Bigg Boss 8 : ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಜನಪ್ರಿಯತೆ ಹೇಳತೀರದು. ಒಂದೆಡೆ ಈ ಕಾರ್ಯಕ್ರಮಕ್ಕೆ ಸಾಕಷ್ಟು ಟೀಕೆಗಳು ಬರುತ್ತಿದ್ದರೂ ಪ್ರೇಕ್ಷಕರು ಮಾತ್ರ ಕಡಿಮೆಯಾಗುತ್ತಿಲ್ಲ. ಕನ್ನಡ ಅಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


COMMERCIAL BREAK
SCROLL TO CONTINUE READING

ತೆಲಗು ಬಿಗ್‌ ಬಾಸ್‌ ಸೀಸನ್ 7 ಸೂಪರ್ ಹಿಟ್ ಆಗಿದ್ದರಿಂದ ಪ್ರೇಕ್ಷಕರು ಸೀಸನ್ 8 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ನಟ, ನಿರೂಪಕ ನಾಗಾರ್ಜುನ ಬಿಗ್ ಬಾಸ್ ಸೀಸನ್ 8 ರ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅಲ್ಲದೆ, ಬಿಗ್ ಬಾಸ್ ಸೀಸನ್ 8 ರ ಹೊಸ ಲೋಗೋವನ್ನು ರಿವೀಲ್‌ ಮತ್ತು ಪ್ರೋಮೋ ಬಿಡುಗಡೆ ಮಾಡಿದ್ದಾರೆ..


ಇದನ್ನೂ ಓದಿ:ನನ್ನಪ್ಪ ನಮ್ಮನ್ನು ಬಿಟ್ಟು ಹೋಗಿದ್ದು ಈ ಕಾರಣಕ್ಕೆ...! ಬಿಟ್ಹೋದ ತಂದೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿದ ಅನುಶ್ರೀ


ಆದರೆ ಈ ಶೋ ಯಾವಾಗ ಆರಂಭವಾಗಲಿದೆ ಎಂಬುದನ್ನು ಅವರು ಹೇಳಿಲ್ಲ. ಹೊಸದಾಗಿ ಬಿಡುಗಡೆಯಾದ ಹೊಸ ಲೋಗೋ ವರ್ಣರಂಜಿತ ಮತ್ತು ಆಕರ್ಷಕವಾಗಿದೆ. ಹೀಗಿರುವಾಗ.. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ.


ಈ ಬಾರಿ ದೊಡ್ಮನೆಗೆ ಹೆಚ್ಚು ಧಾರಾವಾಹಿ ನಟರು ಮತ್ತು ಆ್ಯಂಕರ್‌ಗಳು ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಸೋಷಿಯಲ್‌ ಮಿಡಿಯಾ ಸ್ಟಾರ್ಸ್‌ ಮತ್ತು ಯೂಟ್ಯೂಬರ್‌ಗಳನ್ನು ಈ ಶೋಗೆ ಕರೆತರಲು ನಿರ್ಮಾಪಕರು ತಯಾರಿ ಆರಂಭಿಸಿದ್ದರು ಎನ್ನಲಾಗಿತ್ತು.. ಈ ಕ್ರಮದಲ್ಲಿ ಸ್ಪರ್ಧಿಗಳು ಆಯ್ಕೆಯಾದರೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶೋ ಆರಂಭವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.