ಅಜ್ಜನಾದ ಅನಿಲ್ ಕಪೂರ್, ತಾಯಿಯಾದ ಸೋನಂ ಕಪೂರ್...!

ಬಾಲಿವುಡ್ ನಟಿ ಸೋನಂ ಕಪೂರ್ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.ಸೋನಂ ಕಪೂರ್ ಅವರ ತಾಯಿ ಸುನೀತಾ ಕಪೂರ್ ಅವರನ್ನು ಅಭಿನಂದಿಸುತ್ತಿರುವ ಸೆಲೆಬ್ರಿಟಿಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Aug 20, 2022, 04:31 PM IST
  • ಗಂಡುಮಗುವಿಗೆ ಜನ್ಮ ನೀಡುವ ಮೊದಲು ಸೋನಂ ಕಪೂರ್ ಫೋಟೋ ಶೂಟ್ ಮೂಲಕ ಗಮನ ಸೆಳೆದಿದ್ದರು.
  • ಸೋನಂ ಹಾಗೂ ಆನಂದ್ ಅಹುಜಾ ಒಂದೆರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಮೇ 2018 ರಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದರು.
ಅಜ್ಜನಾದ ಅನಿಲ್ ಕಪೂರ್, ತಾಯಿಯಾದ ಸೋನಂ ಕಪೂರ್...!  title=

ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.ಸೋನಂ ಕಪೂರ್ ಅವರ ತಾಯಿ ಸುನೀತಾ ಕಪೂರ್ ಅವರನ್ನು ಅಭಿನಂದಿಸುತ್ತಿರುವ ಸೆಲೆಬ್ರಿಟಿಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಸೋನಂ ಅವರ ತಂದೆ ಅನಿಲ್ ಕಪೂರ್ ಅವರೊಂದಿಗೆ ಜಗ್‌ಜಗ್ ಜೀಯೋದಲ್ಲಿ ನಟಿಸಿರುವ ಹಿರಿಯ ನಟಿ ನೀತು ಕಪೂರ್ ಈಗ ಅವರು ಪೋಷಕರ ಹೇಳಿಕೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುವ ಮೂಲಕ ಸುನೀತಾ ಮತ್ತು ಅನಿಲ್ ಕಪೂರ್ ಅವರನ್ನು ಅಭಿನಂದಿಸಿದ್ದಾರೆ.

"20.08.2022 ರಂದು, ನಾವು ನಮ್ಮ ಸುಂದರ ಗಂಡು ಮಗುವನ್ನು ತಲೆಬಾಗಿ ಮತ್ತು ಹೃದಯದಿಂದ ಸ್ವಾಗತಿಸಿದ್ದೇವೆ. ಈ ಪ್ರಯಾಣದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲಾ ವೈದ್ಯರು, ದಾದಿಯರು, ಸ್ನೇಹಿತರು ಮತ್ತು ಕುಟುಂಬಕ್ಕೆ ಧನ್ಯವಾದಗಳು.ಇದರಿಂದ ನಮ್ಮ ಜೀವನವು ಶಾಶ್ವತವಾಗಿ ಬದಲಾಗಿದೆ ಎಂದು ಸೋನಂ ಹಾಗೂ ಆನಂದ್ ದಂಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಂಡುಮಗುವಿಗೆ ಜನ್ಮ ನೀಡುವ ಮೊದಲು ಸೋನಂ ಕಪೂರ್ ಫೋಟೋ ಶೂಟ್ ಮೂಲಕ ಗಮನ ಸೆಳೆದಿದ್ದರು.ಸೋನಂ ಹಾಗೂ ಆನಂದ್ ಅಹುಜಾ ಒಂದೆರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಮೇ 2018 ರಲ್ಲಿ ಮುಂಬೈನಲ್ಲಿ ಮದುವೆಯಾಗಿದ್ದರು.ಆನಂದ್ ಅಹುಜಾ ಫ್ಯಾಶನ್ ಲೇಬಲ್ ಭಾನೆ ಮತ್ತು ಸ್ನೀಕರ್ ಬೊಟಿಕ್ ವೆಗ್‌ನಾನ್‌ವೆಗ್ ಅನ್ನು ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News