Yuva Movie: ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ಯುವ ಚಿತ್ರದ ಅದ್ದೂರಿ ಇವೆಂಟ್‌

Yuva Rajkumar: ದೊಡ್ಮನೆಯ ಯುವರಾಜ್‌ಕುಮಾರ್‌ ನಟಿಸಿರುವ ʼಯುವʼ ಸಿನಿಮಾದ ಬಿಗ್‌ ಇವೆಂಟ್‌ ಪ್ಲಾನ್‌ ಆಗಿದ್ದು, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಯುವ ಚಿತ್ರದ ಪ್ರಮೋಷನಲ್‌ ಕಾರ್ಯಕ್ರಮವನ್ನು ನಡೆಯಲಿದೆಂದು ಚಿತ್ರತಂಡ ತಿಳಿಸಿದೆ.

Written by - Zee Kannada News Desk | Last Updated : Oct 30, 2023, 04:00 PM IST
  • ಅಪ್ಪು ಜನ್ಮದಿನದಂದು ಯುವ ಸಿನಿಮಾ ಬಿಗ್‌ ಇವೆಂಟ್‌
  • 2024ರ ಮಾರ್ಚ್‌ 28 ರಂದು ಯುವ ಚಿತ್ರ ರಿಲೀಸ್
  • ಯುವ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿಗೌಡ
Yuva Movie: ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ಯುವ ಚಿತ್ರದ ಅದ್ದೂರಿ ಇವೆಂಟ್‌ title=

Yuva Kannada Movie: ವರನಟ ರಾಜ್‌ಕುಮಾರ್‌ ಕುಟುಂಬದ ಕುಡಿ ಯುವರಾಜ್‌ಕುಮಾರ್‌ ಅಭಿನಯದ ʼಯುವʼ ಸಿನಿಮಾ ಹೊಸ ಅಪ್ಢೇಟ್‌ ಸಿಕ್ಕಿದ್ದು,ಈ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಎರಡು ಹಾಡಿನ ಚಿತ್ರೀಕರಣ ಬಾಕಿ ಇದೆ. ಇತರ ಎಲ್ಲಾ ಕೆಲಸಗಳು ಕಂಪ್ಲೀಟ್ ಆಗಿದ್ದು, ಪೊಸ್ಟ್‌ಪ್ರೋಡಕ್ಷನ್ ಕೆಲಸವೂ ನಡೆಯುತ್ತಿದೆ.

ಈ ವೇಳೆ ಯುವ ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್‌ ರಾಮ್‌ ಮಾಧ್ಯಮಕ್ಕೆ ಹೇಳಿಕೊಂಡಂತೆ, ಚಿತ್ರದ ಪ್ರಮೋಷನ್ ಮುಂದಿನ ವರ್ಷ ಫೆಬ್ರವರಿಯಲ್ಲಿಯೇ ಆರಂಭಗೊಳ್ಳುತ್ತಿದ್ದು, ಮಾರ್ಚ್-17 ಪುನಿತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದಂದು  ಯುವ ಚಿತ್ರದ ಒಂದು ಸ್ಪೆಷಲ್ ಇವೆಂಟ್ ಪ್ಲಾನ್ ಆಗಿದೆ. ಆದರೆ ಯಾವ ರೀತಿ ಈ ಕಾರ್ಯಕ್ರಮ ಇರುತ್ತದೆ ಎನ್ನುವ ವಿಚಾರವನ್ನು ಎಲ್ಲಿಯೂ ಹಿಂಟ್‌ ಬಿಟ್ಟುಕೊಟ್ಟಿಲ್ಲ.

ಇದನ್ನು ಓದಿ: ತಾಯಿಗೆ ಮಲ್ಲಿಗೆ ಹೂ ಮುಡಿಸಿದ ಯರ್ಥರ್ವ್:‌ ಖುಷಿ ಹಂಚಿಕೊಂಡ ರಾಧಿಕಾ ಪಂಡಿತ್..!

ಯುವ ಸಿನಿಮಾ 2024ರ  ಮಾರ್ಚ್‌ 28 ರಂದು ರಿಲೀಸ್ ಮಾಡಲಾಗುತ್ತಿದ್ದು, ಈ ದಿನ ಎಲ್ಲೆಡೆ ಬರೋ ಈ ಚಿತ್ರದ ಬಗ್ಗೆ ತುಂಬಾನೆ ನಿರೀಕ್ಷೆ ಇದೆ. ದೊಡ್ಮನೆಯ ಯುವರಾಜ್‌ಕುಮಾರ್ ಈ ಸಿನಿಮಾದ ಮೂಲಕವೇ ಬಣ್ಣದ ಲೋಕಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ದೊಡ್ಮನೆ ಫ್ಯಾನ್ಸ್ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆಯನ್ನೆ ಇಟ್ಟುಕೊಂಡಿದ್ದಾರೆ. ಹಾಗೆಯೇ ಈ ನಿರೀಕ್ಷೆಯನ್ನ ಚಿತ್ರದ ಮೊದಲ ಟೀಸರ್ ಡಬಲ್ ಟ್ರಿಪಲ್ ಮಾಡಿದೆ.

ಯುವ ಸಿನಿಮಾದಲ್ಲಿ ನಾಯಕ ಯುವರಾಜ್‌ಕುಮಾರ್‌ಗೆ  ಕಾಂತಾರ ಚಿತ್ರ ಖ್ಯಾತಿಯ ಸಪ್ತಮಿ ಗೌಡ ಜೋಡಿ ಆಗಿಲಿದ್ದು, ಇನ್ನೂ ಇವರ ಪಾತ್ರದ ಬಗ್ಗೆ ಎಲ್ಲಿಯೂ ಮಾಹಿತಿ ರಿವಿಲ್‌ ಮಾಡಿಲ್ಲ. ಸಂತೋಷ್ ಆನಂದ್‌ ರಾಮ್ ಇಲ್ಲಿವರೆಗೂ ಸ್ಟಾರ್ ನಟರ ಜೊತೆಗೆ ಸಿನಿಮಾ ಮಾಡಿದ್ದಾರೆ ಹೊರತು, ಫಸ್ಟ್ ಟೈಮ್ ಒಬ್ಬ ಯುವ ಪ್ರತಿಭಾವಂತ ನಟನನ್ನ ಪರಿಚಯಿಸುತ್ತಿದ್ದಾರೆ. ನಿರ್ದೇಶಕ ಜವಾಬ್ದಾರಿ ದೊಡ್ಡಮಟ್ಟದಲ್ಲಿಯೇ ಇದ್ದು, ಫ್ಯಾನ್ಸ್ ನಿರೀಕ್ಷೆ ಕೂಡ ದೊಡ್ಡಮಟ್ಟದಲ್ಲಿಯೇ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News