BBK10: ಈ ವೀಕೆಂಡ್‌ನಲ್ಲಿ ಕಿಚ್ಚ ಎಲ್ಲರಿಗೂ ಬಿಸಿಬಿಸಿ ಕಾಫಿ ಕೊಟ್ಟು ವಾರ್ಮಪ್‌ ಮಾಡಿದ್ದರು. ಹಾಗೆಯೇ ಅಂತಿಮ ಹಂತಕ್ಕೆ ಕೆಲವೇ ಹೆಜ್ಜೆ ದೂರವಿರುವವರಿಗೆ ಕೆಲವು ಕಿವಿಮಾತನ್ನೂ ಹೇಳಿದ್ದರು. ಅದರ ಪರಿಣಾಮ ಈ ವಾರದ ಆರಂಭದಲ್ಲಿಯೇ ಕಾಣಿಸುತ್ತಿದೆ. 


COMMERCIAL BREAK
SCROLL TO CONTINUE READING

ಚಳಿಗಾಲದ ಈ ವಾರದಲ್ಲಿಯೂ ಬಿಗ್‌ಬಾಸ್ ಮನೆಯಲ್ಲಿ ಮಾತಿನ ಕಿಡಿ ಹಾರಿದೆ. ಅದರ ಝಲಕ್ ಪ್ರೋಮೊದಲ್ಲಿ ಜಾಹೀರಾಗಿದೆ. ಬಿಗ್‌ಬಾಸ್‌ ಒಂದಿಷ್ಟು ಸಂಖ್ಯೆಗಳಿರುವ ಫಲಕಗಳನ್ನು ಮನೆಮಂದಿಗೆ ನೀಡಿದ್ದಾರೆ. ಆ ಫಲಕಗಳಲ್ಲಿರುವ ಮೌಲ್ಯಗಳಲ್ಲಿ ತಮ್ಮ ಮೌಲ್ಯ ಏನು ಎಂಬುದನ್ನು ಸದಸ್ಯರು ಹೇಳಿ, ಉಳಿದವರನ್ನು ಕನ್ವಿನ್ಸ್ ಮಾಡಿ ಆ ಫಲಕವನ್ನು ತಮ್ಮದಾಗಿಸಿಕೊಳ್ಳಬೇಕು. 


ಇದನ್ನೂ ಓದಿ-Dunki Collection: ಶಾರುಖ್ ಸಹ ಡಂಕಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್‌ ಮಾಡಲ್ಲ ಎಂದಿದ್ರಂತೆ!


ಇದನ್ನು ನಿರ್ಧರಿಸುವಾಗ ವರ್ತೂರು ಸಂತೋಷ್ ಇಪ್ಪತ್ತೈದು ಸಾವಿರದ ಫಲಕ ಹಿಡಿದರೆ, ಪ್ರತಾಪ್‌ ಐವತ್ತು ಸಾವಿರದ ಫಲಕ ಹಿಡಿದಿದ್ದಾರೆ. ಆದರೆ ಕಾರ್ತಿಕ್‌, ತನಿಷಾ, ವಿನಯ್ ಮತ್ತು ಸಂಗೀತಾ ನಡುವೆ ಇಪ್ಪತ್ತು ಲಕ್ಷದ ಫಲಕಕ್ಕಾಗಿ ಮನಸ್ತಾಪ ಉಂಟಾಗಿದೆ. ಸಂಗೀತಾ, ‘ನನ್ನ ಈ ಜರ್ನಿ ಕಾಂಪ್ಲಿಕೇಟೆಡ್ ಆಗಿ ಶುರುವಾಗಿತ್ತು. 


ಅಸಮರ್ಥರಾಗಿ’ ಎಂದು ಹೇಳಿದ್ದು ವಿನಯ್ ಅವರನ್ನು ಕೆರಳಿಸಿದೆ. ‘ಅಸಮರ್ಥರು ಎಂದು ಹೇಳಿಕೊಳ್ಳುವುದು ಕಾರ್ಡ್‌ ಪ್ಲೇ ಮಾಡಿದ ಹಾಗೆಯೇ ನನಗೆ ಅನಿಸುತ್ತಿದೆ’ ಎಂದು ನೇರವಾಗಿ ಹೇಳಿದ್ದಾರೆ. ತನಿಷಾ, ‘ಇದ್ದದ್ದು ಇದ್ದಂಗ ಹೇಳಿದ್ರೆ ಎದ್ದುಬಂದು ಎದೆಗೆ ಒದ್ರಂತೆ. 


ಇದನ್ನೂ ಓದಿ-BBK10: ಸಂಗೀತಾ ಗೆಲ್ಬೇಕು; ಕಾರ್ತೀಕ್ ಗೆಲ್ತಾರೆ-ಸಿರಿ


ಅಂಥವ್ರು ತುಂಬ ಜನ ಇದ್ದಾರೆ ಈ ಮನೆಯಲ್ಲಿ’ ಎಂದು ಹೇಳಿದ್ದು ವಿನಯ್ ಅವರನ್ನು ಇನ್ನಷ್ಟು ಕೆರಳಿಸಿದೆ. ‘ನಿಂಗೆ ತಾಖತ್ತಿದ್ರೆ ನನ್ನ ಎದೆಗೆ ಒದ್ದು ನೋಡು’ ಎಂದು ಸವಾಲು ಹಾಕಿದ್ದಾರೆ. ಕಾರ್ತಿಕ್ ಕೂಡ ತನಿಷಾ ಬೆಂಬಲಕ್ಕೆ ನಿಂತು, ‘ನಾನು ನಿಂತ್ಕೊಂಡ್ರೆ ಬುಡಾನೇ ಅಲ್ಲಾಡಿಸ್ತೀನಿ’ ಎಂದು ಜೋರಾಗಿ ಕಿರುಚಿದ್ದಾರೆ. 


ಒಟ್ಟಾರೆ ಹೊಸ ವರ್ಷದ ಹೊಸ ವಾರ ಸಖತ್ ಹೀಟ್‌ನೊಂದಿಗೆ ಶುರುವಾಗಿದೆ. ಹಾಗಾದ್ರೆ ಈ ವಾರವಿಡೀ ಇದರ ಕಿಚ್ಚು ಮುಂದುವರಿಯಲಿದೆಯೇ? ಫೈಟ್‌ ಅತಿರೇಕಕ್ಕೆ ತಲುಪಲಿದೆಯೇ? 
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಬಿಗ್‌ಬಾಸ್‌ ವೀಕ್ಷಿಸಬೇಕು.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ