BBK 10: ತನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್‌ ತಲೆಬೋಳಿಸಿಕೊಳ್ಳುವ ಸವಾಲ್‌ ಕೂಡ ಹಾಕಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದಾರೆ.. ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿದೆಯಾ? ಅದೇ ಅವರು ಮನೆಯಿಂದ ಹೊರಬರಲೂ ಕಾರಣವಾಯ್ತಾ? ಇಂಥದ್ದೊಂದು ಅನುಮಾನ ಹುಟ್ಟಿದೆ.. 


COMMERCIAL BREAK
SCROLL TO CONTINUE READING

‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ಕಾರ್ತಿಕ್‌ಗೆ ಕೈ ಮುಗಿದಿದ್ದಾರೆ. 


ಇದನ್ನೂ ಓದಿ-Janhvi – Khushi Kapoor: ತಮಿಳಿಗೆ ಎಂಟ್ರಿ ಕೊಟ್ಟ ಜಾನ್ವಿ ಸಹೋದರಿ..! ಸೌತ್‌ ಸಿನಿರಂಗವನ್ನೇ ಆಳ್ತಾರಾ ಶ್ರೀದೇವಿ ಪುತ್ರಿಯರು?


ಹಾಗೆಯೇ, ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ?’ ಎಂದು ಕಾರ್ತಿಕ್ ಅವರನ್ನು ಕುಟುಕಿದ್ದಾರೆ. ಅದನ್ನು ಕೇಳಿ ಸಂಗೀತಾ ಬಳಿಯಿಂದ ಕಾರ್ತಿಕ್ ಎದ್ದು ಹೋಗಿದ್ದಾರೆ.


‘ನನಗೆ ಈ ಗೇಮ್ ಆಡಲು ಇಷ್ಟವಿಲ್ಲ’ ಎಂದು ಸಂಗೀತಾ ಬಿಗ್‌ಬಾಸ್ ಬಳಿಯಲ್ಲಿ ಬಿಕ್ಕಿ ಬಿಕ್ಕಿ ವಿನಂತಿಸಿಕೊಂಡಿದ್ದಾರೆ. ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವ ದೃಶ್ಯವೂ ಪ್ರೋಮೊದಲ್ಲಿದೆ. ಹಾಗಾದರೆ ಸಂಗೀತಾ ಮನೆಯಿಂದ ಹೊರಗೆ ಹೋದರಾ? ಅಥವಾ ಒಳಗೇ ಉಳಿದುಕೊಳ್ಳುತ್ತಾರಾ? 


ಈ ಕುತೂಹಲ ತಣಿಯಬೇಕು ಅಂದರೆ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡದ ನೇರಪ್ರಸಾರವನ್ನು ವೀಕ್ಷಿಸಬೇಕು.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.


ಇದನ್ನೂ ಓದಿ-BBK 10: "ತುಕಾಲಿ ಸಂತು ‘ಮಾಮ ಕೆಲಸ’ ಮಾಡ್ತಾರೆ ಅಂತಿದ್ರು. ಈಗ ವಿನಯ್ ಮಾಡ್ತಿರೋದೇನು?": ಕಟುವಾಗಿ ಪ್ರಶ್ನಿಸಿದ ವೀಕ್ಷಕರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.