ಇದು ಮೊದಲ ಸೀಸನ್, 9ನೇಯದ್ದಲ್ಲ! ಬಿಗ್ ಬಾಸ್ ಒಟಿಟಿ ಪ್ರೀಮಿಯರ್ ದಿನಾಂಕ ಪ್ರಕಟ
ಆಗಸ್ಟ್ 6ರಿಂದ ಸಂಜೆ 7ಗಂಟೆಗೆ ಬಿಗ್ ಬಾಸ್ ಒಟಿಟಿ ನಿಮ್ಮ ಮನೆಗೆ ಬರಲಿದೆ. 24 ಗಂಟೆ ನೇರಪ್ರಸಾರದೊಂದಿಗೆ ಮೊದಲ ಬಾರಿಗೆ ಈ ರಿಯಾಲಿಟಿ ಶೋ ಬರಲಿದೆ. ಹೀಗಾಗಿ ಕಿಚ್ಚ ಇದನ್ನು ಮೊದಲ ಸೀಸನ್ ಒಂಬತ್ತನೇ ಸೀಸನ್ ಅಲ್ಲ ಎಂದು ಪ್ರೋಮೋದಲ್ಲಿ ಹೇಳಿದ್ದಾರೆ. ಆರು ವಾರಗಳ ಸಂಪೂರ್ಣ ಮನರಂಜನೆಯನ್ನು ಪ್ರೇಕ್ಷಕರು ಪಡೆಯಬಹುದಾಗಿದೆ.
Bigg Boss Season 9 Promo release: ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ಎಂದರೆ ಅದು ಬಿಗ್‌ಬಾಸ್. ಅನೇಕ ಸ್ಪರ್ಧಿಗಳು ಈಗಾಗಲೇ ದೊಡ್ಮನೆಗೆ ಆಗಮಿಸಿ, ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇನ್ನೂ ಕೆಲವರು ಈ ವೇದಿಕೆ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇಂತಹ ಬಿಗ್ ಬಾಸ್ ಸೀಸನ್ ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಬರಲಿದೆ.
ಆಗಸ್ಟ್ 6ರಿಂದ ಸಂಜೆ 7ಗಂಟೆಗೆ ಬಿಗ್ ಬಾಸ್ ಒಟಿಟಿ ನಿಮ್ಮ ಮನೆಗೆ ಬರಲಿದೆ. 24 ಗಂಟೆ ನೇರಪ್ರಸಾರದೊಂದಿಗೆ ಮೊದಲ ಬಾರಿಗೆ ಈ ರಿಯಾಲಿಟಿ ಶೋ ಬರಲಿದೆ. ಹೀಗಾಗಿ ಕಿಚ್ಚ ಇದನ್ನು ಮೊದಲ ಸೀಸನ್ ಒಂಬತ್ತನೇ ಸೀಸನ್ ಅಲ್ಲ ಎಂದು ಪ್ರೋಮೋದಲ್ಲಿ ಹೇಳಿದ್ದಾರೆ. ಆರು ವಾರಗಳ ಸಂಪೂರ್ಣ ಮನರಂಜನೆಯನ್ನು ಪ್ರೇಕ್ಷಕರು ಪಡೆಯಬಹುದಾಗಿದೆ.
ಇದನ್ನೂ ಓದಿ: ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ
ಅದೆಷ್ಟೋ ರಿಯಾಲಿಟಿ ಶೋಗಳು ಬಂದಿವೆ. ಆದರೆ ಅವೆಲ್ಲದಕ್ಕೂ ಮೀರಿ ಜನರು ಪ್ರೀತಿ ತೋರಿಸಿರೋದು ಬಿಗ್ ಬಾಸ್ ಮೇಲೆ. ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್‌ಬಾಸ್‌ನ್ನು ಹೋಸ್ಟ್ ಮಾಡಲಿದ್ದಾರೆ. ಈ ಜನಪ್ರಿಯ ರಿಯಾಲಿಟಿ ಶೋಗಾಗಿ ಪ್ರೇಕ್ಷಕರು ಕಾತುರದಿಂದ ಕಾದುಕುಳಿತಿದ್ದಾರೆ. ಅದರಲ್ಲೂ ಈ ಬಾರಿ ಡಬಲ್ ಧಮಾಕ ನೀಡಲು ಮುಂದಾದ ತಂಡ ಎರಡೆರಡು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲಿದೆ.
ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಮತ್ತು ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ಹೊಸ ಅಪ್‌ಡೇಟ್ ನೀಡಿದ್ದು, ಬಿಗ್‌ಬಾಸ್ ಸೀಸನ್‌ನ ಪ್ರೋಮೋ ರಿಲೀಸ್ ಮಾಡಿದ್ದಾರೆ. ಈ ಹಿಂದೆ ಬಿಗ್ ಬಾಸ್ ಸೀಸನ್ 9 ಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಪ್ರೋಮೋ ಬಿಡುಗಡೆ ಮಾಡಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕಿಚ್ಚ ಸುದೀಪ್ ಬ್ಲ್ಯಾಕ್ ಐಷಾರಾಮಿ ಕಾರುಗಳ ಮೇಲೆ ಬ್ಲ್ಯಾಕ್ ಆಂಟ್ ಗ್ರೇ ಕಾಂಬಿನೇಷನ್‌ನಲ್ಲಿರುವ ಸೂಟ್ ಹಾಕಿಕೊಂಡು ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ತಮ್ಮ ವಿಭಿನ್ನ ಗೆಟಪ್‌ನಿಂದಲೇ ಅಭಿಮಾನಿಗಳ ಮನಗೆದ್ದ ಕಿಚ್ಚ ಈ ಬಾರಿ ಪೋಸ್ಟರ್ ಮತ್ತು ಪ್ರೋಮೋದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ.
ಇದನ್ನೂ ಓದಿ: Mutual Funds Trick: ಕೇವಲ 167 ರೂ. ಉಳಿಸಿ & 11.33 ಕೋಟಿ ರೂ. ಪಡೆಯಿರಿ
ಸೋಶಿಯಲ್ ಮೀಡಿಯಾದಲ್ಲಿ ಇದೀಗ ಬಿಗ್ ಬಾಸ್ ಪ್ರೋಮೋ ಮತ್ತು ಪೋಸ್ಟರ್‌ಗಳ ಹವಾ ಜೋರಾಗಿದೆ. ಇನ್ನು ಬಿಗ್ ಬಾಸ್ ಆಯೋಜಕ ಪರಮೇಶ್ವರ್ ಗುಂಡ್ಕಲ್ ತಮ್ಮ ಸೋಶಿಯಲ್ ಮೀಡಿಯಾ ಅಧಿಕೃತ ಖಾತೆಯಲ್ಲೂ ಪ್ರೋಮೋ ಹಂಚಿಕೊಂಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.