BBK 10: "ತುಕಾಲಿ ಸಂತು ‘ಮಾಮ ಕೆಲಸ’ ಮಾಡ್ತಾರೆ ಅಂತಿದ್ರು. ಈಗ ವಿನಯ್ ಮಾಡ್ತಿರೋದೇನು?": ಕಟುವಾಗಿ ಪ್ರಶ್ನಿಸಿದ ವೀಕ್ಷಕರು!

Bigg Boss Kannada: ಬಿಗ್‌ಬಾಸ್‌ ಮನೆಯೊಳಗೆ ವಿನಯ್‌ ಜೊತೆ ತನಿಷಾ ಮಾತಾಡಿದ್ದೊಂದು ಆದರೆ, ತಮ್ಮ ಗ್ಯಾಂಗ್‌ ಮುಂದೆ ವಿನಯ್‌ ಹೇಳಿದ್ದೇ ಬೇರೆ ರೀತಿಯಲ್ಲಿ ಅನ್ನೋದನ್ನ ವೀಕ್ಷಕರು ಗಮನಿಸಿದ್ದು, ಹೀಗಾಗಿ ವಿನಯ್ ಬಗ್ಗೆ ವೀಕ್ಷಕರು ಅಸಮಾಧಾನಗೊಂಡು, ತುಕಾಲಿ ಸಂತುಗಿದ್ದ ಬಿರುದು ಈಗ ವಿನಯ್‌ಗೆ ಹೋಗಿದೆ ಅಂತಿದ್ದಾರೆ.  

Written by - Zee Kannada News Desk | Last Updated : Nov 22, 2023, 11:57 AM IST
  • ತನಿಷಾ "ವಿನಯ್ ಮತ್ತು ನಮ್ರತಾ ಫೇಕ್‌. ಯಾಕಂದ್ರೆ ಅವರಿಬ್ಬರೂ ಪ್ರಿಪೇರ್‌ ಆಗಿ ಬಂದಿದ್ದಾರೆ" ಅಂತ ಹೇಳಿದನ್ನ ಇಟ್ಟುಕೊಂಡು ವಿನಯ್‌ ತನಿಷಾನ ನಾಮಿನೇಟ್‌ ಮಾಡಿದರು.
  • ತನಿಷಾ ಜೊತೆಗಿನ ಮಾತುಕತೆ ಬಳಿಕ ಸಂಗೀತಾ, ನಮ್ರತಾ, ಸ್ನೇಹಿತ್ ಬಳಿ ಬಂದು ವಿನಯ್ ಬೇರೆನೇ ಹೇಳಿದ್ದಾರೆ.
  • ತುಕಾಲಿ ಸಂತು ‘ಮಾಮ ಕೆಲಸ’ ಮಾಡ್ತಾರೆ ಅಂತಿದ್ರು. ಈಗ ವಿನಯ್ ಮಾಡ್ತಿರೋದೇನು? ಎಂದು ವೀಕ್ಷಕರು ಕಟುವಾಗಿ ಪ್ರಶ್ನೆ ಮಾಡ್ತಿದ್ದಾರೆ.
BBK 10: "ತುಕಾಲಿ ಸಂತು ‘ಮಾಮ ಕೆಲಸ’ ಮಾಡ್ತಾರೆ ಅಂತಿದ್ರು. ಈಗ ವಿನಯ್ ಮಾಡ್ತಿರೋದೇನು?": ಕಟುವಾಗಿ ಪ್ರಶ್ನಿಸಿದ ವೀಕ್ಷಕರು! title=

Vinay Vs Tanisha: ಬಿಗ್‌ಬಾಸ್‌ ಮನೆಯಲ್ಲಿ ಏಳನೇ ವಾರದ ನಾಮಿನೇಷನ್ ಟಾಸ್ಕ್ ನಡೆದಿದ್ದು, ವಿನಯ್ ತನಿಷಾರನ್ನ ನಾಮಿನೇಟ್ ಮಾಡಿ, "ನಾವು ಪ್ರಿಪೇರ್ ಆಗಿ ಬಂದಿದ್ದೀವಿ. ಬುಕ್ ಓದಿಕೊಂಡು ಬಂದಿದ್ದೀವಿ. ಏನೋ ನೋಡಿಕೊಂಡು ಬಂದಿದ್ದೀವಿ ಅಂತ ಹೇಳುವ  ʼಬಿಗ್‌ಬಾಸ್‌’ ಅನ್ನೋದು ಇಂಡಿಯಾದಲ್ಲಿ ಮಾತ್ರ, ಬೇರೆ ದೇಶದಲ್ಲಿ ‘ಬಿಗ್ ಬ್ರದರ್’ ಅಂತಾರೆ ಅಂತೆಲ್ಲಾ ಹೇಳಿ ಅಷ್ಟು ಪ್ರಿಪೇರ್ ಆಗಿ ಬಂದಿರೋ ಅವರು ನಮ್ಮನ್ನ ಫೇಕ್ ಅಂತ ಕರೆಯುತ್ತಾರೆ. ಇದು ನನ್ನ ವೈಯಕ್ತಿಕ ಕಾರಣ.. ಫೇಕ್ ತನಿಷಾ" ಅಂತ್ಹೇಳಿ ನಾಮಿನೇಟ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಮುಂದೆ "ವಿನಯ್ ಮತ್ತು ನಮ್ರತಾ ಫೇಕ್‌. ಯಾಕಂದ್ರೆ ಅವರಿಬ್ಬರೂ ಪ್ರಿಪೇರ್‌ ಆಗಿ ಬಂದಿದ್ದಾರೆ" ಅಂತ ತನಿಷಾ ಹೇಳಿದಕ್ಕೆ, ಅದನ್ನೇ ಇಟ್ಟುಕೊಂಡು ವಿನಯ್‌ ನಾಮಿನೇಟ್‌ ಮಾಡಿದ್ದರು. ಹೀಗಾಗಿ, ತಾವು ಹಾಗೆ ಹೇಳಿದ್ಯಾಕೆ ಅಂತ ಸ್ಪಷ್ಟನೆ ಕೊಡೋಕೆ ತನಿಷಾ ಮುಂದಾದರು. ಆಗ ತನಿಷಾ, ಪ್ರಿಪೇರ್ ಆಗಿ ಬಂದಿದ್ದೀರಾ ಅಂದ್ರೆ ನಾವು ಇಷ್ಟೇ ಮಾತನಾಡಬೇಕು, ಇಷ್ಟ್ರಲ್ಲೇ ಇರಬೇಕು.. ಅಂದ್ರೆ ಲಿಮಿಟೇಶನ್‌ನಲ್ಲಿ ಇದ್ದೀರಾ ಅಂತ. ಇಬ್ಬರಿಗೂ ನಾನು ಇದೇ ಅರ್ಥದಲ್ಲಿ ಹೇಳಿದ್ದು ಎಂದರು.ಆಗ ವಿನಯ್ ನಂಗೂ ನಿಂಗೂ ಏನೂ ಇಲ್ಲವೇ ಇಲ್ಲ ಎಂದಿದಕ್ಕೆ ತನಿಷಾ ನಮ್ಮಿಬ್ಬರ ನಡುವಿನ ಕಿತ್ತಾಟಗಳು ಅಲ್ಲಿಗೇ ಎಂಡ್ ಆಗುತ್ತಿವೆ. ಯಾಕಂದ್ರೆ ನಾವಿಬ್ಬರೂ ಲೌಡ್ ಎಂದು ಹೇಳಿದರು. 

ಇದನ್ನೂ ಓದಿ: 

ತನಿಷಾ ಜೊತೆಗಿನ ಮಾತುಕತೆ ಬಳಿಕ ಸಂಗೀತಾ, ನಮ್ರತಾ, ಸ್ನೇಹಿತ್ ಬಳಿ ಬಂದು ವಿನಯ್ ಬೇರೆನೇ ಹೇಳಿದ್ದಾರೆ. ವಿನಯ್ ನನ್ನ ಹತ್ತಿರ ಬಂದು ಫುಲ್ ಕುಚ್ಚಿಕು ಆಗೋದಕ್ಕೆ ವಿವರಣೆ ಕೊಡ್ತಿದ್ರು. ನಾನು ಹಾಗಲ್ಲ ಹೇಳಿದ್ದು. ನನಗೆ ಯಾರೋ ಇನ್‌ಫ್ಲುಯೆನ್ಸ್ ಮಾಡಿದ್ರು. "ನಂಗೆ ನಿಂಗೆ ಗೊತ್ತಲ್ವಾ.. ಏನೂ ಇಲ್ಲ ಅಂತ. ನಿಮ್ಮ ಮೇಲೆ ಏನಾದರೂ ಬರಬೇಕು ಅಂತಂದರೆ ಅದು ಯಾರಾದರೂ ಹೇಳಿಯೇ ಬರಬೇಕು" ಎಂದರು ಅಂದಾಗ ಸಂಗೀತಾ , ಅಂದ್ರೆ ಅವಳದ್ದು ಸ್ವಂತ ಏನೂ ಇಲ್ವಾ? ಇನ್‌ಫ್ಲುಯೆನ್ಸ್‌ ಆಗಿದ್ದಾಳಂತಾ? ಎಂದು ಹೇಳಿದಾಗ ವಿನಯ್, ನಾನು ಇವಾಗ ನ್ಯೂ ಬೆಸ್ಟಿ ಎಂದರು.

ಇದನ್ನು ನೋಡಿದ ವೀಕ್ಷಕರು ತನಿಷಾ ಹೇಳಿದ್ದೇ ಒಂದು. ಅದನ್ನ ತಂದು ತಮ್ಮ ಗ್ಯಾಂಗ್‌ನ ಮುಂದೆ ವಿನಯ್‌ ಹೇಳಿದ್ದೇ ಇನ್ನೊಂದು. ವಿನಯ್ ತಿರುಚಿ ಹೇಳಿದ್ದಾರೆ. ತುಕಾಲಿ ಸಂತು ‘ಮಾಮ ಕೆಲಸ’ ಮಾಡ್ತಾರೆ ಅಂತಿದ್ರು. ಈಗ ವಿನಯ್ ಮಾಡ್ತಿರೋದೇನು? ಎಂದು ವೀಕ್ಷಕರು ಕಟುವಾಗಿ ಪ್ರಶ್ನೆ ಮಾಡ್ತಿದ್ದಾರೆ. ಮತ್ತೆ "ನಾಮಿನೇಷನ್ ವೇಳೆ ವಿನಯ್ ಕೊಟ್ಟ ಕಾರಣಗಳ ಬಗ್ಗೆ ತನಿಷಾ ಕ್ಲಾರಿಟಿ ನೀಡುತ್ತಿದ್ದರು. ಆದರೆ, ಅದನ್ನ ತಿರುಗಿಸಿ ಸಂಗೀತಾ ಬಳಿ ವಿನಯ್ ಹೇಳಿದರು. ಈ ಸಡನ್‌ ಟರ್ನ್‌ ತುಕಾಲಿ ಸಂತು ಟ್ರಿಕ್ಸ್‌ ಹೋಲುತ್ತದೆ. ವಿನಯ್ ಟ್ವಿಸ್ಟ್ ಮಾಡಿ ಹೇಳಿದ ರೀತಿ, ಅದನ್ನ ಉಳಿದವರು ಫಾಲೋ ಮಾಡಿದ ರೀತಿ ವೀಕ್ಷಕರಿಗೆ ಫೂಲಿಶ್ ಆಗಿ ಕಾಣುತ್ತಿದೆ. ಈ ಗ್ಯಾಂಗ್‌ ಜೊತೆಗೆ ಸಂಗೀತಾ ಟಾಸ್ಕ್‌ಗಳಿಗೆ ಮಾತ್ರ ಲಿಮಿಟ್‌ ಆಗಿರಬೇಕು’’ ಎಂಬು ಅಭಿಪ್ರಾಯ ವೀಕ್ಷಕರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News