Bigg Boss Kannada Season 10 : ಬಿಗ್​ ಬಾಸ್​ ಕನ್ನಡ ಸೀಸನ್​ 10 ರಲ್ಲಿ ನಿನ್ನೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಬಿಗ್‌ ಬಾಸ್‌ ಸ್ಪರ್ಧಿಗಳೆಲ್ಲ ಹೊಸ ಬಟ್ಟೆ ತೊಟ್ಟು ರೆಡಿಯಾಗಿದ್ದರು. ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಈ ಹಬ್ಬದ ಸಡಗರಕ್ಕೆ ಮೆರಗು ತಂದಿದ್ದು ಚಿತ್ರನಟಿ ತಾರಾ. ನಿನ್ನೆ ಮನೆಯವರ ಜೊತೆ ತಾರಾ ಭಾಗಿಯಾಗಿದ್ದರು. 


COMMERCIAL BREAK
SCROLL TO CONTINUE READING

ನಟಿ ತಾರಾ ಬಿಗ್‌ ಬಾಸ್‌ ಮನೆಯಲ್ಲಿ ಕೆಲವು ಫನ್‌ ಆಕ್ಟಿವಿಟಿಗಳನ್ನು ಮಾಡಿಸಿದರು. ಅಲ್ಲದೇ ಮನೆಯವರು ಸಹ ತಾರಾ ಅವರಿಗೆ ಮನರಂಜನೆಯ ಔತಣ ನೀಡಿದರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಾರಾ ಅವರನ್ನು ರಂಜಿಸಿದರು. ಜಗಳ ಕಿತ್ತಾಟ ಕೂಗಾಟ ಕೇಳುತ್ತಿದ್ದ ಮನೆಯಲ್ಲಿ ನಿನ್ನೆ ನಗುವಿನದ್ದೇ ಹಾವಳಿ ಆಗಿತ್ತು. 


ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೌಡ ಇರಬೇಕಾ? ಡ್ರೋನ್ ಪ್ರತಾಪ್ ಇರಬೇಕು? 


ಎಲ್ಲರ ಮೊಗದಲ್ಲಿ ಸಂತಸ ಕಾಣುತ್ತಿತ್ತು. ಈ ಮಧ್ಯೆ ಡ್ರೋನ್​​ ಪ್ರತಾಪ್ ಅವರು ತುಕಾಲಿ ಸಂತೋಷ್​ ಅವರನ್ನು ಹೊಡೆದಿದ್ದಾರೆ. ಆದರೆ ಇದು ಕೇವಲ ಫನ್‌ ಆಕ್ಟಿವಿಟಿಗೆ ಮಾತ್ರ. ಮನೆಯವರೆಲ್ಲಾ ಸೂಪರ್​ ಆಗಿ ನಟಿ ತಾರಾ ಮುಂದೆ ಡ್ಯಾನ್ಸ್​ ಮಾಡಿದರು. ಈ ವೇಳೆ ತಮಾಷೆಗಾಗಿ ಡ್ರೋನ್​​ ಪ್ರತಾಪ್​ ತುಕಾಲಿ ಸಂತೋಷ್‌ ಅವರನ್ನು ಹೊಡೆದು ಹೊಡೆದು ನಗುತ್ತಾ ಡ್ಯಾನ್ಸ್​ ಮಾಡಿದ್ದಾರೆ. 


ಇದನ್ನೂ ಓದಿ: ಸ್ಟಾರ್‌ ನಟನ ಮಗನ ಜೊತೆ ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥ..! ಯಾರು ಆ ನಟ..? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.