Bigg Boss Kannada Season 9 : ಮೊದಲ ವಾರವೇ 12 ಮಂದಿ ನಾಮಿನೇಟ್.!
Bigg Boss Kannada Season 9 : ಬಿಗ್ ಬಾಸ್ ಮನೆಯಲ್ಲಿ 18 ಸ್ಪರ್ಧಿಗಳು ಲಾಕ್ ಆಗಿದ್ದು, ಮೊದಲ ದಿನ ಬಲು ರೋಚಕವಾಗಿತ್ತು.
Bigg Boss Kannada Season 9 : ಸುಮಾರು ನೂರು ದಿನಗಳ ಕಾಲ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯಲಿದೆ. ಎಲ್ಲರೂ ಅಂತಿಮ ಹಂತದವರೆಗೆ ಸ್ಪರ್ಧಿಸಲು ಬಯಸುತ್ತಾರೆ. ಟ್ರೋಫಿ ಗೆಲ್ಲಲು ಎಲ್ಲರೂ ಪೈಪೋಟಿ ನಡೆಸುತ್ತಾರೆ. ಮೊದಲ ವಾರದಲ್ಲೇ ಎಲಿಮಿನೇಟ್ ಆಗಿಬಿಟ್ಟರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಎಲಿಮಿನೇಷನ್ ತಪ್ಪಿಸಲು ಸಾಧ್ಯವಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭವಾಗಿದೆ. ಇದರಲ್ಲಿ ಮೊದಲ ವಾರದಲ್ಲೇ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಸಹ ಹೆಚ್ಚಾಗಿದೆ. 18 ಮಂದಿ 18 ಸ್ಪರ್ಧಿಗಳು ಲಾಕ್ ಆಗಿದ್ದು, ಮೊದಲ ದಿನ ಬಲು ರೋಚಕವಾಗಿತ್ತು. ಅಚ್ಚರಿ ಎಂದರೆ ಮೊದಲ ವಾರದಲ್ಲಿ 12 ಮಂದಿ ನಾಮಿನೇಟ್ ಆಗಿದ್ದಾರೆ.
Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್ ಇಶ್ಯೂ ಇದೆ...!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನಲ್ಲಿ ಒಟ್ಟು 18 ಮಂದಿ ದೊಡ್ಮನೆ ಸೇರಿದ್ದಾರೆ. ಪ್ರತಿ ವಾರ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಲೇ ಹೋಗುತ್ತದೆ. ನಿನ್ನೆ ಬಿಗ್‌ಬಾಸ್ ಮೊದಲ ದಿನ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯ, ಪ್ರಶಾಂತ್ ಸಂಬರಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ನಾಮಿನೇಟ್ ಆಗಿದ್ದಾರೆ. ಇತರ ಸ್ಪರ್ಧಿಗಳಾದ ರಾಕೇಶ್ ಅಡಿಗ, ಅನುಪಮಾ ಗೌಡ, ಅಮೂಲ್ಯ ಗೌಡ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ ಸದ್ಯಕ್ಕೆ ಸೇಫ್ ಆಗಿದ್ದಾರೆ.
BBK9: ಶುರುವಾಯ್ತು ಅಸಲಿ ಆಟ! ಸಂಬರಗಿಗೆ ಎಡಗಾಲಲ್ಲಿ ಗುದ್ದಿ ಹೋಗ್ತೀನಿ ಎಂದ ಗುರೂಜಿ!
ಈ ಬಾರಿ ಪ್ರವೀಣರು ಮತ್ತು ನವೀನರು ಎಂಬ ಹೊಸ ಮಾದರಿಯನ್ನು ಬಿಗ್ ಬಾಸ್ ನಲ್ಲಿ ಪರಿಚಯಿಸಲಾಗಿದೆ. ಹೊಸ ಕಂಟೆಸ್ಟಂಟ್‌ಗಳು ಮತ್ತು ಅನುಭವಿಗಳನ್ನು ಒಂದೇ ಮನೆಯಲ್ಲಿ ಬಿಡುವ ಮೂಲಕ ಬಿಗ್ ಬಾಸ್ ಆಟ ಶುರುವಾಗಿದೆ. ಮೊದಲ ದಿನ ನಡೆದ ಟಾಸ್ಕ್ ನಲ್ಲಿ ಪ್ರಶಾಂತ್ ಸಂಬರಗಿ ಮತ್ತು ವಿನೋದ್ ಗೊಬ್ಬರ್ಗಾಲ ಗೆಲುವು ಸಾಧಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.