BBK 10: ಬಿಗ್‌ಬಾಸ್ ಮನೆಯಲ್ಲಿ ಐದನೇ ವಾರದೇ ಕ್ಯಾಪ್ಟನ್ ಆದ ಮೈಕಲ್: ಕಳಪೆ ಆಟವಾಡಿದ ಸಂಗೀತಾ!
BBK 10: ಬಿಗ್‌ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ ಐದನೇ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ನೇಹಿತ್, ಕಾರ್ತಿಕ್ ಮತ್ತು ತನಿಷಾ ಮೈಕಲ್ ಪರವಾಗಿಆಡಿ ಈತನನ್ನು ಗೆಲ್ಲಿಸಿದ್ದಾರೆ. ಇನ್ನೊಂದು ಕಡೆ ಕ್ಯಾಪ್ಟನ್ಸಿ ಚಟುವಟಿಕೆಯಲ್ಲಿ ಭಾಗ್ಯಶ್ರೀ ಸೋತಿದ್ದಾರೆ.
Michael Became Captain in Bigg Boss: ಬಿಗ್‌ಬಾಸ್ ಮನೆಯ ಕ್ಯಾಪ್ಟೆನ್ಸಿ ರೇಸ್‌ಗೆ ಇಬ್ಬರನ್ನು ಆಯ್ಕೆ ಮಾಡುವ ಚಟವಟಿಕೆಯಲ್ಲಿ ಮೈಕಲ್ ಮತ್ತು ಭಾಗ್ಯಶ್ರೀ ಮಧ್ಯೆ ನಡೆದಿದ್ದು, ಆದರೆ ಕ್ಯಾಪ್ಟನ್ ಆಯ್ಕೆ ಚಟುವಟಿಕೆ ಎಂದಿನಂತೆ ಮೈಕಲ್ ಹಾಗೂ ಭಾಗ್ಯಶ್ರೀ ಮಧ್ಯೆ ನೇರವಾಗಿ ನಡೆಯಲಿಲ್ಲ. ಬದಲಾಗಿ ಮೈಕಲ್ ಪರವಾಗಿ ಮೂವರು, ಭಾಗ್ಯಶ್ರೀ ಪರವಾಗಿ ಮೂವರು ಟಾಸ್ಕ್‌ನಲ್ಲಿ ಪರ್ಫಾಮ್ ಮಾಡಬೇಕಿತ್ತು. ಮೈಕಲ್ ಪರವಾಗಿ ಸ್ನೇಹಿತ್, ಕಾರ್ತಿಕ್, ತನಿಷಾ ಆಡಿದರು. ಭಾಗ್ಯಶ್ರೀ ಪರವಾಗಿ ಸಂಗೀತಾ, ನಮ್ರತಾ, ವಿನಯ್ ಅಖಾಡಕ್ಕೆ ಇಳಿದರು.
ಬಿಗ್‌ಬಾಸ್ ಇಬ್ಬರ ಪರವಾಗಿ ತಲಾ ಮೂವರು ಆಡಬೇಕು ಎಂದು ಘೋಷಿಸಿದಾಗ, ಭಾಗ್ಯಶ್ರೀ ತಮಗೆ ಸ್ಟ್ರಾಂಗೆಸ್ಟ್ ಪ್ಲೇಯರ್ಸ್ ಬೇಕು ಎಂದು ಸಂಗೀತಾ, ವಿನಯ್ ಹಾಗೂ ಕಾರ್ತಿಕ್‌ನ ಪಿಕ್ ಮಾಡಿದರು. ಆದರೆ, ವಿನಯ್ "ಕಾರ್ತಿಕ್ ಇರುವ ತಂಡದಲ್ಲಿ ನಾನು ಆಡಲ್ಲ. ಅವನ ವಿರುದ್ಧವೇ ಆಡಬೇಕು. ಜೊತೆಯಲ್ಲಿ ಆಡಲು ಆಗಲ್ಲ" ಎಂದು ಹೇಳಿ ಹಾಗೇ, ಡೈರೆಕ್ಟ್ ನಾಮಿನೇಷನ್ ವೇಳೆ ತಮ್ಮ ಹೆಸರನ್ನ ತೆಗೆದುಕೊಳ್ಳುವಂತಿಲ್ಲ ಎಂದು ಕಂಡೀಷನ್ ಹಾಕಿದರು. ಇತ್ತ ನಮ್ರತಾ, "ನಮಗೆ ಏನು ಬೆನಿಫಿಟ್" ಎಂದು ನೇರವಾಗಿ ಕೇಳಿದರು. "ನಾಮಿನೇಷನ್ ಮಾಡಲ್ಲ" ಅಂತಲೇ ಭಾಗ್ಯಶ್ರೀ ಒಪ್ಪಿಕೊಂಡರು.
ಇದನ್ನು ಓದಿ: 'ಪರ್ಸನಲ್ ವಿಷಯವನ್ನು, ಯಾರ್ ಹತ್ರನೂ ಹೇಳ್ಕೋಬಾರದು. ಎಲ್ಲ ಎರಡು ತಲೆ ಹಾವುಗಳು..': ಕಾರ್ತಿಕ್ ಸ್ನೇಹಿತ್‌ನಿಂದ ಕಲಿತ್ರಾ!
ಇತ್ತ ಮೈಕಲ್ ಬಳಿ ಸ್ನೇಹಿತ್ "ನನ್ನ, ವಿನಯ್ ಮತ್ತು ನಮ್ರತಾನ ಪಿಕ್ ಮಾಡು" ಎಂದು ಹೇಳಿದರು, ಕೊನೆಗೆ ಮೈಕಲ್ ಪರವಾಗಿ ಆಡಿದ್ದು ಕಾರ್ತಿಕ್, ತನಿಷಾ ಮತ್ತು ಸ್ನೇಹಿತ್.ಮರದ ತುಂಡುಗಳನ್ನು ಹೆಲ್ಮೆಟ್‌ಗೆ ಹಾಕಿರುವ ಚೆಂಡುಗಳಿಂದ ಬೀಳಿಸಬೇಕಿತ್ತು. ರಿಲೇ ಮಾದರಿಯಲ್ಲಿ ಮೂರು ಸ್ಪರ್ಧಿಗಳು ಆಡಬೇಕಿತ್ತು. ಮೊದಲನೇ ಹಂತದಲ್ಲಿ ಸಂಗೀತಾ ಸ್ಲೋ ಆಗಿದ್ದರು. ಚೆಂಡಿನಿಂದ ಮರದ ತುಂಡುಗಳನ್ನ ಬೀಳಿಸಲು ಸಂಗೀತಾ ಒದ್ದಾಡಿದರು.
ಆಟದಲ್ಲಿ ಸ್ನೇಹಿತ್, ಕಾರ್ತಿಕ್ ಮತ್ತು ತನಿಷಾ ಆಟವಾಡಿ ಗೆದ್ದಿದಕ್ಕೆ, ಮೈಕಲ್ ಅಜಯ್ ಕ್ಯಾಪ್ಟನ್ ಪಟ್ಟಕ್ಕೇರಿದರು. ಮೊದಲ ಹಂತವನ್ನ ಪೂರ್ಣಗೊಳಿಸದ ಸಂಗೀತಾ "ಐಟ್ಸ್ ಎ ಶೇಮ್. ಸಾರಿ ಮೇಡಂ. ಟ್ರೈ ಮಾಡಿದರೂ, ಆಗುತ್ತಲೇ ಇರಲಿಲ್ಲ. ನನಗೆ ಅರ್ಧವೂ ಮಾಡಲು ಆಗಲಿಲ್ಲ" ಎಂದು ಹೇಳಿ ಭಾಗ್ಯಶ್ರೀ ಬಳಿ ಕಣ್ಣೀರು ಸುರಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.