ಎಲ್ಲರೂ ಜೋಡಿಯಾಗಿದ್ದಾರೆ.. ನಾನೇ ಸಿಂಗಲ್, ನನ್ನ ಕಷ್ಟ ಯಾರಿಗೆ ಹೇಳ್ಬೇಕಪ್ಪಾ..!
ಬಿಗ್‌ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಲವ್ ಬರ್ಡ್ಸ್ ಮನೆಯಂಗಳದಲ್ಲಿ ಜೋಡಿ ಜೋಡಿಯಾಗಿ ತಿರುಗಾಡುತ್ತಿದ್ದಾರೆ. ಆದ್ರೆ ಕಾವ್ಯಶ್ರೀ ಗೌಡ ಪಾಪ ಸಿಂಗಲ್ ಆಗಿದ್ದಾರೆ ಅಂತೆ. ಅದಕ್ಕೆ ಇವತ್ತು ಮನೆಯಲ್ಲಿ ಗೋಳೋ ಅಂತಿದ್ರು.
BBK 9 : ಬಿಗ್‌ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಲವ್ ಬರ್ಡ್ಸ್ ಮನೆಯಂಗಳದಲ್ಲಿ ಜೋಡಿ ಜೋಡಿಯಾಗಿ ತಿರುಗಾಡುತ್ತಿದ್ದಾರೆ. ಆದ್ರೆ ಕಾವ್ಯಶ್ರೀ ಗೌಡ ಪಾಪ ಸಿಂಗಲ್ ಆಗಿದ್ದಾರೆ ಅಂತೆ. ಅದಕ್ಕೆ ಇವತ್ತು ಮನೆಯಲ್ಲಿ ಗೋಳೋ ಅಂತಿದ್ರು.
ಹೌದು... ದೊಡ್ಮನೆಯಲ್ಲಿ ಲವ್ ಸ್ಟೋರಿಗಳ ಸಂಖ್ಯೆ ಹೆಚ್ಚುತ್ತಿದೆ. ಬಿಗ್‌ಹೌಸ್‌ನಲ್ಲಿ ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಒಟ್ಟಾಗಿ ಅಡ್ಡಾಡುತ್ತಿದ್ರೆ ಇದನ್ನು ನೋಡಿದ ಕಾವ್ಯಶ್ರೀ, ಪಾರಿವಾಳಕ್ಕೆ ನಾನು ಕಾಳು ಹಾಕಿ ಅಣ್ಣನ ತರ ನೋಡ್ಕೋತ್ತಿದ್ದೆ. ಆದ್ರೆ ಆ ಪಾರಿವಾಳ ಹಾರಿ ಹಾರಿ ಹೊರಟು ಹೊಯಿತು ಅಕ್ಕ... ಎಂದು ಅನುಪಮಾಗೌಡ ಮುಂದೆ ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರು. ಇದನ್ನು ಕೇಳಿಸಿಕೊಂಡು ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಸೆರಿದಂತೆ ಮನೆ ಮಂದಿ ನಗುತ್ತಿದ್ದರು.
ಇದನ್ನೂ ಓದಿ: ʼಗಂಧದಗುಡಿʼ ರಿಸ್ಕ್, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!
ಇನ್ನು ಮುಂದುವರೆದ ಕಾವ್ಯಶ್ರಿ.. ಅಯ್ಯೋ... ದೇವರೆ ಚಿಕ್ಕವಯಸ್ಸಿನಲ್ಲಿ ಇದ್ದದ್ದೂ ಕಿತ್ತುಕೊಂಡೆ. ಆದ್ರೆ ಬಿಗ್‌ಬಾಸ್‌ಗೆ ಬಂದ್ಮೇಲೆ ನಮ್ಮ ಅಣ್ಣನನ್ನೇ ಕಿತ್ತುಕೊಂಡು ಬಿಟ್ಯಲ್ಲಪ್ಪಾ... ಇಲ್ಲಿ ಎಲ್ಲಾ ಜೋಡಿಯಾಗಿ ಓಡಾಡುತ್ತಾರೆ ನಂಗೂ ಒಂದು ಜೋಡಿ ಬೇಕು. ಆಟ ಆಡುವಾಗ್ಲೂ ಸಿಂಗಲ್, ಗ್ರುಪ್‌ನಲ್ಲಿದ್ರೂ ಸಿಂಗಲ್, ಈ ದುಃಖನಾ ಹೇಳ್ಕೋಳೋನಾ ಅಂದ್ರೆ ಬಿಗ್‌ಬಾಸ್ ಕಣ್ಣೆದುರಿಗೆ ಬರೋಲ್ವೇ...! ಎಂದಾಗ ಅಲ್ಲಿಗೆ ಬಂದ ರಾಕೇಶ್ ಕಾವ್ಯಶ್ರೀಯನ್ನು ಅಪ್ಪಿಕೊಳ್ಳುತ್ತಾನೆ. ಆಗ ಕಾವ್ಯಶ್ರೀ.. ಮಾಡೋದೆಲ್ಲ ಮಾಡ್ಬಿಟ್ಟು ಮಳ್ಳನ ಹಾಗೆ ಬಂದ ನೋಡು ಎನ್ನುತ್ತಾರೆ. ಆಗ ಸ್ಪರ್ಧಿಗಳೆಲ್ಲ ಜೋರಾಗಿ ನಗುತ್ತಾರೆ.
ಒಟ್ಟಾರೆಯಾಗಿ ಬಿಗ್‌ಹೌಸ್‌ನಲ್ಲಿ ಟಾಸ್ಕ್ ಮಧ್ಯ ಜೋಕ್ಸ್ ಬಂಡಿ ಕೂಡಾ ಸಾಗುತ್ತಿದ್ದು, ಬಿಗ್‌ಬಾಸ್ ಯಾವಾಗ ಮನೆ ಮಂದಿಗೆ ಶಾಕ್ ಕೊಡ್ತಾರೆ ಅಂತ ಗೊತ್ತಿಲ್ಲ. ಇನ್ನು ಕಾವ್ಯಶ್ರೀ ಗೌಡ ಸಿಂಗಲ್ ಲೈಫ್ ಕಹಾನಿ ಹೇಗೆ ಎಂಡ್ ಆಯ್ತು ಅಂತ ನಿಮ್ಗೆ ಗೊತ್ತಾಗ್ಬೇಕು ಅಂದ್ರೆ ಇವತ್ತಿನ ಎಪಿಸೋಡ್ ನೀವು ನೋಡ್ಬೇಕು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ