Bigg Boss Kannada OTT : ಬಿಗ್ ಬಾಸ್ ಕನ್ನಡ OTT ಸೀಸನ್‌ನ ಮೂರನೇ ಎಲಿಮಿನೇಷನ್‌ ನಿನ್ನೆ ನಡೆದಿದೆ. ನಿನ್ನೆ ನಡೆದ ವೀಕೆಂಡ್ ಸ್ಪೆಷಲ್ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಟ ಉದಯ್ ಸೂರ್ಯ ಎಲಿಮಿನೇಟ್‌ ಆಗಿದ್ದಾರೆ. ಆರ್ಯವರ್ಧನ್, ಸೋಮಣ್ಣ ಮಾಚಿಮಾಡ, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೆರೆ, ಜಯಶ್ರೀ ಆರಾಧ್ಯ, ಅಕ್ಷತಾ ಮತ್ತು ಉದಯ ಸೂರ್ಯ ಈ ವಾರ ನಾಮಿನೇಟ್‌ ಆಗಿದ್ದರು. ಒಬ್ಬೊಬ್ಬರಾಗಿ ಸೇಫ್‌ ಆಗುತ್ತಾ ಸಂಚಿಕೆ ಮುಂದುವರೆದಂತೆ ಜಯಶ್ರೀ ಆರಾಧ್ಯ ಮತ್ತು ಉದಯ್ ಸೂರ್ಯ ಕೊನೆಯ ಎರಡು ಸ್ಥಾನದಲ್ಲಿದ್ದರು. ಕೊನೆಗೆ ಸುದೀಪ್ ಅವರು ಉದಯ್ ಸೂರ್ಯ ಈ ವಾರ ಎಲಿಮಿನೇಟ್‌ ಆದ ಸ್ಪರ್ಧಿ ಎಂದು ಘೋಷಿಸಿದರು ಮತ್ತು ಜಯಶ್ರೀ ಸುರಕ್ಷಿತವಾಗಿದ್ದಾರೆ ಎಂದು ಅಭಿನಂದಿಸಿದರು. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ಮನೆಯ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಜಯಶ್ರೀ ಅವರನ್ನು ಬಿಗ್ ಬಾಸ್ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದಾರೆ ಎಂದು ಸುದೀಪ್ ನೆನಪಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತನ ನಿರ್ದೇಶನದಲ್ಲಿ ಮೂಡಿಬರಲಿದೆ “ಭಾವಪೂರ್ಣ” ಸಿನಿಮಾ: ಭಾವನೆಗಳೇ ಇಲ್ಲಿ ಪಾತ್ರಗಳು


ಎಲಿಮಿನೇಟ್‌ ಆದ ಬಳಿಕ ಉದಯ್ ತುಂಬಾ ಭಾವುಕರಾದರು. ಅವರು ಮನೆಯಿಂದ ಹೊರಬರಲು ಬ್ಯಾಗ್‌ ಪ್ಯಾಕ್ ಮಾಡಲು ಪ್ರಾರಂಭಿಸಿದರು ಮತ್ತು ಭಾವುಕರಾದರು. ಹಿಂದಿನ ದಿನ ಸಾನ್ಯಾಳ ಬಗ್ಗೆ ತಿಳಿಯದೆ ಕೆಟ್ಟ ಕಾಮೆಂಟ್ ಅನ್ನು ಪಾಸ್‌ ಮಾಡಿದ್ದನ್ನು ನೆನಪಿಸಿಕೊಂಡ ಉದಯ್ ಕಣ್ಣೀರು ಸುರಿಸಿದರು ಮತ್ತು ಶೋನಲ್ಲಿ ಸಾನ್ಯಾ ಪಾತ್ರವನ್ನು ನಿಂದಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದರು. ಅವರು ತನ್ನ ಒಳ್ಳೆಯ ಸ್ನೇಹಿತೆ ಅಕ್ಷತಾ ಕುಕಿಗೆ ಅದೇ ಹೇಳಿದರು ಮತ್ತು ತನ್ನನ್ನು ನಂಬುವಂತೆ ವಿನಂತಿಸಿದರು.


ಮತ್ತೊಂದೆಡೆ ಸೋಮಣ್ಣ ಅವರು ಬಿಗ್ ಬಾಸ್ ಮನೆಯೊಳಗೆ ನಡೆದ ಎಲ್ಲವನ್ನೂ ಮರೆತುಬಿಡಿ ಎಂದು ಉದಯ್ ಅವರನ್ನು ಕೇಳಿಕೊಂಡರು ಮತ್ತು ಬಿಗ್ ಬಾಸ್ ನಂತರದ ಅವರ ವೃತ್ತಿಜೀವನದಲ್ಲಿ ಎರಡನೇ ಇನ್ನಿಂಗ್ಸ್‌ಗೆ ಶುಭ ಹಾರೈಸಿದರು. ಉದಯ್ ಸೂರ್ಯ ಭಾರವಾದ ಹೃದಯದಿಂದ ಮನೆಯಿಂದ ಹೊರಬಂದರು.


ತರಾಟೆಗೆ ತೆಗೆದುಕೊಂಡ ಕಿಚ್ಚ:


ನಿನ್ನೆ ವಾರದ ಪಂಚಾಯಿತಿ ವೇಳೆ ಕಿಚ್ಚ ಸುದೀಪ್ ಅವರು ಜಯಶ್ರೀ ಅವರ ಪ್ರದರ್ಶನದ ಬಗ್ಗೆ ತರಾಟೆಗೆ ತೆಗೆದುಕೊಂಡರು. ಕ್ಯಾಪ್ಟನ್‌ಗಾಗಿ ನಡೆದ ಆಟದ ವೇಳೆ ಡಿಯೋಡ್ರಂಟ್‌ ಸ್ಪ್ರೇ ಮಾಡಿದ್ದಕ್ಕಾಗಿ ಜಯಶ್ರೀ ಕಳಪೆ ಬೋರ್ಡ್‌ ಸ್ವೀಕರಿಸಿ ಜೈಲಿನಲ್ಲಿರಬೇಕಾಯಿತು. ಇದೇ ಕಾರಣಕ್ಕೆ ಕಿಚ್ಚ ಸುದೀಪ್‌ ಸಹ ಜಯಶ್ರೀ ಅವರನ್ನ ತರಾಟೆಗೆ ತೆಗೆದುಕೊಂಡರು. ಆದರೆ ವಾರದ ಪ್ರಮುಖ ಅಂಸ ಎಂದರೆ ಅದು ಉದಯ್‌ ಸೂರ್ಯ ಅವರು ಸಾನ್ಯಾ, ಜಶ್ವಂತ್‌, ರೂಪೇಶ್‌ ಬಗ್ಗೆ ಮಾತನಾಡಿರುವುದು. ಈ ಪರಿಸ್ಥಿತಿಯನ್ನು ಚೈತ್ರಾ ನಿಭಾಯಿಸಿದ ರೀತಿಗೆ ಸುದೀಪ್ ಶ್ಲಾಘನೆ ವ್ಯಕ್ತಪಡಿಸಿದರು. 


ಬಿಗ್ ಬಾಸ್ ಕನ್ನಡ OTT ಯ ಮೊದಲ ಸೀಸನ್‌ನ ಅರ್ಧದಷ್ಟು ಮುಕ್ತಾಯವಾಘಿದ್ದು, ಕೇವಲ 11 ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಲೋಕೇಶ್ ಕುಮಾರ್ ಮತ್ತು ಅರ್ಜುನ್ ರಮೇಶ್ ಅವರು ವೈದ್ಯಕೀಯ ಕಾರಣಗಳಿಂದ ನಿರ್ಗಮಿಸಬೇಕಾಯಿತು. ಇನ್ನೂ ಕಿರಣ್ ಮತ್ತು ಸ್ಪೂರ್ತಿ ಗೌಡ ಎಲಿಮಿನೇಟ್ ಆಗಿದ್ದರು. ಇದೀಗ ಉದಯ್‌ ಸೂರ್ಯ ಮನೆಯಿಂದ ಹೊರಬಂದಿದ್ದಾರೆ. 


ಇದನ್ನೂ ಓದಿ: ಬ್ರೇಕಪ್‌ ಮಾಡಿಕೊಂಡ್ರಾ ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್..?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.