ಬ್ರೇಕಪ್‌ ಮಾಡಿಕೊಂಡ್ರಾ ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್..?

Written by - Malathesha M | Edited by - Manjunath N | Last Updated : Aug 26, 2022, 06:14 PM IST
  • ಇದೀಗ ಸಾರಾ & ಗಿಲ್ ಲವ್‌ ಬ್ರೇಕ್‌ ಆಗಿದೆ ಎಂಬ ಸುದ್ದಿ ಜೋರಾಗಿದೆ.
  • ಮತ್ತೊಂದ್ಕಡೆ ಸೋಷಿಯಲ್‌ ಮೀಡಿಯಾ‌ ಇವರಿಬ್ರ ಲವ್ ಬ್ರೇಕ್‌ ಅಪ್‌ ಸುದ್ದಿಗೆ ವೇದಿಕೆ ಒದಗಿಸಿಕೊಟ್ಟಿದೆ.
ಬ್ರೇಕಪ್‌ ಮಾಡಿಕೊಂಡ್ರಾ ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್..? title=

ಭಾರತೀಯ ಕ್ರಿಕೆಟ್‌ನ ಅನಭಿಷಿಕ್ತ ದೊರೆ, ಕ್ರಿಕೆಟ್‌ ಲೋಕದ ದೇವರು ಸಚಿನ್‌ ಪುತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ನಲ್ಲಿದ್ದಾರೆ. ಅಷ್ಟಕ್ಕೂ ಸಾರಾ ತೆಂಡೂಲ್ಕರ್‌ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಅಟ್‌ ದಿ ಸೇಮ್‌ ಟೈಂ ಭಾರತ ಕ್ರಿಕೆಟ್‌ ತಂಡದ ಯುವ ಆಟಗಾರನ ಹೆಸರು ಕೂಡ ಈ ವಿಚಾರದಲ್ಲಿ ತಳುಕು ಹಾಕಿಕೊಂಡಿದೆ.

ಇದನ್ನೂ ಓದಿ: Video : ಪಾಕ್ ಕ್ಯಾಪ್ಟನ್ ಬಾಬರ್ ಅಜಂ ಭೇಟಿ ಮಾಡಿದ ಕಿಂಗ್ ಕೊಹ್ಲಿ!

ಲವ್‌ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ..? ಅದರಲ್ಲೂ ಯವ್ವನ ಇರೋದೆ ಲವ್‌ ಮಾಡೋಕೆ ಅಂತಾ ಕೆಲವರು ತಪ್ಪಾಗಿ ತಿಳ್ಕೊಂಡಿರ್ತಾರೆ. ಒಟ್ಟಾರೆ ನೋಡೋದಾದ್ರೆ ಯವ್ವನವೇ ಪ್ರೇಮಿಗಳಿಗೆ ಪಾಳು ಬಾವಿ ಇದ್ದಂತೆ. ಇನ್ನು ಸಿನಿಮಾ ಮಂದಿ, ಸೆಲೆಬ್ರಿಟಿಗಳಿಗೆ ಲವ್‌ & ಬ್ರೇಕ್‌ ಮಾಮೂಲಿ. ಹೀಗೆ ಲವ್ವಲ್ಲಿ ಬಿದ್ದಿದ್ದ ಇಬ್ಬರು ಪ್ರೇಮಿಗಳು ಬ್ರೇಕ್‌ ಅಪ್‌ ಮಾಡಿಕೊಂಡಿದ್ದಾರೆಂಬ ಗಾಸಿಪ್‌ ಬಾಲಿವುಡ್‌ ಗಲ್ಲಿಯಲ್ಲಿ ಜೋರಾಗಿದೆ. ಇದು ಮಾಮೂಲಿ ಲವ್‌ ಸ್ಟೋರಿ ಅಲ್ಲ, ಸಾರಾ ತೆಂಡೂಲ್ಕರ್ & ಶುಭಮನ್ ಗಿಲ್ ಬ್ರೇಕಪ್‌ ಸ್ಟೋರಿ ಅಂತೆ.

ಪ್ರೀತಿ ಸತ್ತೋಯ್ತಾ..?
ಸಚಿನ್‌ ತೆಂಡೂಲ್ಕರ್ ಪುತ್ರಿ ಹಾಗೂ ಬಾಲಿವುಡ್‌ ಫ್ಯೂಚರ್‌ ಅಂತಾನೇ ಸದ್ದು ಮಾಡುತ್ತಿರುವ ಸಾರಾ ತೆಂಡೂಲ್ಕರ್ ಲವ್ ಸ್ಟೋರಿ ಆವಾಗಾವಾಗ ಚರ್ಚೆಗೆ ಬರ್ತಿರುತ್ತೆ. ಸಾರಾ & ಶುಭಮನ್ ಗಿಲ್ ಲವ್ವಲ್ಲಿ ಬಿದ್ದಿದ್ದಾರೆಂಬ ಬಗ್ಗೆ ಗಾಸಿಪ್‌ ಓಡಾಡೋಕೆ ಶುರುವಾಗಿ ವರ್ಷಗಳೇ ಕಳೆದಿವೆ. ಆದರೆ ಇದೀಗ ಸಾರಾ & ಗಿಲ್ ಲವ್‌ ಬ್ರೇಕ್‌ ಆಗಿದೆ ಎಂಬ ಸುದ್ದಿ ಜೋರಾಗಿದೆ. ಮತ್ತೊಂದ್ಕಡೆ ಸೋಷಿಯಲ್‌ ಮೀಡಿಯಾ‌ ಇವರಿಬ್ರ ಲವ್ ಬ್ರೇಕ್‌ ಅಪ್‌ ಸುದ್ದಿಗೆ ವೇದಿಕೆ ಒದಗಿಸಿಕೊಟ್ಟಿದೆ. ಸಾರಾ & ಗಿಲ್ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದು, ‌ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರ ಪೋಸ್ಟ್‌ಗಳು ಕೂಡ ಈ ವದಂತಿಗೆ ಪೂರಕವಾಗಿದೆ.

ಇದನ್ನೂ ಓದಿ: Team India: ‘ನನಗೆ 35 ವರ್ಷ, 75 ಅಲ್ಲ…’ ಟೀ ಇಂಡಿಯಾದಲ್ಲಿ ಸಿಗದ ಅವಕಾಶಕ್ಕೆ ಆಕ್ರೋಶ..!

ಅಂದಹಾಗೆ ಶುಭಮನ್ ಗಿಲ್ ಭಾರತೀಯ ಕ್ರಿಕೆಟ್‌ ತಂಡದಲ್ಲಿ ತಮ್ಮದೇ ಛಾಪು ಮೂಡಿಸಿದ್ದರೆ, ಮತ್ತೊದು ಕಡೆ ಸಾರಾ ತೆಂಡೂಲ್ಕರ್ ಬಾಲಿವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಜಾಹೀರಾತಿನಲ್ಲಿ ನಟಿಸಿರುವ ಸಾರಾ ತೆಂಡೂಲ್ಕರ್ ಅಪ್ಪನಿಗೆ ತಕ್ಕ ಮಗಳಾಗುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಸಾರಾ & ಗಿಲ್ ಬ್ರೇಕಪ್‌ ಸ್ಟೋರಿ ಸಖತ್‌ ಸದ್ದು ಮಾಡುತ್ತಿದೆ. ಈ ಕುರಿತು ಸಾರಾ ಆಗಲಿ ಅಥವಾ ಗಿಲ್ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News