Punarnavi bhupalam boyfriend : ಸಾಲು ಸಾಲು ಹಿಟ್‌ ಸಿನಿಮಾಗಳಿಂದ ಆ ನಟಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಅದೇ ಕ್ರೇಜ್‌ನಿಂದ ಆಕೆಗೆ ಬಿಗ್ ಬಾಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿತ್ತು. ಆರ್‌ಆರ್‌ಆರ್‌ ಗಾಯಕ ರಾಹುಲ್ ಸಿಪ್ಲಿಗಂಜ್ ಜೊತೆ ಈ ಸುಂದರಿಯ ಲವ್ ಟ್ರ್ಯಾಕ್‌ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದ್ರೆ ಇದೀಗ ಈ ನಟಿ ಬೇರೊಬ್ಬರ ಜೊತೆ ಇರು ಫೊಟೋ ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ತೆಲುಗು ಉಯ್ಯಾಲ ಜಂಪಾಲಾ ಚಿತ್ರದಲ್ಲಿ, ರಾಜ್ ತರುಣ್ ಮತ್ತು ಅವಿಕಾ ಗೋರ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ಈ ಬಿಗ್‌ಬಾಸ್‌ ಸುಂದರಿ ಕಾಣಿಸಿಕೊಂಡಿದ್ದರು. ಇದಾದ ನಂತರ ಮತ್ತೆ ಮತ್ತೆ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದರು.


ಇದನ್ನೂ ಓದಿ:ಸಾಂಸ್ಕೃತಿಕ ನಗರಿಯಲ್ಲಿ ರಿಲೀಸ್‌ ಆಗಲಿದೆ ಗೋಲ್ಡನ್‌ ಸ್ಟಾರ್‌ ʼಕೃಷ್ಣಂ ಪ್ರಣಯ ಸಖಿʼ ಫಸ್ಟ್‌ ಸಾಂಗ್‌..!


ಅಲ್ಲದೆ, ಬಿಗ್ ಬಾಸ್ ಗೇಮ್ ಶೋನಲ್ಲಿ, ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಖ್ಯಾತಿಯ ಗಾಯಕ ರಾಹುಲ್ ಸಿಪ್ಲಿಗಂಜ್ ಜೊತೆ ಈ ನಟಿಯ ಲವ್ ಟ್ರ್ಯಾಕ್‌ ಬಹು ದೊಡ್ಡ ಸುದ್ದಿಯಾಗಿತ್ತು. ಬಿಗ್‌ಹೌಸ್‌ನಲ್ಲಿ ಇವರಿಬ್ಬರ ಲವ್‌ ಪ್ರಸಂಗಗಳನ್ನು ನೋಡಿ, ಇಬ್ಬರು ಮದುವೆಯಾಗ್ತಾರೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಇಬ್ಬರು ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.


ಅದು ಬೇರೆಯಾರೂ ಅಲ್ಲ, ಟಾಲಿವುಡ್‌ ನಟಿ ಪುನರ್ನವಿ.. ಈ ನಟಿ ಸಧ್ಯ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಪುನರ್ನವಿ ಆಗಾಗ ತನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ನಟಿ ಶೇರ್‌ ಮಾಡಿರುವ ಫೋಟೋವೊಂದನ್ನು ಸಂಚಲನ ಸೃಷ್ಟಿಸುತ್ತಿದೆ.


ಇದನ್ನೂ ಓದಿ:ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ..! ಅಶ್ಲೀಲ ವಿಡಿಯೋ ವೈರಲ್‌ ಬೆನ್ನಲ್ಲೆ ಜ್ಯೋತಿ ರೈ ಪೋಸ್ಟ್ ಸಂಚಲನ


ಪುನರ್ನವಿ ಶೇರ್ ಮಾಡಿರುವ ಫೋಟೋದಲ್ಲಿ ಅವರು ಒಬ್ಬ ಹುಡುಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಇದೀಗ ನಟಿಯ ಜೊತೆ ಇರುವ ಆ ಯುವಕ ಯಾರು ಅಂತ ನೆಟ್ಟಿಗರು ತಲೆಕಡಿಸಿಕೊಂಡಿದ್ದಾರೆ. ಅಲ್ಲದೆ, ಪುನರ್ನವಿ ಬಾಯ್ ಫ್ರೆಂಡ್ ಅಂತ ನೆಟಿಜನ್‌ಗಳು ಕಾಮೆಂಟ್‌ ಮಾಡುತ್ತಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.