Bigg Boss Prathap Marriage : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಗುರುವಾರ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. ಡ್ರೋನ್ ಪ್ರತಾಪ್ ಮೂರು ವರ್ಷಗಳ ಬಳಿಕ ತನ್ನ ಅಪ್ಪ - ಅಮ್ಮನನ್ನು ಭೇಟಿ ಮಾಡಿದರು. ಈ ವೀಕ್‌ ಸ್ಪರ್ಧಿಗಳ ಮನೆಯವರು ಬರುತ್ತಿದ್ದಾರೆ. ಈ ಮೂಲಕ ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿದ್ದಾರೆ. ಎಲ್ಲರಂತೆ ಪ್ರತಾಪ್‌ ಸಹ ತನ್ನ ಮನೆಯಿಂದ ಯಾರು ಬರಬಹುದೆಂದು ಕಾತುರದಿಂದ ಕಾಯುತ್ತಿದ್ದರು. 


COMMERCIAL BREAK
SCROLL TO CONTINUE READING

ಡ್ರೋನ್‌ ಪ್ರತಾಪ್‌ ಅವರ ತಂದೆ - ತಾಯಿ ಬಿಗ್‌ ಬಾಸ್‌ ಮನೆಗೆ ಬಂದರು. ಅಪ್ಪ ಅಮ್ಮನನ್ನು ಕಂಡು ಪ್ರತಾಪ್‌ ಭಾವುಕರಾದರು. ಇದನ್ನು ನೋಡಿದ ಪ್ರತಿಯೊಬ್ಬರ ಕಣ್ಣಂಚಲ್ಲೂ ನೀರು ತುಂಬಿತ್ತು. ಡ್ರೋನ್ ಪ್ರತಾಪ್ ಹಾಗೂ ಅವರ ಪೋಷಕರ ನಡುವೆ ಹಲವು ವಿಚಾರವಾಗಿ ಮಾತುಕತೆ ನಡೆಯಿತು. ಇದೇ ವೇಳೆ ಪ್ರತಾಪ್‌ ಮದುವೆ ವಿಚಾರ ಕೂಡ ಪ್ರಸ್ತಾಪವಾಯಿತು. 


ಇದನ್ನೂ ಓದಿ : BBK 10 : ಸಂಗೀತಾ ಜೊತೆಗೆ ವಿನಯ್ ಪತ್ನಿ ರಹಸ್ಯ ಮಾತು..! ಗಂಡನ ತಂಟೆಗೆ ಬರ್ಬೇಡ ಅಂತ ವಾರ್ನಿಂಗ್‌ ಕೊಟ್ರಾ..? 


ಮೊದಲು ವರ್ತೂರು ಸಂತೋಷ್ ಅವರೇ  ಪ್ರತಾಪ್​ ಮದುವೆ ಬಗ್ಗೆ ಮಾತು ಶುರು ಮಾಡಿದರು. ಪ್ರತಾಪ್‌ ತಂದೆ ಬಳಿ, ಯಜಮಾನರೇ, ನೀವು ಹೇಳಿದರೆ ನಿಮ್ಮ ಮಗ ಮದುವೆ ಆಗ್ತಾನೆ ಅಂದಿದ್ದಾನೆ. ನೀವು ಹೂ ಅನ್ನಿ ಎಂದು ವರ್ತೂರು ಹೇಳಿದರು. ಅದಕ್ಕೆ ಪ್ರತಾಪ್‌  ತಂದೆ ನನ್ನ ಅಭ್ಯಂತರ ಇಲ್ಲ ಎಂದು ಉತ್ತರಿಸಿದರು. ಆಗ ವರ್ತೂರು, ಆಯ್ತಲ್ಲ ಆ ಜವಾಬ್ದಾರಿ ನನ್ನದು.. ನಾನು ನೋಡುತ್ತೇನೆ ಎಂದರು. ಅದಕ್ಕೆ ಪ್ರತಾಪ್‌ ತಂದೆ, ನಿಮ್ಮ ಊರಲ್ಲೇ ಒಂದು ಒಳ್ಳೆ ಹೆಣ್ಣು ನೋಡಪ್ಪ ಎಂದು ಹೇಳಿದರು. 


ವರ್ತೂರು ಜೊತೆ ಮಾತು ಸೇರಿಸಿದ ತುಕಾಲಿ ಸಂತು, ನಮ್ಮ ಊರಲ್ಲಿ ಒಂದು ಒಳ್ಳೆ ಹೆಣ್ಣು ಇದಾಳೆ. ನೀವು ಹೂ ಅಂದರೆ ನಾನು ಮಾತಾಡ್ತೀನಿ ಎಂದು ಹೇಳಿದರು. ಅದಕ್ಕೆ ಪ್ರತಾಪ್‌ ತಂದೆ, ಅಯ್ಯೋ ಹುಡುಗಿಯೂ ಒಪ್ಪಿಕೊಳ್ಳಬೇಕಲ್ಲ ಅಂತ ಹೇಳಿದರು. ಅವರಿಗೆ ನನ್ನ ಮಾತೇ ಫೈನಲ್..‌ ನಾನು ಹೇಳಿದರೆ ಮುಗಿದಂತೆ ಎಂದು ತುಕಾಲಿ ಹೇಳಿದಾಗ ಮನೆಯವರೆಲ್ಲ ಕಾಲೆಳೆದರು. 


ಇದನ್ನೂ ಓದಿ : ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಮೀನಾ! ಬಹುಭಾಷಾ ತಾರೆ ಹೇಳಿದ್ದೇನು? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.