Bigg Boss Kannada Season 9: ದೊಡ್ಮನೆಗೆ ರಾಯಲ್ ಆಗಿ ಎಂಟ್ರಿ ಕೊಟ್ಟ ಆ 18 ಸ್ಪರ್ಧಿಗಳು ಇವರೇ ನೋಡಿ

ಇನ್ನು ಬಿಗ್ ಬಾಸ್ ಕನ್ನಡ OTT ಯ ಚೊಚ್ಚಲ ಸೀಸನ್ ಯಶಸ್ವಿಯಾಗಿ ಮುಗಿದ ಕೆಲವೇ ದಿನಗಳ ಬಳಿಕ ಟಿವಿ ರಿಯಾಲಿಟಿ ಶೋ ಸೀಸನ್ ಪ್ರಾರಂಭವಾಗಿದೆ. 100 ದಿನಗಳ ಈ ಸೀಸನ್ ನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ನಾಲ್ವರು ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಓಟಿಟಿಯಿಂದ ನೇರ ಆಯ್ಕೆಯಾಗಿದ್ದಾರೆ.

Written by - Bhavishya Shetty | Last Updated : Sep 24, 2022, 11:27 PM IST
    • ಇಂದಿನಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಿದೆ
    • ಈ ಕಾರ್ಯಕ್ರಮದಲ್ಲೂ ಇರಲಿದೆ ಅಭಿಮಾನಿಗಳ ನೆಚ್ಚಿನ ನಟ ಕಿಚ್ಚನ ನಿರೂಪಣೆ
    • 100 ದಿನಗಳ ಈ ಸೀಸನ್ ನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ
Bigg Boss Kannada Season 9: ದೊಡ್ಮನೆಗೆ ರಾಯಲ್ ಆಗಿ ಎಂಟ್ರಿ ಕೊಟ್ಟ ಆ 18 ಸ್ಪರ್ಧಿಗಳು ಇವರೇ ನೋಡಿ title=
Big Boss

ಕರ್ನಾಟಕದ ಜನಪ್ರಿಯ ಟಿವಿ ರಿಯಾಲಿಟಿ ಶೋ ಇದೀಗ ಪ್ರಾರಂಭವಾಗಿದೆ. ಬಿಗ್ ಬಾಸ್ ಎಂದ ತಕ್ಷಣ ನೆನಪಾಗೋ ಕಿಚ್ಚನ ನಿರೂಪಣೆಗೆ ಇನ್ಮುಂದೆ ಬರವಿರೋದಿಲ್ಲ. ಏಕೆಂದರೆ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ಮೂಲಕ ಟಿವಿ ಪರದೆ ಮೇಲೆ ಬರುತ್ತಿದ್ದಾರೆ. ಹೌದು ಇಂದಿನಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಿದೆ. ಈ ಕಾರ್ಯಕ್ರಮವನ್ನೂ ಸಹ ಅಭಿಮಾನಿಗಳ ನೆಚ್ಚಿನ ನಟ ಕಿಚ್ಚ ನಿರೂಪಣೆ ಮಾಡುತ್ತಿದ್ದಾರೆ. 

ಇದನ್ನೂ ಓದಿ: Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್‌ ಇಶ್ಯೂ ಇದೆ...!

ಇನ್ನು ಬಿಗ್ ಬಾಸ್ ಕನ್ನಡ OTT ಯ ಚೊಚ್ಚಲ ಸೀಸನ್ ಯಶಸ್ವಿಯಾಗಿ ಮುಗಿದ ಕೆಲವೇ ದಿನಗಳ ಬಳಿಕ ಟಿವಿ ರಿಯಾಲಿಟಿ ಶೋ ಸೀಸನ್ ಪ್ರಾರಂಭವಾಗಿದೆ. 100 ದಿನಗಳ ಈ ಸೀಸನ್ ನಲ್ಲಿ 18 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ನಾಲ್ವರು ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಓಟಿಟಿಯಿಂದ ನೇರ ಆಯ್ಕೆಯಾಗಿದ್ದಾರೆ.

ಈ ಸೀಸನ್ ನ ಹೊಸ ಸ್ಪರ್ಧಿಗಳ ಜೊತೆ ರೂಪೇಶ್ ಶೆಟ್ಟಿ, ಆರ್ಯವರ್ಧನ್, ಸಾನ್ಯಾ ಅಯ್ಯರ್ ಮತ್ತು ರಾಕೇಶ್ ಅಡಿಗ ಕಣಕ್ಕಿಳಿಯಲಿದ್ದಾರೆ. ಈಗಷ್ಟೇ ದೊಡ್ಮನೆಯಿಂದ ಬಂದಿರುವ ಈ ನಾಲ್ವರು ಯಾವ ರೀತಿ ಪ್ರಯೋಜನ ಪಡೆಯಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಈ ಸೀಸನ್ ನಲ್ಲಿ ಒಟ್ಟು 18 ಸ್ಪರ್ಧಿಗಳಿದ್ದು, ಅವರ ಪಟ್ಟಿ ಹೀಗಿದೆ. ಮೊದಲನೆಯ ಸ್ಪರ್ಧಿಯಾಗಿ ದೊಡ್ಮನೆಗೆ ಅರುಣ್ ಸಾಗರ್, ಎರಡನೇ ಸ್ಪರ್ಧಿಯಾಗಿ ಮಯೂರಿ, ಮೂರನೇ ಸ್ಪರ್ಧಿಯಾಗಿ ದೀಪಿಕಾ ದಾಸ್, ನಾಲ್ಕನೇ ಸ್ಪರ್ಧಿಯಾಗಿ ನವಾಜ್, ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ, ಆರನೇ ಸ್ಪರ್ಧಿಯಾಗಿ ದರ್ಶ್ ಚಂದ್ರಪ್ಪ, ಏಳನೇ ಸ್ಪರ್ಧಿಯಾಗಿ ಪ್ರಶಾಂತ್ ಸಂಬರಗಿ, ಎಂಟನೇ ಸ್ಪರ್ಧಿಯಾಗಿ ಅಮೂಲ್ಯ ಗೌಡ, ಒಂಬತ್ತು ಮತ್ತು ಹತ್ತನೇ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್, 11ನೇ ಸ್ಪರ್ಧಿಯಾಗಿ ವಿನೋದ್ ಗೊಬ್ಬರಗೋಳ, 12ನೇ ಸ್ಪರ್ಧಿಯಾಗಿ ನೇಹಾ ಗೌಡ, 13ನೇ ಸ್ಪರ್ಧಿಯಾಗಿ ರೂಪೇಶ್ ರಾಜಣ್ಣ, 14 ಮತ್ತು 15ನೇ ಅಭ್ಯರ್ಥಿಗಳಾಗಿ ಆರ್ಯವರ್ಧನ್ ಮತ್ತು ರಾಕೇಶ್ ಅಡಿಗ, 16 ನೇ ಅಭ್ಯರ್ಥಿಯಾಗಿ ಐಶ್ವರ್ಯಾ ಪಿಸ್ಸೇ 17ನೇ ಸ್ಪರ್ಧಿಯಾಗಿ 17 ನೇ ಸ್ಪರ್ಧಿಯಾಗಿ ಕಾವ್ಯಶ್ರೀ 18 ನೇ ಮತ್ತು ಅಂತಿಮ ಸ್ಪರ್ಧಿಯಾಗಿ ಅನುಪಮ ಆನಂದ್ ಕುಮಾರ್ ದೊಡ್ಮನೆ ಮನೆಯೊಳಗೆ ಕಾಲಿಟ್ಟಿದ್ದಾರೆ.

ದೊಡ್ಮನೆ ಮನೆಯೊಳಗೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: Bigg Boss Season 9 : ಬಿಗ್‌ ಹೌಸ್‌ಗೆ ಎಂಟ್ರಿ ಕೊಟ್ಟ ರಿವ್ಯೂ ನವಾಜ್..!

100 ದಿನಗಳ ಈ ಆಟದಲ್ಲಿ ಯಾರು ಕೊನೆಯ ತನಕ ಉಳಿಯಲಿದ್ದಾರೆ, ಯಾರು ಅರ್ಧಕ್ಕೆ ಜರ್ನಿ ಕೊನೆಗೊಳಿಸುತ್ತಾರೆ ಎಂದು ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News