BBK 10: ಮುಗ್ಧತೆಯ ಮುಖವಾಡದಿಂದ ಮತ್ತೆ ಜನರನ್ನು ಮಕ್ಕರ್ ಮಾಡ್ತಾರಾ ಡ್ರೋನ್ ಪ್ರತಾಪ್?!
Drone Prathap innocence: ಬಿಗ್ ಬಾಸ್ ಮನೆಯಲ್ಲಿ ಇದೀಗ ಅಸಲಿ ಆಟ ಶುರುವಾಗಿದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ ಕಾರಣ ಇಷ್ಟೇ.. ಡ್ರೋನ್ ಪ್ರತಾಪ್ ತನ್ನ ಆಟದ ವರಸೆ ಬದಲಿಸಿದ್ದು.
Drone Prathap: ವಾರದ ಕಥೆ ಕಿಚ್ಚನ ಜೊತೆ ಮುಗಿದ ಮೇಲೆ, ವೀಕ್ಷಕರು ಕಳುಹಿಸಿದ ಸಲಹೆ ಆಧಾರದ ಮೇಲೆ ದೊಡ್ಮನೆ ಮಂದಿ ನಡೆದುಕೊಳ್ಳುತ್ತಿದ್ದಾರಾ ಅಥವಾ ಕಿಚ್ಚನ ಮಾತುಗಳನ್ನು ಓವರ್ ಆಗಿ ತೆಗೆದುಕೊಂಡು ಬಲಪ್ರರ್ಶನ ಮಾಡುತ್ತಿದ್ದಾರಾ ಅನ್ನೋದೇ ಈಗ ರಹಸ್ಯ ಸಂಗತಿ..
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಡ್ರೋನ್ ಪ್ರತಾಪ್ ಇದ್ದಿದ್ದ ರೀತಿಗೂ ಇತ್ತೀಚೆಗೆ ಆಗುತ್ತಿರುವ ಬದಲಾವಣೆಗಳಿಗೂ ಫ್ಯಾನ್ಸ್ ಶಾಕ್ ಆಗಿದ್ದಾರೆ. ಹೌದು ನಾಮಿನೇಷನ್ ಪಾಸ್ ಟಾಸ್ಕ್‌ನಲ್ಲಿ ಎಲ್ಲರಿಗೂ ಅಚ್ಚರಿ ಎನ್ನಿಸುವಂತೆ ಮಾಡಿದ್ದಾರೆ.
ಇದನ್ನೂ ಓದಿ-ರಾಜ್ಯೋತ್ಸವಕ್ಕೆ ರಾಕಿಬಾಯ್ ರೀಎಂಟ್ರಿ ಫಿಕ್ಸ್..! ಆದರೆ ನಿಮ್ಮ ನಿರೀಕ್ಷೆಯಂತಲ್ಲ...
ಬಲೂನ್ ಒಡೆದು ನಾಮಿನೇಷನ್ ಪಾಸ್ ಹುಡುಕಬೇಕಿತ್ತು. ಅದರಲ್ಲಿ ಡ್ರೋನ್‌ಗೆ ಮೂರು ನಾಮೀನೇಷನ್ ಪಾಸ್‌ಗಳು ಸಿಗುತ್ತವೆ. ಆಗ ಕಾರ್ತಿಕ್ ಮತ್ತು ವಿನಯ್ ಅದನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಆಗ ಡ್ರೋನ್ ಪ್ರತಾಪ್ ತೋರಿದ ಬುದ್ಧಿವಂತಿಕೆ ಅಭಿಮಾನಿಗಳು ನಿಬ್ಬೆರಗಾಗುವಂತೆ ಮಾಡಿದೆ.
ಸದ್ಯ ತಮ್ಮ ಆಟದ ವರಸೆಯನ್ನು ಬದಲಿಸಿದ ಡ್ರೋನ್ ಪ್ರತಾಪ್ ಅವರ ಕುರಿತಾಗಿ ಸೋಷಿಯಲ್ ಮಿಡಿಯಾದಲ್ಲಿ ಇಂತಹದ್ದೊಂದು ಚರ್ಚೆ ಶುರುವಾಗಿದೆ. ಏನದು ಅಂತೀರಾ .. ಇಲ್ಲಿದೆ ಉತ್ತರ..
ಈ ಹಿಂದೆ ಡ್ರೋನ್ ಪ್ರತಾಪ್ ತಾನು ಡ್ರೋನ್ ಕಂಡುಹಿಡಿದಿದ್ದೇನೆ ಎಂದು ಇಡೀ ಕರ್ನಾಟಕದ ಜನತೆಗೆ ಮಕ್ಕರ್ ಮಾಡಿದ್ದರು. ಇದೆಲ್ಲವನ್ನು ಹೊರತುಪಡಿಸಿ ಬಿಗ್ ಬಾಸ್ ಮನೆಗೆ ಬಂದಾಗ ಅವರು ತುಂಬಾ ಸಾಫ್ಟ್ ಮತ್ತು ಇನೋಸೆಂಟ್ ಅಂದುಕೊಂಡು ಅವರಿಗೆ ಸಪೋರ್ಟ್ ಮಾಡುವವರು ಒಂದು ಕಡೆ ಆದ್ರೆ .. ಪ್ರತಾಪ್‌ನ ಇತ್ತೀಚೆನ ಆಟದ ಶೈಲಿಯನ್ನು ನೋಡಿ ಮುಗ್ಧ ಮುಖವಾಡ ಹಾಕಿಕೊಂಡಿದ್ದಾರೆ ಎನ್ನುತ್ತಿರುವ ಜನ ಇನ್ನೊಂದು ಕಡೆ.
ಒಟ್ಟಿನಲ್ಲಿ ಡ್ರೋನ್ ಪ್ರತಾಪ್ ಸದ್ಯ ಭಾರೀ ಸ್ಪೋಟಿವ್ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಅವರು ನಿಜವಾಗಿಯೂ ಮುಗ್ಧರಾ? ಅಥವಾ ಅಷ್ಟು ಜನ ಬಲಶಾಲಿ ಆಟಗಾಗರ ಮುಂದೆ ಪ್ರತಾಪ್ ಹೀಗೆ ನಡೆದುಕೊಳ್ಳಲೇಬೇಕಾ? ಅನ್ನೋ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ-ನಟಿ ಅಮಲಾ ಪೌಲ್ ಎರಡನೇ ಮದುವೆ ಆಗ್ತಿರೋ ಈ ವ್ಯಕ್ತಿ ಯಾರು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.