ನನ್ನ ಜೀವಮಾನದಲ್ಲಿ ಬಿಗ್ ಬಾಸ್ ಅನ್ನೋದು ಒಂದು ಇತಿಹಾಸ: ತುಕಾಲಿ ಸಂತೋಷ್
Tukali Santhosh : ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ.
Tukali Santhosh Interview: ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಎಲ್ಲ ಸ್ಪರ್ಧಿಗಳ ನಗುವಿನ ಮೊತ್ತ ತೆಗೆದರೆ ಅದರ ಬಹುಪಾಲು ತುಕಾಲಿ ಸಂತೋಷ್ ಅವರಿಗೆ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯೊಳಗಿನ ಭಿನ್ನಾಭಿಪ್ರಾಯಗಳ ಮೂಲಗಳನ್ನು ಹುಡುಕಿಕೊಂಡು ಹೋದರೆ ಅದರಲ್ಲಿಯೂ ತುಕಾಲಿ ಸಂತೋಷ್ ಅವರ ಕೊಡುಗೆ ಸಣ್ಣದಲ್ಲ!! ಹೀಗೆ ನಗುನಗಿಸುತ್ತಲೇ ಚಾಣಾಕ್ಷ ತಂತ್ರವನ್ನೂ ಹೆಣೆಯುವ ವ್ಯಕ್ತಿತ್ವ ತುಕಾಲಿ ಸಂತೋಷ್ ಅವರದ್ದು.
ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಸಂತೋಷ್ ಕುಮಾರ್ ಎಚ್.ಜಿ. ಅಲಿಯಾಸ್ ‘ತುಕಾಲಿ ಸಂತೋಷ್ ಅವರೇ.. ನಿಮ್ಮ ಪ್ರೀತಿ ಪಾತ್ರ. ಈ ಸೀಸನ್‌ನಲ್ಲಿ ಟಾಪ್ 6 ಫಿನಾಲೆ ಕಂಟೆಸ್ಟೆಟ್ಸ್‌ಗಳಲ್ಲಿ ನಾನೂ ಒಬ್ಬ. ಐದನೇ ರನ್ನರ್ ಅಪ್ ಆಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯಿಂದ ನಾನು ಈ ಜಾಗದಲ್ಲಿದ್ದೀನಿ. ಸಿಕ್ಕಾಪಟ್ಟೆ ಎಕ್ಸೈಟ್‌ಮೆಂಟ್ ಇದೆ. ನಾನು ಮನೆಗೆ ಹೋಗುವಾಗಲೇ ಅಂದುಕೊಂಡಿದ್ದೆ. ಷೋ ಮುಗಿಯುವ ದಿನವೇ ಮನೆಯಿಂದ ಹೊರಗೆ ಬರಬೇಕು ಅಂತ. ಹಾಗೇ ಆಗಿದೆ. ಗ್ರ್ಯಾಂಡ್ ಫಿನಾಲೆ ದಿನ ವೇದಿಕೆಯ ಮೇಲಿಂದ ಬೀಳ್ಕೊಟ್ಟು ಅಲ್ಲಿಂದ ಹೋಗಿದ್ದೇನೆ. ತುಂಬ ಖುಷಿಯಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಪ್ರತಿಯೊಂದೂ ವಿಷಯವೂ ಸವಾಲೇ. ಆ ಎಲ್ಲಸವಾಲುಗಳನ್ನು ಎದುರಿಸಿ ಫಿನಾಲೆಯವರೆಗೆ ಬಂದು ಕಾಮಿಡಿಯಲ್ಲಿ ನನ್ನದೇ ಆದ ಛಾಪು ಮೂಡಿಸಿದ್ದೀನಿ.
ಇದನ್ನೂ ಓದಿ: Allu Arjun Pushpa 2 Look: ಅಲ್ಲು ಅರ್ಜುನ್ ಸೀರೆಯುಟ್ಟ ʻಪುಷ್ಪ 2ʼ ಲುಕ್ ಲೀಕ್.!!
ಫೆವರೆಟ್ ಮೊಮೆಂಟ್ ಅಂದ್ರೆ ಬಿಗ್‌ಬಾಸ್ ಮನೆಯಲ್ಲಿ ಮಾತ್ರೆ ತಂದುಕೊಡುತ್ತಿದ್ದದ್ದು. ಇನ್ಮೇಲಿಂದ ‘ಮಾತ್ರೆ ತಂದ್ಕೊಡೋರು ಯಾರೋ ಅಣ್ಣಾ… ಯಾರೋ ಅಣ್ಣಾ… ಚಪಾತಿ ಒತ್ಕೊಡೋರು ಯಾರೋ ಅಣ್ಣಾ… ಯಾರೋ ಅಣ್ಣಾ…’ ಅಂತ ಹಾಡುವಂತಾಗಿದೆ. ತಿಂದ್ಯಾ ಮಲಗಿದ್ಯಾ ಏನು ಮಾಡ್ದೆ ಅಂತೆಲ್ಲ ಕೇಳೋರು ಯಾರೂ ಇಲ್ಲ ಇನ್ಮೇಲೆ… ಬಿಗ್‌ಬಾಸ್ ಮನೆಯಲ್ಲಿ ಅಲಾರ್ಮ್ ರೀತಿಯಲ್ಲಿ ಒಂದು ಹಾಡು ಬರುತ್ತಿತ್ತು. ನಿದ್ದೆಗಣ್ಣಲ್ಲಿದ್ರೂ ಆ ಹಾಡು ಕೇಳಿದ ತಕ್ಷಣ ರಪ್ ಅಂತ ಎಚ್ಚರ ಆಗಿಬಿಡುತ್ತದೆ. ಅದನ್ನು ತುಂಬ ಮಿಸ್ ಮಾಡ್ಕೋತೀನಿ. ಹಾಗೆಯೇ ಎಲ್ಲ ಸ್ಪರ್ಧಿಗಳನ್ನೂ ಮಿಸ್ ಮಾಡ್ಕೋತೀನಿ.
ನನ್ನ ಹೆಂಡತಿ ಯಾವ್ದೋ ಲೆಟರ್ ಬರ್ದಿದಾಳೆ ಅಂತ ಹೇಳಿ ತಲೆಮೇಲೆ ಡಬ್ಬ ಇಟ್ಕೊಂಡು ಟಾಸ್ಕ್ ಗೆದ್ದೆ. ಆ ಲೆಟರ್ ಬಂದ್ಮೇಲೆ ಗೊತ್ತಾಯ್ತು, ಏನೇನು ಬರ್ದವ್ಳೆ ಅಂತ. ಈ ನೂರಾ ಹನ್ನೊಂದು ದಿನಗಳಲ್ಲಿ ಮಿಸ್ ಮಾಡ್ಕೊಳ್ಳೋದು ತುಂಬ ಇದೆ. ಎಲ್ಲವನ್ನೂ ಮಿಸ್ ಮಾಡ್ಕೋತೀನಿ. ಆ ಮೆಮರಿ ಬರೀಬೇಕು ಅಂದ್ರೆ ನೂರಾಹನ್ನೊಂದು ಪಿಚ್ಚರ್ ಸ್ಟೋರಿ ಹೇಳ್ಬೇಕಾಗತ್ತೆ. ಈ ಸಲದ ಸೀಸನ್‌ನಲ್ಲಿ ಕಾರ್ತೀಕ್ ಹೀರೊ. ಸಿನಿಮಾದಲ್ಲಿ ಹೀರೊ ಎಷ್ಟು ಇಂಪಾರ್ಟೆಂಟೋ ಹಾಗೆ. ಪ್ರತಾಪ್ ಪೋಷಕ ನಟ. ಸಂಗೀತಾ ಶೃಂಗೇರಿ ಆ ಸಿನಿಮಾದ ಹೀರೊಯಿನ್ ಇದ್ದ ಹಾಗೆ. ಹೀರೊ ಹಿರೊಯಿನ್ ಇದ್ದಮೇಲೆ ವಿನಯ್ ವಿಲನ್ ಆಗಿರಲೇಬೇಕಲ್ಲಾ… ವರ್ತೂರು ಸಂತೋಷಣ್ಣ ನ್ಯಾಯ ಕೊಡುವ ದೇವರ ಥರ. ಕರ್ಣನ ಥರ… ಅವರ ಬಗ್ಗೆ ಹೇಳೋಕೆ ಒಂದಾ ಎರಡಾ ಇರೋದು… ತುಂಬ ಹೇಳಬಹುದು.
ಈ ನೂರಾಹನ್ನೊಂದು ದಿನಗಳ ಮೆಮರಿಯನ್ನು ಒಂದೇ ಸಾಲಿನಲ್ಲಿ ಹೇಳಬೇಕು ಅಂದ್ರೆ, ‘ನೆನಪುಗಳ ಮಾತು ಮಧುರ…’ ಬಿಗ್‌ಬಾಸ್ ಐ ಮಿಸ್ ಯೂ… ಐ ಲವ್ ಯೂ… ನಿಮ್ಮ ಧ್ವನಿ ನನ್ನನ್ನು ತುಂಬ ಎಚ್ಚರಗೊಳಿಸ್ತು. ಒಂದು ಅಶರೀರವಾಣಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡಿತು ಅಂದ್ರೆ ನೀವು ಎಷ್ಟುಸ್ಟ್ರಾಂಗ್ ಇರಬೇಕು… ನಿಮ್ಮ ಮೆಂಟಾಲಿಟಿ ಎಷ್ಟು ಸ್ಟ್ರಾಂಗ್ ಇರಬೇಕು… ನಿಮ್ಮ ಮನಸ್ಸು ಎಂಥದ್ದಿರಬೇಕು. ನನಗೆ ಸ್ಪಷ್ಟವಾಗಿ ಇದ್ದ ಆಸೆಗಳನ್ನು ಪೂರೈಸಿದ್ದಾರೆ. ನಾನು ಅಂದುಕೊಂಡಿದ್ದೆಲ್ಲ ಕೊಟ್ಟಿದೀರಾ… ಅದಕ್ಕಿಂತ ಹೆಚ್ಚು ಕೊಟ್ಟಿದೀರಾ… ನಾನು ನಕ್ಕಾಗ ನೀವೂ ನಕ್ಕಿದೀರಾ… ನೋವಲ್ಲಿ ನೋವು ಪಟ್ಕೊಂಡಿದೀರಾ…
ಇದನ್ನೂ ಓದಿ: ಬಿಗ್ ಬಾಸ್ ಬದುಕಿನ ಪಾಠ ಕಲಿಸಿದೆ : ಸಂಗೀತಾ ಶೃಂಗೇರಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.