Bigg Boss: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ತಮಿಳು ಭಾಷೆಯಲ್ಲಿಯೂ ಪ್ರಸಾರವಾಗುತ್ತಿತ್ತು.. ಕಳೆದ ವಾರ ತಮಿಳು ಬಿಗ್ ಬಾಸ್ ಸೀಸನ್ 7 ಫಿನಾಲೆ ತಲುಪಿ ಯಶಸ್ವಿಯಾಯಿತು.. ಇದೀಗ ಬಿಗ್‌ಬಾಸ್‌ನಿಂದ ದೊಡ್ಡ ಮೊತ್ತದ ಹಣದೊಂದಿಗೆ ಹೊರನಡೆದ ಟಾಪ್ 5 ಸ್ಪರ್ಧಿಗಳ ಕುರಿತು ಮಾಹಿತಿಯೊಂದು ಹೊರಬಿದ್ದಿದೆ..


COMMERCIAL BREAK
SCROLL TO CONTINUE READING

ಅರ್ಚನಾ:
ಬಿಗ್ ಬಾಸ್ ಸೀಸನ್ 7 ರ 28 ನೇ ದಿನದಂದು ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದರು. ಮೊದಲ ವಾರ ಟಪ್‌ ಆದರೂ ಎರಡನೇ ವಾರದಿಂದ ಅವರ ಆಟ ಬಿಸಿಯಾಗತೊಡಗಿತು. ರೆಡ್ ಕಾರ್ಡ್‌ನೊಂದಿಗೆ ಬಿಗ್ ಬಾಸ್ ಮನೆಯಿಂದ ಹೊರಹಾಕಲ್ಪಟ್ಟ ಪ್ರದೀಪ್‌ಗೆ ನ್ಯಾಯ ಕೇಳುವ ಹೆಸರಿನಲ್ಲಿ, ವಿಚಿತ್ರಾ ಜೊತೆಗಿನ ಮೈತ್ರಿ ಅರ್ಚನಾಗೆ ಹೆಚ್ಚು ಗಮನ ಕೊಡುವಂತೆ ಮಾಡಿತು. ತಾಳ್ಮೆಯಿಂದ ಮತ್ತು ನ್ಯಾಯಯುತವಾಗಿ ಆಡುವುದನ್ನು ಮುಂದುವರಿಸುವ ಮೂಲಕ, ಅವರು ಬಿಗ್ ಬಾಸ್ ಸೀಸನ್ 7 ರ ಪ್ರಶಸ್ತಿಯನ್ನು ಗೆದ್ದರು ಮತ್ತು 50 ಲಕ್ಷ ಗಳಿಸಿದರು. ಇದಲ್ಲದೇ ದಿನಕ್ಕೆ 15 ರಿಂದ 18 ಸಾವಿರ ಸಂಭಾವನೆ ಪಡೆಯುತ್ತಿದ್ದರು.. ಬಿಗ್ ಬಾಸ್ ಮನೆಯಲ್ಲಿ 77 ದಿನಕ್ಕೆ 13 ಲಕ್ಷ ಸಂಭಾವನೆ ಪಡೆದಿದ್ದಾರೆ... 


ಇದನ್ನೂ ಓದಿ-BBK10: ಜೋರು ಧ್ವನಿ; ಸ್ನೇಹದ ಖನಿ – ತನಿಷಾ ಕುಪ್ಪಂಡ ಬಿಗ್‌ಬಾಸ್‌ ಜರ್ನಿ!


ಪೂರ್ಣಿಮಾ ರವಿ:
ಬಿಗ್ ಬಾಸ್ ಶೋನಲ್ಲಿ ವಿವಾದಾತ್ಮಕ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪೂರ್ಣಿಮಾ ರವಿ, ಬಿಗ್ ಬಾಸ್ ಆರಂಭವಾದ ದಿನದಿಂದಲೂ ಜಗಳಗಂಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುವ ಮುನ್ನ... 96ನೇ ದಿನಕ್ಕೆ 16 ಲಕ್ಷ ನಗದು ಹಣದೊಂದಿಗೆ ನಿರ್ಗಮಿಸಿದ್ದಾರೆ. ದಿನಕ್ಕೆ 15 ರಿಂದ 18 ಸಾವಿರ ಸಂಪಾದಿಸಿದ ಪೂರ್ಣಿಮಾ ಬಿಗ್ ಬಾಸ್ ಮನೆಯಲ್ಲಿದ್ದು 17 ಲಕ್ಷ ಮತ್ತು ಸಂದರ್ಶನದಿಂದ 16 ಲಕ್ಷ ಗಳಿಸಿ 33 ಲಕ್ಷದೊಂದಿಗೆ ಹೊರಬಿದ್ದಿದ್ದರು..


ವಿಚಿತ್ರಾ:
50 ವರ್ಷದ ಸ್ಪರ್ಧಿ ವಿಚಿತ್ರಾ ಬಿಗ್ ಬಾಸ್ ಸೀಸನ್ 7 ರಲ್ಲಿ ಅನೇಕ ಯುವ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆ ನೀಡಿದರು. ಅವರು ಖಂಡಿತವಾಗಿಯೂ ಬಿಗ್ ಬಾಸ್ ಸೀಸನ್ 7 ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಿದ್ದ ಪ್ರಮುಖ ಸ್ಪರ್ಧಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ... ಅವರ ಮಾತು ಮತ್ತು ನಡೆ ಬಿಗ್ ಬಾಸ್ ಅಭಿಮಾನಿಗಳನ್ನು ಕೆರಳಿಸಿ 98ನೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರನಡೆದರು.. ದಿನದ ಸಂಭಾವನೆ 27 ರಿಂದ 30 ಸಾವಿರ ಪಡೆದ ವಿಚಿತ್ರಾ ಸುಮಾರು 29 ಲಕ್ಷದೊಂದಿಗೆ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ್ದಾರೆ... 


ಇದನ್ನೂ ಓದಿ-ಪ್ರಭಾಸ್ ಮತ್ತು ಸಲ್ಮಾನ್ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಭಾರತದ ಟಾಪ್ ಹೀರೋಯಿನ್ ಈಕೆ!


ವಿಷ್ಣು:
ಧಾರಾವಾಹಿಗಳಲ್ಲಿ ಅಮುಲ್ ಬೇಬಿಯಾಗಿ ಕಾಣಿಸಿಕೊಂಡಿದ್ದ ವಿಷ್ಣು, ಬಿಗ್ ಬಾಸ್ ಸೀಸನ್ 7ರಲ್ಲಿ ಟೆರರ್ ಬೇಬಿಯಾಗಿ ಕಾಣಿಸಿಕೊಂಡಿದ್ದರು.. ದಿನವೊಂದಕ್ಕೆ 23ರಿಂದ 25 ಸಾವಿರ ಸಂಭಾವನೆ ಪಡೆಯುತ್ತಿದ್ದ ಇವರು 105 ದಿನ ಇದ್ದು ಸುಮಾರು 26 ಲಕ್ಷ ಪಡೆದು ಹೊರಬಿದ್ದರು..  


ಮಾಯಾ ಮತ್ತು ಮಣಿಚಂದ್ರ:
ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದ ಮಾಯಾ ಹಾಗೂ ಮಣಿಚಂದ್ರ ಇಬ್ಬರೂ ಮೊದಲ ದಿನದಿಂದ ಫಿನಾಲೆವರೆಗೂ ಬಿಗ್ ಬಾಸ್ ಮನೆಯಲ್ಲಿದ್ದು, ಇಬ್ಬರೂ ಸಂಭಾವನೆ ಪಡೆದಿದ್ದು 18ರಿಂದ 20 ಸಾವಿರ. ಹೀಗಾಗಿ ಇಬ್ಬರೂ ಸುಮಾರು 21 ಲಕ್ಷ ರೂಪಾಯಿಯೊಂದಿಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.