ಬೆಂಗಳೂರು : ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಚಿರಪರಿಚಿತ ಮುಖ. ವಿಜಯ್ ದೇವರಕೊಂಡ ಜೊತೆಗಿನ ಮನಸ್ತಾಪದಿಂದ ಅನಸೂಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ತುತ್ತಾದರು. ಕೆಲವರು ಅವರನ್ನು ‘ಆಂಟಿ’ ಎಂದು ಕರೆದರು. ತಕ್ಷಣವೇ 'ಆಂಟಿ' ಎಂಬ ಪದವು ಟ್ವಿಟರ್ನಲ್ಲಿ (ಈಗ ಎಕ್ಸ್) ಟ್ರೆಂಡಿಂಗ್ ಪ್ರಾರಂಭಿಸಿತು.
ನಟಿ ಅನ್ಸೂಯಾ ಭಾರದ್ವಾಜ್ ಇದರಿಂದ ಬೇಸರಗೊಂಡರು. ಯಾರಾದರೂ ಆಂಟಿ ಎಂದು ಕರೆದರೆ ಅವರ ವಿರುದ್ಧ ಪೊಲೀಸರಲ್ಲಿ ಪ್ರಕರಣ ದಾಖಲಿಸುವುದಾಗಿ ಹೇಳಿದರು. ಇದೀಗ ಮತ್ತೊಮ್ಮೆ ಅನಸೂಯಾ ಟ್ರೋಲಿಗರಿಗೆ ಚಾಟಿ ಬೀಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅನಸೂಯಾ ಭಾರದ್ವಾಜ್ ಹೇಳಿದ್ದ ಮಾತುಗಳು ವೈರಲ್ ಆಗಿವೆ.
ಇದನ್ನೂ ಓದಿ : ಕ್ರೀಮ್ ವೈಟ್ ಲೆಹೆಂಗಾದಲ್ಲಿ ಯಂಗಾಗಿ ಕಣ್ಮನ ಸೆಳೆಯುತ್ತಿರುವ ಸೌತ್ ಸುಂದರಿ: ಶ್ರೀಯಾ ಶರಣ್
ಆಂಟಿ ಎಂಬ ಪದ ಬಳಕೆ ತಪ್ಪಲ್ಲ. ಮಕ್ಕಳು ಆಂಟಿ ಎಂದು ಕರೆದರೆ ತೊಂದರೆ ಇಲ್ಲ. ಆದರೆ ಅದೇ ವಯಸ್ಸಿನವರು ಸಹ ಉದ್ದೇಶಪೂರ್ವಕವಾಗಿ ಅಗೌರವದ ಪದವನ್ನು ಬಳಸುತ್ತಿದ್ದಾರೆ. ಈ ರೀತಿ ಮಹಿಳೆಯರ ಮೇಲೆ ದ್ವೇಷ ತೋರಿಸುವುದು ಅಪರಾಧ ಎಂದು ಹೇಳಿದರು.
ನನ್ನ ವಯಸ್ಸಿನವರನ್ನು ಆಂಟಿ ಎಂದು ಕರೆಯುವುದು ಬೇರೆ ರೀತಿಯಲ್ಲಿ. ಅದು ನನಗೆ ಇಷ್ಟವಿಲ್ಲ. ಇನ್ನೊಬ್ಬರ ಮನಸ್ಸಿಗೆ ಮನಸಿಗೆ ನೋವು ಏಕೆ ಮಾಡಬೇಕು? ಪೈಶಾಚಿಕ ಸಂತೋಷ ಪಡುವುದಾದರೂ ಯಾಕೆ? ಅವರು ತನ್ನ ಸುತ್ತಲಿನ ಮಹಿಳೆಯರನ್ನು ಹೇಗೆ ನೋಡಬಹುದು? ಮುಂದೆ ಇಂಥವರೇ ಅತ್ಯಾಚಾರಿಗಳಾಗೋದು ಎಂದು ಅನಸೂಯಾ ಹೇಳಿದ್ದಾರೆ.
ಇದನ್ನೂ ಓದಿ : ಆ ಕನ್ನಡ ಚಿತ್ರದಲ್ಲೇ ನಟಿಸಬೇಕಿತ್ತು ಅನುಷ್ಕಾ ಶೆಟ್ಟಿ, ಆದರೇ....!
'ಪುಷ್ಪ: ದಿ ರೈಸ್', 'ಪುಷ್ಪ: ದಿ ರೂಲ್' ಜೊತೆಗೆ, ಅನಸೂಯಾ 'ಫ್ಲ್ಯಾಷ್ಬ್ಯಾಕ್', 'ಮೈಕೆಲ್', 'ಖಿಲಾಡಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ಅನಸೂಯಾ ಹೆಸರು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.