ್ಫೂರ್ತಿ ಗೌಡ ಅವರನ್ನು ಮನೆ ಮಂದಿ ಜೈಲಿಗೆ ಕಳುಹಿಸಿದ್ದರು. ಎಲ್ಲೋ ಒಂದು ಕಡೆ ಏರಡನೇ ವಾರ ತಾವು ಪ್ರಬಲ ಸ್ಪರ್ಧಿ ಎಂಬುದನ್ನ ಪ್ರೂವ್ ಮಾಡುವಲ್ಲಿ ಸ್ಫೂರ್ತಿ ಗೌಡ ಹಿಂದೆಬಿದ್ದರು. ಈ ಎಲ್ಲ ಕಾರಣಗಳಿಂದ ಸ್ಫೂರ್ತಿ ಅವರಿಗೆ ಕಡಿಮೆ ವೋಟ್ ಬಂದಿರಬಹುದು.
ಇದನ್ನೂ ಓದಿ: Trisha Krishnan: ರಾಜಕೀಯಕ್ಕೆ ನಟಿ ತ್ರಿಷಾ ಕೃಷ್ಣನ್ ಎಂಟ್ರಿ.!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.