Fahadh Faasil Health Issue: ದಕ್ಷಿಣ ಚಿತ್ರರಂಗದ ಪವರ್ ಫುಲ್ ನಟ ಫಹಾದ್ ಫಾಸಿಲ್ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ನಟ ಫಹಾದ್ ಎಡಿಎಚ್‌ಡಿ ಅಂದರೆ ಅಟೆನ್ಶನ್ ಡಿಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಫಹಾದ್ ಫಾಸಿಲ್ 41 ವರ್ಷ ವಯಸ್ಸಿನವರಾದ ಕಾರಣ ಚಿಕಿತ್ಸೆಯು ಕಷ್ಟಕರವಾಗಿದೆ.
ಫಹಾದ್ ಫಾಸಿಲ್ ಇತ್ತೀಚೆಗೆ ಕೋತಮಂಗಲಂನ ಶಾಲೆಯೊಂದರಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅವರು ಅಟೆನ್ಶನ್ ಡಿಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD) ಯೊಂದಿಗೆ ಹೋರಾಡುತ್ತಿರುವುದಾಗಿ ಹೇಳಿದರು. ವಿಶೇಷಚೇತನ ಮಕ್ಕಳ ಶಾಲೆ ಉದ್ಘಾಟನೆಗೆ ಬಂದಿದ್ದ ಫಹಾದ್ ಎಡಿಎಚ್ ಡಿ ಚಿಕಿತ್ಸೆ ಸುಲಭವೇ ಎಂದು ಕೇಳಿದಾಗ ಈ ವಯಸ್ಸಿನಲ್ಲಿ ಈ ಕಾಯಿಲೆಗೆ ಚಿಕಿತ್ಸೆ ನೀಡುವುದು ಕಷ್ಟ ಎಂಬುದು ತಿಳಿದು ಬಂದಿದೆ ಎಂದರು.
ಚಿಕ್ಕ ವಯಸ್ಸಿನಲ್ಲೇ ಪತ್ತೆಯಾಗಿದ್ದರೆ ಚಿಕಿತ್ಸೆ ನೀಡಬಹುದಿತ್ತು ಎಂದು ನನಗೆ ಹೇಳಲಾಗಿದೆ. 41 ನೇ ವಯಸ್ಸಿನಲ್ಲಿ ಪತ್ತೆಯಾದರೆ ಅದನ್ನು ಗುಣಪಡಿಸಬಹುದೇ ಎಂದು ನಾನು ಕೇಳಿದೆ. ಇದು ಕಷ್ಟಸಾಧ್ಯ ಎಂಬುದು ತಿಳಿದುಬಂದಿದೆ ಎಂದರು.
ಅಟೆನ್ಶನ್ ಡೆಫಿಸಿಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್ ಎಂದರೇನು?
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಇದು ಬಾಲ್ಯದಲ್ಲಿ ಕಾಣುವ ನರಗಳ ಬೆಳವಣಿಗೆಯ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಇದರ ಲಕ್ಷಣಗಳು ಬಾಲ್ಯದಿಂದ ಪ್ರೌಢಾವಸ್ಥೆಯವರೆಗೂ ಕಂಡುಬರುತ್ತವೆ. ಚಿಕಿತ್ಸೆ ಮತ್ತು ಔಷಧದಿಂದ ಇದನ್ನು ಗುಣಪಡಿಸಬಹುದು. ಇದರಿಂದ ಬಳಲುತ್ತಿರುವ ಮಕ್ಕಳು ಸಾಮಾನ್ಯವಾಗಿ ಗಮನಹರಿಸಲು ಕಷ್ಟಪಡುತ್ತಾರೆ. ಯೋಚಿಸದೆ ಏನನ್ನಾದರೂ ಮಾಡಲು ಪ್ರಾರಂಭಿಸುತ್ತಾರೆ.
ADHD ಅನ್ನು ಹೇಗೆ ನಿಯಂತ್ರಿಸಬಹುದು?
ಎಡಿಎಚ್‌ಡಿ ಫಹಾದ್ ಅವರಿಗೆ ಇರುವುದು ತಡವಾಗಿ ಪತ್ತೆಯಾಗಿದೆ. ಔಷಧಗಳು, ಮನೋವಿಜ್ಞಾನ ಮತ್ತು ಜೀವನಶೈಲಿಯ ಮೂಲಕ ಅದನ್ನು ನಿಯಂತ್ರಿಸಬಹುದು.
ಇದನ್ನೂ ಓದಿ: ರಣವೀರ್ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು... ನಟಿ ಪರಿಣಿತಿ ಚೋಪ್ರಾ ಸೆನ್ಸೇಷನಲ್ ಕಾಮೆಂಟ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.