Sushma Rao Entry to Bigg Boss : ಕಳೆದ ವಾರದ ವೀಕೆಂಡ್ ಎಪಿಸೋಡ್‌ನ ಎಲಿಮಿನೇಷನ್ ಟೈಮಲ್ಲಿ ವರ್ತೂರ್ ಸಂತೋಷ್, ಸುದೀಪ್‌ ಅವರಿಗೆ, ಬಿಗ್‌ಬಾಸ್‌ ಮನೆಯ ಸದಸ್ಯರಿಗೆ, ತಮಗೆ ಓಟ್ ಹಾಕಿದ ಹದಿಮೂರು ಲಕ್ಷಕ್ಕಿಂತ ಅಧಿಕ ಜನರಿಗೆ ಒಂದು ಬಿಗ್ ಶಾಕ್ ನೀಡಿದ್ದರು.


COMMERCIAL BREAK
SCROLL TO CONTINUE READING

‘ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಷೋದಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಯಿತು. 


ಕಿಚ್ಚಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು. ಇದೀಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಇಡೀ ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ.


ಇದನ್ನೂ ಓದಿ : BBK10: ಕಿಚ್ಚನ ಮಾತಿಗೂ ಒಪ್ಪದ ವರ್ತೂರ್.. ಹೊರಹೋಗುವ ಪಟ್ಟು ಹಿಡಿದಿರೋದು ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ! 
 
ಇದೇ ಹೊತ್ತಿನಲ್ಲಿ ಬಿಗ್‌ಬಾಸ್‌ ಮನೆಗೆ ಮತ್ತೊಬ್ಬರು ಗೆಸ್ಟ್ ಎಂಟ್ರಿ ಕೊಟ್ಟಿದ್ದಾರೆ! ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ  ನಟಿ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.


ಹಾಗಾದರೆ ಈ ಎಂಟ್ರಿ ದೀಪಾವಳಿ ಸಂಭ್ರಮದ ಭಾಗವೇ? ಸುಷ್ಮಾ ದಿರಿಸೇನೋ ಹಬ್ಬದ ಸಂಭ್ರಮವನ್ನು ಪ್ರತಿನಿಧಿಸುವ ಹಾಗೆಯೇ ಇದೆ. ಆದರೆ ಅವರು ಮನೆಯೊಳಗೆ ತೆರಳಿ ಹೋಗಿದ್ದು ನೇರವಾಗಿ ವರ್ತೂರ್ ಸಂತೋಷ್ ಬಳಿಗೆ. 


 


ಬಿಗ್ ಬಾಸ್ ನಿಯಮ ಮೀರಿ ಅರ್ಧಕ್ಕೆ ಹೊರ ಬರುವವರಿಗೆ ಬೀಳುತ್ತೆ ಭಾರೀ ದಂಡ.! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.