Bigg Boss Double Elimination: ಬಿಗ್ ಬಾಸ್ ಕನ್ನಡ ಸೀಸನ್‌ 10 ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಈ ವಾರ ಡಬಲ್ ಎಲಿಮಿನೇಷನ್‌ ನಡೆದಿದೆ ಎನ್ನಲಾಗುತ್ತಿದೆ. ವಾರಾಂತ್ಯದ ಸಂಚಿಕೆಯಲ್ಲಿ ಡಬಲ್ ಎಲಿಮಿನೇಷನ್ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಯಾಗಲಿದೆ ಎನ್ನಲಾಗಿದೆ. ಕೆಸಿಸಿ ಮ್ಯಾಚ್‌ ಕಾರಣ ಕಿಚ್ಚ ಸುದೀಪ್ ಸೂಪರ್ ಸಂಡೇ ನಡೆಸಿಕೊಡಲು ಬಂದಿಲ್ಲ. ಅವರ ಬದಲಾಗಿ ಬಿಗ್ ಬಾಸ್ ಮನೆಗೆ ಶನಿವಾರ ಹಿರಿಯ ನಟಿ ಶ್ರುತಿ ಆಗಮಿಸಿದ್ದರು. ಭಾನುವಾರ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ಬಂದಿದ್ದಾರೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : Salaar Collection : 275 ಕೋಟಿ ದಾಟಿದ ಸಲಾರ್‌ ಕಲೆಕ್ಷನ್, ಬಾಕ್ಸ್ ಆಫೀಸ್‌‌ ನಲ್ಲಿ ಹೊಸ ದಾಖಲೆ


ಭಾನುವಾರ ಎಲಿಮಿನಿಷೇನ್‌ ಡೇ. ಈ ವಾರ ಬಿಗ್‌ ಬಾಸ್‌ ಮನೆಯಿಂದ ಇಬ್ಬರು ಹೊರ ಹೋಗಲಿದ್ದಾರೆ. ಬಿಗ್ ಬಾಸ್ ಹೊಸ ಪ್ರಮೋದಲ್ಲಿ ಡಬಲ್ ಎಲಿಮಿನೇಷನ್ ಸುಳಿವು ನೀಡಲಾಗಿದೆ. ಆರು ಮಂದಿ ಈ ವಾರ ನಾಮಿನೇಟ್‌ ಆಗಿದ್ದಾರೆ. ವರ್ತೂರ್‌ ಸಂತೋಷ್‌, ಸಂಗೀತಾ, ಸಿರಿ, ಅವಿನಾಶ್ ಶೆಟ್ಟಿ, ಪ್ರತಾಪ್, ಮೈಕಲ್ ಈ ವಾರ ನಾಮಿನೇಟ್‌ ಆಗಿದ್ದಾರೆ. ಇವರಲ್ಲಿ ಇಬ್ಬರು ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನಲಾಗಿದೆ.


ಈ ವಾರ ಮನೆಯಿಂದ ವಿಶೇಷ ರೀತಿಯಲ್ಲಿ ಎಲಿಮಿನೇಷನ್‌ ನಡೆದಿದೆ. ಮನೆಗೆ ಎರಡು ಕಾಎಉಗಳು ಎಂಟ್ರಿ ಕೊಟ್ಟಿವೆ. ಇದರಲ್ಲಿ ಇಬ್ಬರು ಸ್ಪರ್ಧಿಗಳನ್ನ ಕೂರಿಸಲಾಗಿದೆ. ಅವುಗಳು ಬಿಗ್‌ ಬಾಸ್‌ ಮನೆಯಂಗಳದಲ್ಲಿ ರೌಂಡ್‌ ಹಾಕುತ್ತವೆ. ಈ ಕಾರಿನ ಜೊತೆ ಯಾರು ಹೊರ ಹೋಗುತ್ತಾರೋ ಅವರು ಎಲಿಮಿನೇಟ್‌ ಎಂದರ್ಥ. ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಇಬ್ಬರು ಹೊರಗೆ ಹೋಗುತ್ತಾರೆ ಎಂದು ಭಾವಿಸಲಾಗಿದೆ. ಈ ವಾರ ಮನೆಯಿಂದ ಸಿರಿ ಹಾಗೂ ಅವಿನಾಶ್ ಶೆಟ್ಟಿ ಹೊರಗೆ ಹೋಗೋದು ಎನ್ನಲಾಗಿದೆ. 


ಇದನ್ನೂ ಓದಿ : ಯಾವ ಹಿರೋಯಿನ್‌ಗಳಿಗೂ ಕಡಿಮೆ ಇಲ್ಲ.. ಹಿರಿಯ ನಟಿ ಮಾಧವಿ ಹೆಣ್ಣುಮಕ್ಕಳು ಇವರೇ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.