Bigg Boss Kannada Season 9 : ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯಲಿದೆ. ಎಲ್ಲರೂ ಅಂತಿಮ ಹಂತದವರೆಗೆ ಸ್ಪರ್ಧಿಸಲು ಬಯಸುತ್ತಾರೆ. ಟ್ರೋಫಿ ಗೆಲ್ಲಲು ಎಲ್ಲರೂ ಪೈಪೋಟಿ ನಡೆಸುತ್ತಾರೆ. ಮೊದಲ ವಾರದಲ್ಲೇ ಎಲಿಮಿನೇಟ್ ಆಗಿಬಿಟ್ಟರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಎಲಿಮಿನೇಷನ್ ತಪ್ಪಿಸಲು ಸಾಧ್ಯವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿದೆ. ಇದರಲ್ಲಿ ಮೊದಲ ವಾರದಲ್ಲೇ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ. ಬಿಗ್‌ಬಾಸ್ ಸೀಸನ್ 9 ಶುರುವಾಗಿ ಒಂದು ವಾರ ಕಳೆದಿದೆ. ನಿನ್ನೆ ಕಿಚ್ಚನ ಪಂಚಾಯ್ತಿ ನಡೆದಿದ್ದು, ಹಲವಾರು ವಿಚಾರಗಳ ಚರ್ಚೆ ನಡೆಯಿತು. ಇದೀಗ ಮೊದಲ ವಾರದ ಎಲಿಮಿನೇಷನ್‌ ಸಮಯ ಬಂದಿದ್ದು, 18 ಸ್ಪರ್ಧಿಗಳಲ್ಲಿ 12  ಸ್ಪರ್ಧಿಗಳು ನಾಮಿನೇಟ್‌ ಆಗಿದ್ದರು, ಇದರಲ್ಲಿ ನಿನ್ನೆ 3 ಜನರನ್ನು ನಿನ್ನೆ ಕಿಚ್ಚ ಸುದೀಪ್‌ ಸೇಫ್‌ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Paaru : ನಿಮ್ಮ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಒಟ್ಟು 18 ಮಂದಿ ದೊಡ್ಮನೆ ಸೇರಿದ್ದು, ಒಬ್ಬರು ಹೊರ ಬರುವ ಸಮಯ ಬಂದಿದೆ. ಇಂದು ಸಂಜೆ ದೊಡ್ಮನೆಯಿಂದ ಒಬ್ಬರು ಹೊರಬರಲಿದ್ದಾರೆ. ಪ್ರತಿ ವಾರ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗುತ್ತದೆ. ಈ ವಾರ ನಾಮಿನೇಟ್ ಆಗಿದ್ದವರಲ್ಲಿ ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ, ವಿನೋದ್ ಸೇಫ್‌ ಆಗಿದ್ದಾರೆ. ಇನ್ನೂ ಒಂಬತ್ತು ಮಂದಿಯ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇದೆ. ದರ್ಶ್,  ಐಶ್ವರ್ಯ, ಪ್ರಶಾಂತ್ ಸಂಬರಗಿ, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ಇವರಲ್ಲಿ ಇಂದು ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.  


ಇತರ ಸ್ಪರ್ಧಿಗಳಾದ ರಾಕೇಶ್ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ ಸದ್ಯಕ್ಕೆ ಸೇಫ್ ಆಗಿದ್ದಾರೆ. ವಾರದ ಟಾಸ್ಕ್‌ಗಳು ಬಹುತೇಕ ಮುಗಿದಿದ್ದು, ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರ ಮೊದಲ ಕ್ಯಾಪ್ಟನ್ ಆಗಿ ವಿನೋದ್ ಗೊಬ್ರಗಾಲ ಆಯ್ಕೆ ಆಗಿದ್ದಾರೆ. 


ಇದನ್ನೂ ಓದಿ : Mangal Gochar 2022: ಅ. 16 ರಿಂದ ಈ 3 ರಾಶಿಗಳಿಗೆ ಶುಭ ತರಲಿದೆ ಮಂಗಳನ ಸಂಚಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.