Rashmika Mandanna: ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?

Rashmika Mandanna : ಗೀತಾ ಗೋವಿಂದಂ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡರು. ಆ ನಂತರ ಇಬ್ಬರೂ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಆ ಬಳಿಕ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂಬ ಮಾತು ಶುರುವಾಯ್ತು. 

Written by - Chetana Devarmani | Last Updated : Nov 19, 2023, 09:18 AM IST
  • ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
  • ವಿಜಯ್-ರಶ್ಮಿಕಾ ಲವ್ ಸ್ಟೋರಿ ರಿವೀಲ್?
  • ವಿಜಯ್‌ ಆ ಮಾತು ಕೇಳಿ ನಾಚಿ ನೀರಾದ ರಶ್ಮಿಕಾ!
Rashmika Mandanna: ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?  title=
Rashmika

Rashmika Mandanna Vijay Devarakonda : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನಿದೆ ಎಂದು ತಿಳಿಯಲು ಸಿನಿ ಪ್ರೇಕ್ಷಕರು ತುಂಬಾ ಆಸಕ್ತಿ ಹೊಂದಿದ್ದಾರೆ. ಮೊದಲ ಸಿನಿಮಾ ಗೀತಾ ಗೋವಿಂದಂ ನಂತರ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ ಎಂಬ ವರದಿಗಳು ಬಂದಿದ್ದವು. ಅದಾದ ನಂತರ ಇವರಿಬ್ಬರು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ನಟಿಸಿದರು. ನಂತರ ಇವರಿಬ್ಬರ ನಡುವಿನ ಸಂಬಂಧದ ರೂಮರ್ ಗಳು ಹೆಚ್ಚಾದವು.

ನಂದಮೂರಿ ಬಾಲಕೃಷ್ಟ ಅವರ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆನಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ನಡುವಿನ ಸಂಭಾಷಣೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಟಾಲಿವುಡ್ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಡಿಸೆಂಬರ್ 1 ರಂದು ಅನಿಮಲ್ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಬಾಲಕೃಷ್ಣ ಅವರ ಶೋಗೆ ಅನಿಮಲ್ ಚಿತ್ರ‌ತಂಡ ಆಗಮಿಸಿತು. ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಈ ಸಂಚಿಕೆಯ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದ ಪ್ರೇಕ್ಷಕರನ್ನು ಭರ್ಜರಿಯಾಗಿ ಆಕರ್ಷಿಸುತ್ತಿದೆ. 

ಇದನ್ನೂ ಓದಿ : ಬ್ರಾ ಧರಿಸದೇ.. ಚಿಕ್ಕ ಡ್ರೆಸ್‌ನಲ್ಲಿ ಪಟಾಕಿಯಂತೆ ಪೋಸ್ ನೀಡಿದ ಮಲೈಕಾ ಅರೋರಾ..!

ಈ ಪ್ರೋಮೋದಲ್ಲಿ ಬಾಲಯ್ಯ, ರಣಬೀರ್, ರಶ್ಮಿಕಾ ಮತ್ತು ಸಂದೀಪ್ ಒಟ್ಟಿಗೆ ಸದ್ದು ಮಾಡಿದ್ದಾರೆ. ಈ ಪ್ರೋಮೋದಲ್ಲಿ ಬಾಲಕೃಷ್ಣ ವಿಜಯ್ ಅದೇವರಕೊಂಡ ಅವರಿಗೆ ಫೋನ್ ಮಾಡಿ ಮಾತನಾಡಿದ್ದಾರೆ. ವಿಜಯ್ ಫೋನ್‌ನಲ್ಲಿ ವಾಟ್ಸಾಪ್ ಎಂದು ಹೇಳಿದಾಗ ರಶ್ಮಿಕಾ ನಾಚಿ ನೀರಾಗಿದ್ದಾರೆ. ನಂತರ ಡಿಯರ್ ಕಾಮ್ರೇಡ್ ಲವ್ ಸಾಂಗ್ ಕೂಡ ಪ್ಲೇ ಆಯಿತು. 

ವಿಜಯ್ ದೇವರಕೊಂಡ ಕರೆಯಲ್ಲಿರುವಾಗಲೇ ಸಂದೀಪ್ ರೆಡ್ಡಿ ಬಳಿ ಬಾಲಕೃಷ್ಣ ತಮಾಷೆಯಾಗಿ ‘ಐ ಲವ್ ರಶ್ಮಿಕಾ’ ಎಂದಿದ್ದಾರೆ. ಈ ಸಂಚಿಕೆಯಲ್ಲಿ ಬಾಲಕೃಷ್ಣ.. ವಿಜಯ್-ರಶ್ಮಿಕಾ ಲವ್ ಸ್ಟೋರಿ ರಿವೀಲ್ ಆಗುತ್ತಾ..? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಶೋನಲ್ಲಿ ಏನಾಗಲಿದೆ ಎಂದು ತಿಳಿಯಲು ಪೂರ್ಣ ಸಂಚಿಕೆಗಾಗಿ ಕಾಯಲೇಬೇಕು. 

ಇದನ್ನೂ ಓದಿ : BBK 10 : ಡಬಲ್ ಎಲಿಮಿನೇಷನ್..‌ ನಿನ್ನೆ ಇಶಾನಿ ಔಟ್‌, ಇಂದು ಹೊರ ಬರ್ತಾರಾ ಈ ಸ್ಪರ್ಧಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News