Bhagyashree eliminated : ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಭಾಗ್ಯಶ್ರೀ ಅವರ ಪಯಣ ಇಂದು ಕೊನೆಗೊಂಡಿದೆ. ಇಂದಿನ ಸುದೀಪ್ ಜೊತೆಗಿನ ಸೂಪರ್ ಸಂಡೆಯ ಎಪಿಸೋಡ್‌ನಲ್ಲಿ ಕಿಚ್ಚ, ಭಾಗ್ಯಶ್ರೀ ಬಿಗ್‌ಬಾಸ್‌ ಮನೆಯಿಂದ ಹೊರಬೀಳುತ್ತಿರುವ ವಿಷಯವನ್ನು ಘೋಷಿಸಿದರು.


COMMERCIAL BREAK
SCROLL TO CONTINUE READING

ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. 


ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಸುದೀಪ್‌ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡ. ಆದರೆ ಬಿಗ್‌ಬಾಸ್ ಮನೆಯ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು ಬಿಗ್‌ಬಾಸ್. 


ಇದನ್ನೂ ಓದಿ : ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ? 


ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀಯನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರುಮಾಡಿದ್ದರು. ಅದಾದ ಮೇಲೆ, ವರ್ತೂರು ಸಂತೋಷ್‌ ಅವರ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ನಡೆದಿರಲಿಲ್ಲ. 


ಈ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಅವರು ಎಲಿಮಿನೇಟ್ ಆಗಿದ್ದರು. ಇಂದು ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು. 


ಮುಂದಿನ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆಯ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.


ಇದನ್ನೂ ಓದಿ : BBK 10 : ಡಬಲ್ ಎಲಿಮಿನೇಷನ್..‌ ನಿನ್ನೆ ಇಶಾನಿ ಔಟ್‌, ಇಂದು ಹೊರ ಬರ್ತಾರಾ ಈ ಸ್ಪರ್ಧಿ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.