Paaru : ನಿಮ್ಮ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ

Paaru : "ಕರುಣೆಯ ಪೈರು ನಮ್ಮೀ ಪಾರು" ಎಂದು ಇಡೀ ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ "ಪಾರು" ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ.  

Written by - Chetana Devarmani | Last Updated : Oct 2, 2022, 08:39 AM IST
  • ನಿಮ್ಮ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ
  • "ಕರುಣೆಯ ಪೈರು ನಮ್ಮೀ ಪಾರು"
  • ಜೀ ಕನ್ನಡದಲ್ಲಿ ಪ್ರಸಾರವಾಗುವ "ಪಾರು" ಧಾರಾವಾಹಿ
Paaru : ನಿಮ್ಮ ಮನೆಮಗಳು ಪಾರುಗೆ 1000 ಸಂಚಿಕೆಗಳ ಸಂಭ್ರಮ title=
ಪಾರು

Paaru :  "ಕರುಣೆಯ ಪೈರು ನಮ್ಮೀ ಪಾರು" ಎಂದು ಇಡೀ ಕರ್ನಾಟಕವೇ ಒಪ್ಪಿ ಅಪ್ಪಿಕೊಂಡಿರುವ ಮನೆಮಗಳು ಪಾರು. ಕನ್ನಡದ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ "ಪಾರು" ಧಾರಾವಾಹಿ ಅತ್ಯುತ್ತಮ ತಾರಾಗಣ, ರೋಚಕ ತಿರುವುಗಳ ಅದ್ಭುತ ಕಥೆಯೊಂದಿಗೆ ವೀಕ್ಷಕರನ್ನು ನಿರಂತರವಾಗಿ ರಂಜಿಸುತ್ತಲೇ ಸಾವಿರ ಸಂಚಿಕೆಗಳನ್ನು ಪೂರೈಸುತ್ತಿದೆ. ಹಲವು ವರ್ಷಗಳಿಂದ ಬೆಳ್ಳಿತೆರೆಯಲ್ಲಿ ರಾರಾಜಿಸಿ ಕನ್ನಡಿಗರ ಮನ ಗೆದ್ದಿರುವ ಹಿರಿಯ ಕಲಾವಿದರಾದ ವಿನಯಾಪ್ರಸಾದ್ ಅವರು ಅಖಿಲಾಂಡೇಶ್ವರಿ ಪಾತ್ರದಲ್ಲಿ ಕಿರುತೆರೆಗೆ ಕಾಲಿಟ್ಟು ತಮ್ಮ ಮನೋಜ್ಞ ನಟನೆಯ ಮೂಲಕ ಧಾರಾವಾಹಿಯ ಘನತೆ ಹೆಚ್ಚಿಸಿದ್ದಾರೆ. ಇವರೊಟ್ಟಿಗೆ ನವ ಜೋಡಿಯಾಗಿ ಪದಾರ್ಪಣೆ ಮಾಡಿದ ಆದಿ ಪಾತ್ರದ ಶರತ್ - ಪಾರು ಪಾತ್ರದ ಮೋಕ್ಷಿತಾ ಪೈ ವೀಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದಾರೆ. 

ಇನ್ನು ಕಲಾಸಾಮ್ರಾಟ್ ಎಸ್. ನಾರಾಯಣ್ ಅವರು ವೀರಯ್ಯದೇವ , ನಾಗೇಂದ್ರ ಶಾ ಅವರು ಹನುಮಂತು ಮತ್ತು ನಾಗೇಶ್ ಯಾದವ್ ಅವರು ರಘು ರಾಮ್ ಪಾತ್ರದಲ್ಲಿ ನಟಿಸುತ್ತಿದ್ದರೆ ಇವರೊಟ್ಟಿಗೆ ಇನ್ನು ಅನೇಕ ಹಿರಿಯ - ಕಿರಿಯ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದ್ದು ನೋಡುಗರನ್ನು ತಮ್ಮ ಅಮೋಘ ಅಭಿನಯದ ಮೂಲಕ ಸೆಳೆಯುವುದರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ : ʼಯಾವುದಾದ್ರೂ ಹುಡುಗಿನ ಕ್ಯಾಚ್‌ ಹಾಕೊಂಡ್ರೆ ಒಳ್ಳೆಯದುʼ

ಅರಸನಕೋಟೆಯ ಆಳುವ ಅರಸಿಯಷ್ಟೇ ಅಲ್ಲದೆ ಪ್ರೀತಿ ತುಂಬಿದ ಅಮ್ಮನಾಗಿ ಅಖಿಲಾಂಡೇಶ್ವರಿ , ತಾಯಿ ಪ್ರೀತಿಯನ್ನೇ ಕಾಣದ ಮಕ್ಕಳಿಗೆ ತಾನೇ ಎಲ್ಲವೂ ಆಗಿರುವ ಹನುಮಂತು , ಸದಾ ಬಡವರ ನೋವು ನಲಿವುಗಳಿಗೆ ಸ್ಪಂದಿಸುತ್ತ ನೊಂದವರ ಪಾಲಿನ ಭರವಸೆಯಾಗಿರುವ ವೀರಯ್ಯದೇವ ,ಕರ್ನಾಟಕದ ಅಮ್ಮಂದಿರ ನೆಚ್ಚಿನ ಮಗನಾಗಿ ಜನಪ್ರಿಯರಾಗಿದ್ದಾರೆ ಆದಿ ಮತ್ತು ಎಲ್ಲರ ನೆಚ್ಚಿನ ಮನೆಮಗಳಾಗಿ ಮನಗೆದ್ದಿದ್ದಾಳೆ ಪಾರು ಇವರೆಲ್ಲರೂ ಮೆಚ್ಚುವ ಪ್ರೀತು , ಜನನಿ ಹೀಗೆ ವಿಭಿನ್ನ ಬಗೆಯ ಎಲ್ಲಾ ಪಾತ್ರಗಳೂ ತನ್ನದೇ ರೀತಿಯಲ್ಲಿ ಮಹತ್ವ ಪಡೆದುಕೊಂಡಿದೆ.

ವಿನೂತನ ನಿರೂಪಣೆಯ ಶೈಲಿ ಮೂಲಕ ಈಗಾಗಲೇ ಸೂಪರ್ ಹಿಟ್ ಆಗಿರುವ ಪಾರು ಧಾರಾವಾಹಿ ತನ್ನ ಅದ್ಧೂರಿತನವನ್ನು ಎಲ್ಲಿಯೂ ಬಿಟ್ಟುಕೊಡದೆ ಮೊದಲ ಸಂಚಿಕೆಯಿಂದ ಈಗಿನವರೆಗೂ ಗುಣಮಟ್ಟದಲ್ಲಿ ರಾಜಿಯಾಗದೆ ಶ್ರೀಮಂತ ಸೆಟ್ ಗಳು , ಭವ್ಯ ಬಂಗಲೆ , ಪ್ರತಿದೃಶ್ಯದ ಸಿರಿವಂತಿಕೆ ವೀಕ್ಷಕರಿಗೆ ಸಿನಿಮಾದ ಅನುಭವ ನೀಡಬೇಕು ಎನ್ನುವ ತಂಡದ ಪ್ರಯತ್ನಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ ಹಾಗು ಕಿರುತೆರೆಗೆ ಈ ವೈಭವವನ್ನು ಪರಿಚಯಿಸಿದ ಮೊದಲ ಸೀರಿಯಲ್ ಎಂಬ ಹೆಗ್ಗಳಿಕೆಯೂ ಹೊಂದಿದೆ. ಕಥೆಯಲ್ಲಿ ನಮ್ಮ ನೆಲದ ಸಂಸ್ಕೃತಿಗೆ ಹೆಚ್ಚು ಮಹತ್ವ ನೀಡಿ ಅದನ್ನು ಪ್ರತಿಬಿಂಬಿಸುವ ಪ್ರಯತ್ನಕ್ಕೆ ವೀಕ್ಷಕರಿಂದ  ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಅಂದಿನಿಂದ ಇಂದಿನವರೆಗೂ ಅದೇ ಗುಣಮಟ್ಟವನ್ನು ಕಾಯ್ದಿಸಿರಿಕೊಂಡು ಬಂದಿರುವುದು ವಿಶೇಷ.

ಪ್ರೀತಿ , ಸ್ನೇಹ , ಕಾಳಜಿ , ಆದರ್ಶ , ವಾತ್ಸಲ್ಯ ಮತ್ತು ಮನರಂಜನೆ ಹೀಗೆ ಎಲ್ಲವನ್ನು ಒಟ್ಟುಗೂಡಿಸಿ 1000 ಸಂಚಿಕೆಗಳನ್ನು ಪೂರೈಸುತ್ತಿರುವ ಹೊತ್ತಿನಲ್ಲಿ ಅಖಿಲಾಂಡೇಶ್ವರಿಯು ಪಾರುಳನ್ನು ಸೊಸೆಯಾಗಿ ಒಪ್ಪಿಕೊಳ್ಳುವ ಹಂತದಲ್ಲಿದ್ದು ಮುಂದಿನ ಕಥೆ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳಲಿದೆ ಎಂದು ವೀಕ್ಷಕರು ಕುತೂಹಲದಿಂದ ತುದಿಗಾಲಿನಲ್ಲಿ ಕಾಯುವಂತೆ ಮಾಡಿದೆ.

ವಿಶೇಷವಾಗಿ ಅಖಿಲಾಂಡೇಶ್ವರಿಯವರ ಅಲಂಕಾರ ಅವರು ಉಡುವ ಸೀರೆ ಧರಿಸುವ ಒಡವೆಗಳಿಗೆ ಅಸಂಖ್ಯಾತ ಮಹಿಳಾ ವೀಕ್ಷಕರು ಆಕರ್ಷಿತರಾಗಿದ್ದಾರೆ ಹಾಗೂ ಅವರನ್ನು ಅನುಕರಿಸುತ್ತಿದ್ದಾರೆ. ಇದೆಲ್ಲದಕ್ಕೂ ಅಖಿಲಾಂಡೇಶ್ವರಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿನಯಾಪ್ರಸಾದ್ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿಗೆ ಅವರ ಶ್ರದ್ಧೆಗೆ ಎಲ್ಲರೂ ತಲೆಬಾಗುತ್ತಾರೆ ಎನ್ನುವುದು ಧಾರಾವಾಹಿ ತಂಡದ ಅಭಿಪ್ರಾಯವಾಗಿದೆ.

ಇದನ್ನೂ ಓದಿ : ಕಿಚ್ಚ ಸುದೀಪ್ ಮಗಳ ಧ್ವನಿಗೆ ಮರುಳಾದ ಫ್ಯಾನ್ಸ್‌ : ʼಸೋ ಕ್ಯೂಟ್‌ ವಾಯ್ಸ್‌ ಸಾನ್ವಿʼ..!

ಧೃತಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಧಾರಾವಾಹಿಗೆ ನಟ , ನಿರ್ಮಾಪಕ ದಿಲೀಪ್ ರಾಜ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೇ ಅವರ ಪತ್ನಿ ಶ್ರೀವಿದ್ಯಾರಾಜ್ ಅವರು ನಿರ್ಮಾಣದ ಜವಾಬ್ಧಾರಿ ಹೊತ್ತಿದ್ದಾರೆ ಮತ್ತು ಮೊದಲ ಸಂಚಿಕೆಯಿಂದಲೂ ಗುರುಪ್ರಸಾದ್ ಮುಡೇನಹಳ್ಳಿ ಅವರು ಅದ್ಭುತವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಸೋಮವಾರದಿಂದ - ಶುಕ್ರವಾರದ ವರೆಗೂ ಪ್ರತಿದಿನ ಸಂಜೆ 6.30 ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ 1000 ಸಂಚಿಕೆಗಳ ಪುಟ ಸೇರುತ್ತಿರುವುದೇ  ಜನರ ಪ್ರೀತಿ , ಬೆಂಬಲ ಅಪಾರವಾಗಿರುವುದಕ್ಕೆ ಸಾಕ್ಷಿಯಾಗಿದೆ. ಎಂದಿನಂತೆ  ಪ್ರೀತಿ , ಪ್ರೋತ್ಸಾಹ ಮತ್ತು ಬೆಂಬಲ ಮುಂದುವರೆಯಲಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News