Bigg Boss 10: ದೊಡ್ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರು..!
Bigg Boss Kannada 10: ಪ್ರತಿ ಬಾರಿಯಂತೆ ಈ ಭಾರೀಯೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ.. ಇದೀಗ ಆ ಲವ್ ಬರ್ಡ್ಸ್ಗಳ ಒಡನಾಟವೇ ದೊಡ್ಮನೆಯಲ್ಲಿ ಹೈಲೈಟ್ ಆಗಿದೆ.
BBK 10: ಬಿಗ್ ಬಾಸ್ ಮನೆಯಲ್ಲಿ ಪ್ರತಿ ಸೀಸನ್‌ಗೂ ಒಂದಲ್ಲಾ ಒಂದು ಲವ್ ಸ್ಟೋರಿ ಕ್ರಿಯೆಟ್ ಆಗಿರುತ್ತೆ.. ಇದೀಗ Bigg Boss House 10ರಲ್ಲಿ ಸಂಗೀತಾ- ಕಾರ್ತಿಕ್, ಮೈಕಲ್-ಈಶಾನಿ, ವರ್ತೂರು ಸಂತೋಷ-ತನಿಷಾ ಈ ಮೂರು ಜೋಡಿಗಳು ಫ್ಯಾನ್ಸ್ ಮೆಚ್ಚುಗೆ ಪಡೆಯುತ್ತಿವೆ..
ಇನ್ನು ಇತ್ತೀಚೆಗೆ ಕಾರ್ತಿಕ್ ಮತ್ತು ಸಂಗೀತಾ ಒಡನಾಟ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದೆ.. ಸದ್ಯ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ತನಿಷಾ ಕಾರ್ತಿಕ್‌ಗೆ ಕಿವಿ ಮಾತು ಹೇಳಿದ್ದಾರೆ. "ನಮ್ಮ ಹುಡುಗಿ ಲವ್‌ನಲ್ಲಿ ಬೀಳುತ್ತೆ ಅಂತ ಅಂದುಕೊಂಡಿದ್ದಾರೆ.. ಹಾಗೆಲ್ಲ ಆಗಲ್ಲ ವ್ಯರ್ಥ ಪ್ರಯತ್ನ ಅಂತ ತನಿಷಾ ಮಾತಿನಿಂದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ-ಆಂಟಿ ಅಂತ ಕರೆದವರೇ ಅತ್ಯಾಚಾರಿಗಳಾಗೋದು : ಸಂಚಲನ ಸೃಷ್ಟಿಸಿದ ಪುಷ್ಪಾ ನಟಿ ಹೇಳಿಕೆ !
ವೀಕೆಂಡ್ ಮಾತುಕಥೆಯಲ್ಲಿ ಸುದೀಪ್ ಸಹಸ್ಪರ್ಧಿಗೆ ಬಲೂನ್ ಹೊಡೆದು ತಮ್ಮ ಅಭಿಪ್ರಾಯವನ್ನು ಹೇಳುವ ಅವಕಾಶ ಕೊಟ್ಟಿದ್ದರು.. ಆಗ ತನಿಷಾ ಕಾರ್ತಿಕ್ ಬಗ್ಗೆ ಮಾತನಾಡಿದ್ದಾರೆ. "ನೀನು ನಿನ್ನ ನಿರ್ಧಾರಗಳೆಲ್ಲವೂ ಸರಿ ಎಂದು ಕೊಳ್ಳುತ್ತಿಯಾ ಆದರೆ ಅದೆಲ್ಲಾ ಸುಳ್ಳು.. ನಮ್ಮ ಹುಡುಗಿ ಲವ್‌ನಲ್ಲಿ ಬೀಳಲ್ಲ ಅದು ನಿಮ್ಮ ವ್ಯರ್ಥ ಪ್ರಯತ್ನ ಎಂದು ಬಲೂನ್ ಒಡೆದಿದ್ದಾರೆ..
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ಸಹೋದರಿಯರ ಜೊತೆ ಡ್ರೋನ್ ಪ್ರತಾಪ್ ಡ್ಯಾನ್ಸ್ ಮಾಡಿದ್ದಾರೆ.. ಅದರಲ್ಲೂ ಸಂಗೀತಾ ಜೊತೆ ಪ್ರತಾಪ್ ಹಾಕಿದ ಹೆಜ್ಜೆ ಕಾರ್ತಿಕ್ ಅವರ ಕಾಲೆಳೆದಂತಿತ್ತು.. ಕಾರ್ತಿಕ್ ನಡೆಗೆ ಸುದೀಪ್ ಸೇರಿದಂತೆ ಸಹಸ್ಪರ್ಧಿಗಳು ಕೂಡ ಕಾಲೆಳೆದಿದ್ದಾರೆ.
ಇದನ್ನೂ ಓದಿ-BBK 10: "ನನ್ನ ಅಮ್ಮನಿಗೆ ನಾನು ರೊಮ್ಯಾನ್ಸ್ ಮಾಡೋದು ಇಷ್ಟ": ಸ್ನೇಹಿತ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.