ತುಮಕೂರು: ತಮ್ಮ ಕುಟುಂಬದ ಸದಸ್ಯನಂತದ್ದ ಗಿಳಿ ಕಾಣೆಯಾಗಿದ್ದಕ್ಕೆ ತುಮಕೂರಿನ ಕುಟುಂಬವೊಂದು ಕಂಗಲಾಗಿತ್ತು. ಇದೀಗ ಒಂದು ವಾರದ ಬಳಿಕ ತಮ್ಮ ಗಿಳಿ ಕೈಸೇರಿದ್ದು, ಮಾಲೀಕರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಶಿವಮೊಗ್ಗದ ಭದ್ರಾವತಿಯ ಅರ್ಜುನ್ ಮತ್ತು ರಂಜನಾ ದಂಪತಿ ಕಳೆದ 3 ವರ್ಷದಿಂದ 2 ಗಿಳಿಗಳನ್ನು ಸಾಕುತ್ತಿದ್ದರು. ಕಳೆದ 20 ದಿನಗಳ ಹಿಂದಷ್ಟೇ ಈ ದಂಪತಿ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ದರು. ಜುಲೈ 16ರಂದು ‘ರುಸ್ತುಮಾ’ ಹೆಸರಿನ ಆಫ್ರಿಕನ್ ಗ್ರೇ ತಳಿಯ ಗಿಳಿ ಕಾಣೆಯಾಗಿತ್ತು. ಈ ಗಿಳಿ ನಾಪತ್ತೆ ಬಗ್ಗೆ ತುಮಕೂರಿನ ಅರ್ಜುನ್ ಕುಟುಂಬಸ್ಥರು ಪ್ರಕಟಣೆ ಹೊರಡಿಸಿದ್ದರು. ಆಟೋದಲ್ಲಿ ಪ್ರಚಾರ ನಡೆಸಿ ಕರಪತ್ರವನ್ನೂ ಹಂಚಿದ್ದರು. ಅಲ್ಲದೆ ಗಿಳಿ ಹುಡುಕಿ ಕೊಟ್ಟವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಇದನ್ನೂ ಓದಿ: ಇಂದೇ ಪ್ರಕಟಗೊಳ್ಳಲಿದೆ ಕೆಸಿಇಟಿ ಫಲಿತಾಂಶ 2022! ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ
African parrots Rio and Rustuma found their perfect home with Arjun in Tumakuru. 3 days ago, Rustuma went missing. Rio hasnt left the window ledge & the family hs announced a reward of Rs 50k. Do read : https://t.co/xzpdEDn1wU@news18dotcom@CNNnews18@AmanKayamHai_ @jagora pic.twitter.com/n5eSXOw7m1
— Rohini Swamy (@Rohini_Swamy) July 19, 2022
ಸತತ 1 ವಾರದ ಹುಡುಕಾಟ ನಡೆಸಿದರೂ ಗಿಳಿ ಸಿಕ್ಕಿರಲಿಲ್ಲ. ಹೀಗಾಗಿ ಮಾಲೀಕರು ಬಹುಮಾನದ ಮೊತ್ತವನ್ನು 85 ಸಾವಿರ ರೂ.ಗೆ ಏರಿಸಿದ್ದರು. ಕಳೆದ ಶನಿವಾರ ಕಾಣೆಯಾಗಿದ್ದ ಗಿಳಿ ಕೊನೆಗೂ ಪತ್ತೆಯಾಗಿದೆ. ಅದನ್ನು ಹುಡುಕೊಟ್ಟವರಿಗೆ ಹೇಳಿದಂತೆ 85 ಸಾವಿರ ರೂ. ಬಹುಮಾವನ್ನು ಮಾಲೀಕರು ಹಸ್ತಾಂತರಿಸಿದ್ದಾರೆ.
ಮುದ್ದು ಮುದ್ದಾಗಿ ಸಾಕಿದ್ದ ಗಿಳಿ ನಾಪತ್ತೆ ಹಿನ್ನೆಲೆ ಅರ್ಜುನ್ ಕುಟಂಬಸ್ಥರು ಬೀದಿ ಬೀದಿಯಲ್ಲಿ ಹುಡುಕಾಟ ನಡೆಸಿದ್ದರು. ಒಂದು ವಾರದ ಬಳಿಕ ಮಿಸ್ಸಿಂಗ್ ಆಗಿದ್ದ ಗಿಳಿ ‘ರುಸ್ತುಮಾ’ ಪತ್ತೆಯಾಗಿದ್ದು, ಇಂದು ತನ್ನ ಗೂಡಿಗೆ ಮರಳಿ ಸಂಗಾತಿಯನ್ನು ಸೇರಿದೆ. ತಾವು ಪ್ರೀತಿಯಿಂದ ಸಾಕಿದ್ದ ಗಿಳಿ ಮತ್ತೆ ಮನೆ ಸೇರಿದ್ದಕ್ಕೆ ಅರ್ಜುನ್ ಕುಟುಂಬಸ್ಥರು ಸಂತಸ ಪಟ್ಟಿದ್ದಾರೆ. ಇದೇ ಖುಷಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: 'ಬಿಜೆಪಿ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.