Bigg Boss Kannada Season 9 : ಕನ್ನಡ ಕಿರುತೆರೆಯ ಫೇಮಸ್‌ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್‌ 9 ಕಾರ್ಯಕ್ರಮ ಆರಂಭಗೊಂಡಿದೆ. ಈ ಬಾರಿ ಒಟ್ಟು 18 ಸ್ಪರ್ಧಿಗಳು ದೊಡ್ಮಮನೆ ಸೇರಿದ್ದಾರೆ. ನವೀನರ ಜೊತೆ ಪ್ರವೀಣರ ಹಣಾಹಣಿನೋಡಲು ಜನ ಕಾತುರರಾಗಿದ್ದಾರೆ. ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ಅನುಪಮಾ ಗೌಡ, ಅರುಣ್ ಸಾಗರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಸೇರಿ ಒಟ್ಟು 9 ಮಂದಿ ಹಳೆಯ ಸ್ಪರ್ಧಿಗಳಿದ್ದಾರೆ. ಕಾವ್ಯಶ್ರೀ ಗೌಡ, ನೇಹಾ ಗೌಡ, ಮಯೂರಿ, ದರ್ಶ್ ಚಂದ್ರಪ್ಪ, ವಿನೋದ್ ಗೊಬ್ಬರಗಾಲ, ಐಶ್ವರ್ಯ ಪಿಸ್ಸೆ, ನವಾಜ್, ರೂಪೇಶ್ ರಾಜಣ್ಣ ಹಾಗೂ ಅಮೂಲ್ಯ ಗೌಡ ಸೇರಿ ಒಟ್ಟು 9 ಮಂದಿ ಹೊಸಬರು ಬಿಗ್‌ಬಾಸ್‌ ಮನೆ ಸೇರಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Bigg Boss Kannada Season 9: ದೊಡ್ಮನೆಗೆ ರಾಯಲ್ ಆಗಿ ಎಂಟ್ರಿ ಕೊಟ್ಟ ಆ 18 ಸ್ಪರ್ಧಿಗಳು ಇವರೇ ನೋಡಿ


ಬಿಗ್‌ಬಾಸ್‌ ಅಂದ್ಮೇಲೆ ಟಾಸ್ಕ್‌ ಜೊತೆ ಜೊತೆಗೆ ಅಲ್ಲೊಂದಿಷ್ಟು ಜಗಳ ಇರಲೇ ಬೇಕು. ಆಗಲೇ ನೋಡುವವರಿಗೆ ಇದು ಮಸಾಲಾದಾರ್‌ ಆಗಿರಲು ಸಾಧ್ಯ. ಪ್ರತಿಬಾರಿಯೂ ಗಾಸಿಪ್‌, ಕಾದಾಟ, ಅಳು, ನಗು ಎಲ್ಲವೂ ದೊಡ್ಮನೆಯಲ್ಲಿ ಇದ್ದೇ ಇರುತ್ತದೆ. ಆದರೆ ಈ ಬಾರಿ ಮೊದಲ ದಿನವೇ ಬಿಗ್‌ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಪ್ರಶಾಂತ್ ಸಂಬರಗಿ, ಆರ್ಯವರ್ಧನ್ ಗುರೂಜಿ ಹಾಗೂ ದರ್ಶ್ ಚಂದ್ರಪ್ಪ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಇದು ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದ್ದು, ಈ ಪ್ರೋಮೋವನ್ನ ಕಲರ್ಸ್ ಕನ್ನಡ ವಾಹಿನಿಯ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. 


 


Bigg Boss Season 9 : ಬಿಗ್‌ ಹೌಸ್‌ಗೆ ಎಂಟ್ರಿ ಕೊಟ್ಟ ರಿವ್ಯೂ ನವಾಜ್..!


ಬಿಗ್ ಬಾಸ್‌ನಲ್ಲಿರುವಾಗ ಚೆನ್ನಾಗಿದ್ದು, ಹೊರಗಡೆ ಬಂದಾಗ ಹೆಣ್ಮಕ್ಕಳ ಬಗ್ಗೆ ಎಷ್ಟು ಕಚಡವಾಗಿ ಮಾತನಾಡುತ್ತಿದ್ದರು ಅಂದ್ರೆ… ಎಂದು ಹೇಳುತ್ತಾ ದರ್ಶ್ ಚಂದ್ರಪ್ಪ ಇವರಿಬ್ಬರ ಮಧ್ಯೆ ಬರುತ್ತಾರೆ. ಅದಕ್ಕೆ ಪ್ರಶಾಂತ್‌ ಸಂಬರಗಿ, ದಿವ್ಯಾ ಉರುಡುಗ ಮೋಸ ಆಡಿದ್ರು ಅಂದೆ. ನನ್ನ ಸ್ವತಂತ್ರ.. ನನ್ನ ಒಪೀನಿಯನ್‌ ಎನ್ನುತ್ತಾರೆ. ಅನ್ನ ತಿಂದುಬಿಟ್ಟು ಹಿಂದೆ ಚೂರಿ ಹಾಕುವ ಕೆಲಸ ಯಾರೂ ಮಾಡಬಾರದು ಎಂದು ದರ್ಶ್ ಹೇಳಿದ್ದಕ್ಕೆ, ಹುಟ್ಟದೇ ಇರೋರಿಗೆ ಬುದ್ಧಿ ಕಲಿಸೋಕೆ ಗೊತ್ತಿಲ್ವಾ? ಎಡಗಾಲಲ್ಲಿ ಗುದ್ದಿ ಹೋಗ್ತೀನಿ ಎಂದು ಆರ್ಯವರ್ಧನ್ ಗುರೂಜಿ ಅಸಮಾಧಾನ ಹೊರಹಾಕುತ್ತಾರೆ. 


ಒಟ್ನಲ್ಲಿ ಈ ಬಾರಿಯ ಬಿಗ್‌ಬಾಸ್‌ ಹೇಗಿರಬಹುದು ಎಂಬುದರ ಚಿತ್ರಣ ಮೊದಲ ದಿನವೇ ವೀಕ್ಷಕರಿಗೆ ಸಿಕ್ಕಿದ್ದು, ಬಲು ರೋಚಕವಾಗಿರುವುದಂತೂ ಪಕ್ಕಾ ಆಗಿದೆ. ಮಸಲಾದಾರ್‌, ಫುಲ್‌ ಮೀಲ್ಸ್‌ ಈ ಬಾರಿ ಬಿಗ್‌ ಬಾಸ್‌ ಪ್ರಿಯರಿಗೆ ಸಿಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.