Bigg Boss Season 10 : ಬಹು ನಿರೀಕ್ಷಿತ ಟಿವಿ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಶೀಘ್ರದಲ್ಲೇ ಶುರುವಾಗಲಿದೆ. ಕಲರ್ಸ್‌ ಕನ್ನಡ ವಾಹಿನಿ ಈ ಬಗ್ಗೆ ಅಪ್‌ಡೇಟ್‌ ನೀಡಿದೆ. ಬಿಗ್‌ಬಾಸ್‌ ರಿಯಾಲಿಟಿ ಶೋ ತಯಾರಿ ತೆರೆಮರೆಯಲ್ಲಿ ಶುರುವಾಗಿದೆ. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಎರಡನೇ ಪ್ರೋಮೋ ಹೊರಬಿದ್ದಿದೆ. ಇದರಲ್ಲಿ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ. 
 
ನಟ ಸುದೀಪ್​ ಮ್ಯಾಕ್ಸ್‌ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮ್ಯಾಕ್ಸ್‌ ಚಿತ್ರದ ಶೂಟಿಂಗ್​ ಶುರುವಾಗಿದೆ. ಇದೆ ಜೊತೆಗೆ ಬಿಗ್​ ಬಾಸ್​ ನಿರೂಪಣೆಯನ್ನೂ ಸುದೀಪ್‌ ಮಾಡಲಿದ್ದಾರೆ. ನಟ ಸುದೀಪ್‌ ಇರುವ ಹೊಸ ಪ್ರೋಮೋವನ್ನು ಕಲರ್ಸ್‌ ಕನ್ನಡ ರಿಲೀಸ್‌ ಮಾಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟಗರು ಪಲ್ಯ ಸಿನಿಮಾದ ಎರಡನೇ ಹಾಡು ರಿಲೀಸ್...ಸೂರ್ಯಕಾಂತಿ ನಾನು ಎಂದು ಕುಣಿದ ಲವ್ಲಿಸ್ಟಾರ್ ಪುತ್ರಿ 


 



 


ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಹೊಸ ಪ್ರೋಮೋ ರಿಲೀಸ್‌ ಆಗಿದ್ದು, 10 ನೇ ಸೀಸನ್‌ ಆದ ಕಾರಣ ಅದ್ಧೂರಿಯಾಗಿ ನಡೆಯಲಿದೆ. ಊರ ಹಬ್ಬಕ್ಕೆ ಇಲ್ಲಿದೆ ರೀಸನ್, ಶುರುವಾಗ್ತಿದೆ HAPPY BIGG BOSS KANNADA ಹತ್ತನೇ ಸೀಸನ್! ಎಂಬ ಶೀರ್ಷಿಕೆಯೊಂದಿಗೆ ಹೊಸ ಪ್ರೋಮೋವನ್ನು ಶೇರ್‌ ಮಾಡಿದೆ. 


ಪ್ರತಿಬಾರಿಯಂತೆ ಈ ಬಾರಿಯೂ ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೆ ವಿತ್ ಸುದೀಪ ಅಂತಹ ಸಂಚಿಕೆಗಳಲ್ಲಿ ನಟ ಸುದೀಪ್‌ರನ್ನು ನೋಡಲು ಫ್ಯಾನ್ಸ್‌ ಉತ್ಸುಕರಾಗಿದ್ದಾರೆ. ವಾರಕ್ಕೊಂದು ಎಲಿಮಿನೇಷನ್‌ ಜೊತೆ ಮೈ ನವಿರೇಳಿಸುವ ಟಾಸ್ಕ್‌ಗಳನ್ನು ನೋಡಲು ಜನ ಕಾದು ಕುಳಿತಿದ್ದಾರೆ. ಒಟ್ಟಾರೆ ಶೀಘ್ರದಲ್ಲೇ ಬಿಗ್‌ ಬಾಸ್‌ ಕನ್ನಡ 10 ಶುರುವಾಗಲಿದ್ದು, ಜನರಿಗೆ ಮನರಂಜನೆಯ ರಸದೌತಣ ನೀಡಲಿದೆ.  


ಇದನ್ನೂ ಓದಿ: ಜವಾನ್‌ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಸೌತ್‌ ಸುಂದರಿ..ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.