Allu Arjun Pushpa 2 Look: ಅಲ್ಲು ಅರ್ಜುನ್‌ ಸೀರೆಯುಟ್ಟ ‌ʻಪುಷ್ಪ 2ʼ ಲುಕ್ ಲೀಕ್.!!

Pushpa 2 Set Photos Leak: ಸುಕುಮಾರ್ ಅವರ ಮುಂಬರುವ ಚಿತ್ರ ಪುಷ್ಪ 2: ದಿ ರೂಲ್‌ನ ಸೆಟ್‌ಗಳಿಂದ ಅಲ್ಲು ಅರ್ಜುನ್ ಅವರ ಸೀರೆಯಲ್ಲಿನ ಫೋಟೋ ಸೋರಿಕೆಯಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Chetana Devarmani | Last Updated : Jan 30, 2024, 07:52 PM IST
  • ಅಲ್ಲು ಅರ್ಜುನ್‌ ಪುಷ್ಪ 2 ಲುಕ್ ವೈರಲ್
  • ಸುಕುಮಾರ್ ನಿರ್ದೇಶನದ ಸಿನಿಮಾ
  • ಪುಷ್ಪ 2 ಸೆಟ್‌ ನಿಂದ ಅಲ್ಲು ಅರ್ಜುನ್‌ ಫೋಟೋ ಲೀಕ್‌
Allu Arjun Pushpa 2 Look: ಅಲ್ಲು ಅರ್ಜುನ್‌ ಸೀರೆಯುಟ್ಟ ‌ʻಪುಷ್ಪ 2ʼ ಲುಕ್ ಲೀಕ್.!! title=

Allu Arjun in saree: ಪುಷ್ಪ 2 ಸೆಟ್‌ಗಳಿಂದ ಅಲ್ಲು ಅರ್ಜುನ್‌ ಅವರ ಸೀರೆಯ ಲುಕ್‌ ಲೀಕ್‌ ಆಗಿದೆ. ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ 2024 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಸುಕುಮಾರ್ ಅವರ ನಿರ್ದೇಶನದ ಈ ಚಿತ್ರ 2021 ರ ಪುಷ್ಪ: ದಿ ರೈಸ್ ಸಿನಿಮಾದ ಮುಂದುವರೆದ ಭಾಗವಾಗಿದೆ. 

ಈ ವರ್ಷ ಸ್ವಾತಂತ್ರ್ಯ ದಿನದಂದು ಪುಷ್ಪ 2 ಬೆಳ್ಳಿ ತೆರೆಯ ಮೇಲೆ ಬರಲಿದೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ, ಚಿತ್ರದ ಪೋಸ್ಟರ್‌ನಲ್ಲಿರುವಂತೆಯೇ ಅಲ್ಲು ಅರ್ಜುನ್ ಸೀರೆಯಲ್ಲಿರುವ ಫೋಟೋವು ಚಿತ್ರದ ಸೆಟ್‌ಗಳಿಂದ ಸೋರಿಕೆಯಾಗಿದೆ. ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ: ರಕ್ಷಕ್‌ಗೆ ಕಿಚ್ಚ ಸುದೀಪ್ ಗಿಫ್ಟ್‌ ಕೊಟ್ಟ ಸನ್‌ಗ್ಲಾಸ್ ಬೆಲೆ ಎಷ್ಟು ಗೊತ್ತೇ? 

ಸುಕುಮಾರ್ ಚಿತ್ರದ ಸೆಟ್‌ಗಳಿಂದ ಫೋಟೋಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿಯೂ ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಲುಕ್ ಸೋರಿಕೆ ಆಗಿತ್ತು. 2021 ರಲ್ಲಿ ಪುಷ್ಪ ಬಿಡುಗಡೆಯಾಯಿತು. ಬ್ಲಾಕ್‌ಬಸ್ಟರ್‌ ಹಿಟ್‌ ಪಡೆಯಿತು. ಈ ಸಿನಿಮಗಾಗಗಿ ಅಲ್ಲು ಅರ್ಜುನ್ ಮತ್ತು ದೇವಿ ಶ್ರೀ ಪ್ರಸಾದ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು.

 

 

ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪುಷ್ಪ 2: ದಿ ರೂಲ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ವಿಜಯ್ ದಳಪತಿ ಕೊನೆಯ ಸಿನಿಮಾ ಇದೇ.. ನಿರ್ದೇಶಕರು ಯಾರು ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News