Bigg Boss Contestant Munawar Farooqui: ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟಗಳು ಸಹಜ.. ಆದರೆ ಅವುಗಳನ್ನು ಎದುರಿಸಿ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲುವುದೇ ಸಾಧನೆ.. ಈ ಪಟ್ಟಿಯಲ್ಲಿ ಹಲವಾರು ಸೆಲೆಬ್ರಿಟಿಗಳಿದ್ದಾರೆ.. ಅದರಲ್ಲಿ ಹಿಂದಿ ಬಿಗ್ ಬಾಸ್ 17 ರ ಸ್ಪರ್ಧಿ ಮುನಾವರ್ ಫಾರೂಕಿ ಕೂಡ ಒಬ್ಬರು.. 


COMMERCIAL BREAK
SCROLL TO CONTINUE READING

ಮುನಾವರ್ ಫಾರೂಕಿ ಸದ್ಯ ಬಿಗ್ ಬಾಸ್ 17 ರ ಫೈನಲ್‌ನಲ್ಲಿ ಸ್ಥಾನ ಪಡೆದಿದ್ದಾರೆ... ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಎಂದೇ ಖ್ಯಾತರಾಗಿರುವ ಮುನವ್ವರ್‌ ಅವರಿಗೆ ಇಂದು ಯಾವುದೇ ಗುರುತು ಬೇಕಿಲ್ಲ. ಒಂದು ಕಾಲದಲ್ಲಿ ಪ್ರತಿ ಪೈಸೆಗೂ ಅವಲಂಬಿತರಾಗಿದ್ದ ಮುನವ್ವರ್ ಇಂದು ಕೋಟಿಗಳ ಒಡೆಯ.


ಇದನ್ನೂ ಓದಿ-42ರಲ್ಲಿ ಎರಡನೇ ಮದುವೆಯಾದ ಸ್ಟಾರ್‌ ನಟಿ.. ಆದರೆ ಒಮ್ಮೆಯೂ ತಂದೆಯಿಂದ ಕನ್ಯಾದಾನ ಮಾಡಿಸಿಕೊಳ್ಳಲಿಲ್ಲ!


ಮುನವ್ವರ್ ಫಾರೂಕಿ ಅವರ ಬಾಲ್ಯವು ಬಡತನದಲ್ಲಿ ಮುಳುಗಿತ್ತು.. ಈ ಬಗ್ಗೆ ಅವರು ಹಲವು ಬಾರಿ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.. ಮುನವ್ವರ್ 14 ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾರೆ... ಸಾಲಬಾಧೆಯಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ವತಃ ಮುನವ್ವರ್ ಈ ಹಿಂದೆ ಹೇಳಿದ್ದರು.. ಇದಾದ ನಂತರ ಅವರ ಕುಟುಂಬ ಗುಜರಾತ್‌ನಿಂದ ಮುಂಬೈಗೆ ಸ್ಥಳಾಂತರಗೊಂಡಿತು. ಮುಂಬೈಗೆ ಬಂದ ನಂತರ ಮುನವ್ವರ್ ಪಾತ್ರೆಗಳ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಅವರ ದಿನದ ಸಂಬಳ 60 ರೂ...


60ರಿಂದ ಕೋಟಿಗಳ ಪಯಣ ಮುನವ್ವರ್ ಅವರಿಗೆ ಸುಲಭವಾಗಿರಲಿಲ್ಲ. ಮನೆ ನಿಭಾಯಿಸುವ ಜವಾಬ್ದಾರಿಯಿಂದಾಗಿ ಅವರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಡಬೇಕಾಯಿತು. ವರ್ಷಗಳ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದಾಗಿ ಇಂದು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ.. ವರದಿಯ ಪ್ರಕಾರ, ಮುನಾವರ್ 8 ಕೋಟಿ ರೂ. ಒಡೆಯನಾಗಿದ್ದು.. ತಮ್ಮ ಒಂದು ಪ್ರದರ್ಶನಕ್ಕೆ ಅವರು 3-4 ಲಕ್ಷ ರೂ. ಮತ್ತು ಯೂಟ್ಯೂಬ್ ಚಾನೆಲ್‌ನಿಂದ ಪ್ರತಿ ತಿಂಗಳು 8 ಲಕ್ಷ ಪಡೆಯುತ್ತಾರೆ.. ಇದಲ್ಲದೇ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ 15 ಲಕ್ಷ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ.. 


ಇದನ್ನೂ ಓದಿ-'ಕ್ಯಾಪ್ಟನ್ ಮಿಲ್ಲರ್' ಕಾದಂಬರಿಯ ನಕಲು: ವೇಲಾ ರಾಮಮೂರ್ತಿ ಗಂಭೀರ ಆರೋಪ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.