Bigg Boss Hindi Season 17:  ಬಿಗ್‌ಬಾಸ್ ಹಿಂದಿ ಸೀಸನ್ 17ರ ಸ್ಪರ್ಧಿಯಾಗಿರುವ ಅಂಕಿತಾ ಲೋಖಂಡೆ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಬ್ರೇಕಪ್‌ ಬಗ್ಗೆ ಮೌನ ಮುರಿದಿದ್ದಾರೆ. ಪವಿತ್ರಾ ರಿಶ್ತಾ ಸೀರಿಯಲ್‌ ಸೆಟ್‌ನಲ್ಲಿ ಪರಿಚಯವಾದ ಅಂಕಿತಾ ಮತ್ತು ಸುಶಾಂತ್ ಇಬ್ಬರು ಪ್ರೀತಿಸುತ್ತಿದ್ದು, 2010ರಲ್ಲಿ ಡೇಟಿಂಗ್ ಪ್ರಾರಂಭಿಸಿದರು ಮತ್ತು 2016ರಲ್ಲಿ ಇಬ್ಬರು ಬೇರೇಯಾದರು. ಬಿಗ್‌ಬಾಸ್‌ ಮನೆಯಲ್ಲಿ ಸಹ-ಸ್ಪರ್ಧಿ ಮುನಾವರ್ ಫರುಕಿ ಮಾತನಾಡುತ್ತಿದ್ದ ವೇಳೆ ಅಂಕಿತಾ,  ತಾನೂ ಸುಶಾಂತ್ ಜೊತೆ ಸುಮಾರು ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ಬಹಿರಂಗಪಡಿಸಿದರು.


COMMERCIAL BREAK
SCROLL TO CONTINUE READING

ಅಂಕಿತಾ "ಸುಶಾಂತ್ ಇದ್ದಕ್ಕಿದ್ದಂತೆ ಕಣ್ಮರೆಯಾದರು. ಅವರು ತುಂಬಾ ಯಶಸ್ಸನ್ನು ಪಡೆಯುತ್ತಿದ್ದರಿಂದ ಜನರು ಈತನ ಕುಶಲತೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತಿದ್ದರು. ಸುಶಾಂತ್‌ ಬ್ರೇಕಪ್‌ ಮಾಡಿಕೊಳ್ಳೊದರ ಕಾರಣದ ಬಗ್ಗೆ ಎಂದಿಗೂ ಯಾವುದೇ ವಿವರಣೆಯನ್ನು ನೀಡಲಿಲ್ಲ" ಎಂದು ಹೇಳಿದರು. ಈ ಹಿಂದೆ, ಅಂಕಿತಾ  ಸುಶಾಂತ್‌ನಿಂದ ಬೇರ್ಪಟ್ಟ ನಂತರ, ಮುಂದುವರಿಯಲು ಎರಡೂವರೆ ವರ್ಷ ತೆಗೆದುಕೊಂಡರು, ನಂತರ ಸುಶಾಂತ್ ಬೇರೆಡೆಗೆ ಹೋದರೂ, ದೀರ್ಘಕಾಲದವರೆಗೆ ಬೇರೆಯವರೊಂದಿಗೆ ಡೇಟಿಂಗ್ ಮಾಡುವುದನ್ನು ಕಲ್ಪಿಸಿಕೊಳ್ಳಲಾಗಲಿಲ್ಲ ಎಂದು ಅಂಕಿತಾ ಮಾತನಾಡಿದರು.


ಇದನ್ನು ಓದಿ: Yuva Movie: ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ಯುವ ಚಿತ್ರದ ಅದ್ದೂರಿ ಇವೆಂಟ್‌


ಪವಿತ್ರಾ ರಿಶ್ತಾದಲ್ಲಿ ಅರ್ಚನಾ ಮತ್ತು ಮಾನವ್ ಪಾತ್ರವನ್ನು ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಿದ್ದು, ಮತ್ತು ಇಬ್ಬರು ಜೋಡಿಯೂ ಎಲ್ಲರಿಗೂ  ಇಷ್ಟವಾಗಿತ್ತು. ಸುಶಾಂತ್ ತಮ್ಮ ಬಾಲಿವುಡ್ ವೃತ್ತಿಜೀವನದ ಫೋಕಸ್‌ ಮಾಡಲು 2011 ರಲ್ಲಿ ಸೀರಿಯಲ್‌ನಿಂದ ದೂರ ಹೋದವರು, ಜೂನ್ 2020 ರಲ್ಲಿ ಅವರ ಹಠಾತ್ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಸುಶಾಂತ್ ಸಾವನ್ನಪ್ಪುವ ಮುಂಚೆ ನಟಿ ರಿಯಾ ಚಕ್ರವರ್ತಿ ಜೊತೆ ಡೇಟಿಂಗ್ ನಡೆಸುತ್ತಿದ್ದರು.


ಸದ್ಯ ವಿಕ್ಕಿ ಜೈನ್ ಅವರನ್ನು ಮದುವೆಯಾಗಿರುವ ಅಂಕಿತಾ, ತಮ್ಮ ಸಂದರ್ಶನಗಳಲ್ಲಿಯೂ ಸುಶಾಂತ್ ಬಗ್ಗೆ ಮಾತನಾಡುತ್ತಾರೆ. “ಒಬ್ಬ ಪುರುಷನಿಗೆ ತನ್ನ ಹೆಂಡತಿ ಟಿವಿ ಸಂದರ್ಶನದಲ್ಲಿ, ತನ್ನ ಮಾಜಿ ಪ್ರಿಯಕರನ ಸಂದರ್ಶನಗಳನ್ನು ಮಾತನಾಡಿರುವುದನ್ನು ನೋಡುವುದು ಮತ್ತು ಅವಳ ಹಳೆಯ ವಿಷಯಗಳ ಬಗ್ಗೆ ಮಾತನಾಡಿದನ್ನು ನೋಡುವುದು ಸುಲಭವಲ್ಲ. ಪ್ರತಿದಿನವೂ ಬೇರೆ ಬೇರೆ ಕಥೆಗಳು ಹೊರಬರುತ್ತಿದ್ದು, ಮತ್ತು ನಾನು ಸುಶಾಂತ್ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದೆ. ವಿಕ್ಕಿ ಬಹಳ ಗೌರವಾನ್ವಿತ ಕುಟುಂಬದಿಂದ ಬಂದವರು. ನನಗೆ ನೆನಸಿದೆ ವಿಕ್ಕಿ ನನ್ನನ್ನು ಕರೆದು ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಬೆಂಬಲಿಸಿದರು ಎಂದು ಅಂಕಿತಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.