ಮದುವೆಯಾದ 3 ತಿಂಗಳಲ್ಲೇ ವಿಚ್ಛೇದನ!? ಹನಿಮೂನ್ ನಿಂದ ಬಂದ ಕೂಡಲೇ ಪತಿ ವಿರುದ್ಧ ಈ ಹೆಜ್ಜೆ ಇಟ್ಟಿದ್ಯಾಕೆ ಖ್ಯಾತ ನಟಿ?
Famous Tv Actress: ಮೂರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ದಿವ್ಯಾ ಅಗರ್ವಾಲ್ ಇತ್ತೀಚೆಗೆ ಹನಿಮೂನ್‌ನಿಂದ ವಾಪಸಾಗಿದ್ದಾರೆ.. ಆದರೆ ಇದೀಗ ಈಕೆ ತಮ್ಮ ಎಲ್ಲ ಮದುವೆ ಪೋಟೋಗಳನ್ನು ಸೋಷಿಯಲ್ ಮಿಡಿಯಾದಿಂದ ತೆಗೆದು ಹಾಕಿದ್ದಾರೆ..
Divya Agarwal: ಬಿಗ್ ಬಾಸ್ OTT ಸೀಸನ್ 1 ವಿನ್ನರ್ ದಿವ್ಯಾ ಅಗರ್ವಾಲ್ ಮೂರು ತಿಂಗಳ ಹಿಂದೆಯಷ್ಟೇ ಗೆಳೆಯ ಅಪುರ ಪಡಗಾಂವ್ಕರ್ ಅವರನ್ನು ವಿವಾಹವಾದರು. ಮದುವೆಯಾದ ಮೂರು ತಿಂಗಳ ನಂತರ, ನಟಿ ಇತ್ತೀಚೆಗೆ ಪತಿಯೊಂದಿಗೆ ಹನಿಮೂನ್‌ಗಾಗಿ ಭೂತಾನ್‌ಗೆ ಹೋಗಿದ್ದರು. ಹನಿಮೂನ್‌ನಿಂದ ವಾಪಾಸ್ಸಾದ ನಟಿ ಸದ್ಯ ತಮ್ಮ ಪತಿಯೊಂದಿಗಿನ ತಮ್ಮ ಎಲ್ಲಾ ಮದುವೆಯ ಪೋಟೋಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿದ್ದಾರೆ.
ಇದನ್ನೂ ಓದಿ-Fahadh Faasil: ಈ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 'ಆವೇಷಂ' ನಟ ಫಹಾದ್ ಫಾಸಿಲ್ !
ದಿವ್ಯಾ ಅಗರ್ವಾಲ್ ಜೊತೆಗೆ, ಅಪುರ ಪಡ್ಗಾಂವ್ಕರ್ ಕೂಡ ತಮ್ಮ ಸಾಮಾಜಿಕ ಮಾಧ್ಯಮದಿಂದ ಮದುವೆಯ ಚಿತ್ರಗಳನ್ನು ತೆಗೆದುಹಾಕಿದ್ದಾರೆ. ಇದಲ್ಲದೆ, ದಂಪತಿಗಳು ತಮ್ಮ ಹನಿಮೂನ್ ಚಿತ್ರಗಳು ಮತ್ತು ವೀಡಿಯೊಗಳನ್ನು ತೆಗೆದುಹಾಕಿದ್ದಾರೆ.. ದಿವ್ಯಾ ಅವರ ನಡೆ ನೋಡಿದ ನೆಟ್ಟಿಗರು ಮದುವೆಯಾದ ಮೂರು ತಿಂಗಳಲ್ಲೇ ಅವರು ತಮ್ಮ ಪತಿಯಿಂದ ಬೇರೆಯಾಗಲಿದ್ದಾರೆ ಎಂದು ಊಹಿಸುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಎರಡು ದಿನಗಳ ಹಿಂದೆ ದಿವ್ಯಾ ಅಗರ್ವಾಲ್ ತನ್ನ ಪತಿಯೊಂದಿಗೆ ಕಾಣಿಸಿಕೊಂಡಿರು.. ಸಿಂಧೂರ ಧರಿಸಿ ಕ್ಯಾಮರಾ ಕಣ್ಣಿಗೆ ಬಿದ್ದ ನಟಿಗೆ ಮದುವೆ ನಂತರದ ಫೀಲ್ ಹೇಗಿದೆ ಎಂದು ಕೇಳಿದಾಗ "ತುಂಬಾ ಚೆನ್ನಾಗಿದೆ" ಎಂದು ಹೇಳಿದ್ದಾರೆ.. ಆದರೆ ಸದ್ಯ ಹರಿದಾಡುತ್ತಿರುವ ಡಿವೋರ್ಸ್ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದು ತಿಳಿದಿಲ್ಲ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.