Bigg Boss: ಬಿಗ್‌ಬಾಸ್ ಮನೆಯ ಕುಸ್ತಿ ಅಖಾಡದಲ್ಲಿ ಜಟ್ಟಿಗಳ ಜಟಾಪಟಿ!
BBK 10: ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಬಿಗ್‌ಬಾಸ್ ಮನೆಯೊಳಗೆ ನಡೆಯುತ್ತಿರುವ ಕುಸ್ತಿ ಪಂದ್ಯದ ಝಲಕ್‌ಗಳು ಜಾಹೀರುಗೊಂಡಿವೆ.
Bigg Boss Kannada: ನಿನ್ನೆ ಮೊನ್ನೆಯೆಲ್ಲ ಹಳ್ಳಿಮನೆಯಾಗಿ ಬದಲಾಗಿದ್ದ ಬಿಗ್‌ಬಾಸ್ ಮನೆಯಲ್ಲೀಗ ಕೆಂಪು ಮಣ್ಣಿನ ಕುಸ್ತಿ ಅಖಾಡ ರಾರಾಜಿಸುತ್ತಿದೆ. ಕುಸ್ತಿ ಅಖಾಡದ ಒಳಗೆ ದೈಹಿಕ ಶಕ್ತಿ ಪ್ರದರ್ಶನ ನಡೆಯುತ್ತಿದ್ದರೆ, ಅಖಾಡದ ಹೊರಗೆ ಮಾತಿನ ಶಕ್ತಿಪ್ರದರ್ಶನವೂ ಜೋರಾಗಿಯೇ ನಡೆಯುತ್ತಿದೆ.
JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊದಲ್ಲಿ ಬಿಗ್‌ಬಾಸ್ ಮನೆಯೊಳಗೆ ನಡೆಯುತ್ತಿರುವ ಕುಸ್ತಿ ಪಂದ್ಯದ ಝಲಕ್‌ಗಳು ಜಾಹೀರುಗೊಂಡಿವೆ. ಕಳೆದ ಎರಡು ದಿನಗಳಿಂದ ಹಳ್ಳಿ ವಾತಾವರಣದಲ್ಲಿ, ಬಿಗ್‌ಬಾಸ್ ಸ್ಪರ್ಧಿಗಳು ಎರಡು ಕುಟುಂಬಗಳಾಗಿ ಬದುಕುತ್ತಿದ್ದಾರೆ. ಅವರ ನಡುವೆ ಜೋರು ಸ್ಪರ್ಧೆಯೂ ನಡೆಯುತ್ತಿದ್ದು, ಮಾತುಗಳ ಜಟಾಪಟಿ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಿದೆ.
ಈಗ ಬಿಗ್‌ಬಾಸ್ ಸ್ಪರ್ಧಿಗಳಿಗೆ ಕೈ ಕೈ ಮಿಲಾಯಿಸುವ ನೇರ ಅವಕಾಶವನ್ನು ನೀಡಿದ್ದಾರೆ. ಅದೂ ಕೆಮ್ಮಣ್ಣಿನ ಅಖಾಡದಲ್ಲಿ!
‘ಆನೆ’ಯಾಗಿ ಬಿಂಬಿಸಿಕೊಂಡಿದ್ದ ವಿನಯ್ ಮತ್ತು ಮೈಕಲ್ ಅಖಾಡದಲ್ಲಿ ಮುಖಾಮುಖಿಯಾಗದ್ದಾರೆ. ಸ್ನೇಹಿತ್ ಮತ್ತು ಕಾರ್ತಿಕ್ ಜಿದ್ದಾಜಿದ್ದಿಗೆ ಮುಂದಾಗಿದ್ದಾರೆ. ಅತ್ತ, ನೀತು ಮತ್ತು ಸಂಗೀತಾ ಕೂಡ ಪಂದ್ಯಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ- BBK 10: ದೊಡ್ಮನೆಯಲ್ಲಿ ಆಟದ ವರಸೆಯನ್ನೇ ಬದಲಿಸಿದ ಡ್ರೋನ್ ಪ್ರತಾಪ್..! ಕರ್ಚೀಪ್ ಕೊಟ್ಟು, ಬುದ್ಧಿ ಹೇಳಿದ್ದೇ ತಪ್ಪಾಯ್ತಾ?
ವಿನಯ್ ಮತ್ತು ಮೈಕಲ್ ಇಬ್ಬರೂ ಒಮ್ಮೆಲೇ ಅಖಾಡದಿಂದ ಹೊರಬಿದ್ದ ದೃಶ್ಯ, ಸ್ನೇಹಿತ್ ಮತ್ತು ಕಾರ್ತಿಕ್ ಪರಸ್ಪರ ಕೈ ಮಿಲಾಯಿಸಿರುವ ದೃಶ್ಯ ಮತ್ತು ಸಂಗೀತಾ ಮತ್ತು ನೀತು ತಳ್ಳಾಡಿಕೊಳ್ಳುತ್ತಿರುವ ದೃಶ್ಯ ಪ್ರೋಮೊದಲ್ಲಿ ಸೆರೆಯಾಗಿದೆ. ಪಂದ್ಯಕ್ಕೂ ಮುನ್ನ ವರ್ತೂರ್ ಸಂತೋಷ್ ಅವರು ತಮಾಷೆಯಾಗಿ ತುಕಾಲಿ ಸಂತೋಷ್‌ಗೆ ‘ಕುಸ್ತಿಯ ರುಚಿ’ ತೋರಿಸಿದ್ದಾರೆ!
ಅಖಾಡದಲ್ಲಿ ಕುಸ್ತಿ ನಡೆಯುತ್ತಿದ್ದರೆ ಹೊರಗಡೆ ತನಿಷಾ ಮತ್ತು ವಿನಯ್ ನಡುವೆ ಮಾತಿನ ಚಕಮಕಿಯೂ ಜೋರಾಗಿಯೇ ನಡೆದಿದೆ. ವಿನಯ್, ತನಿಷಾಗೆ ‘ಡ್ರೆಸ್ ಚೇಂಜ್ ಮಾಡ್ಕೊಂಡು ಬಂದ್ಬಿಡಿ ನೀವು’ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ತನಿಷಾ, ‘ಯಾರು ಆಡ್ತಿದ್ದಾರೆ ಅವ್ರು ಮಾತಾಡ್ಲಿ. ಮಿಕ್ಕವ್ರೆಲ್ಲ ಮಾತಾಡಿದ್ರೆ ಸರಿ ಇರಲ್ಲ’ ಎಂದು ಅವಾಜ್ ಹಾಕಿದ್ದಾರೆ.
ಇದನ್ನೂ ಓದಿ- BBK10: ಕಾರ್ತಿಕ್ VS ಡ್ರೋನ್ ಪ್ರತಾಪ್..! ನಾಮಿನೇಷನ್ ಪಾಸ್ ಕಾದಾಟದಲ್ಲಿ ಗೆದ್ದೋರು ಯಾರು?
ವಿನಯ್, ‘ಏನೇ’ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ. ತನಿಷಾ ಕೂಡ, ‘ನಿಂಗೆ ಯಾವನೂ ಅಧಿಕಾರ ಕೊಟ್ಟಿಲ್ಲ. ಮೈಂಡ್ ಯುವರ್ ವರ್ಡ್ಸ್’ ಎಂದು ಕೈ ತೋರಿಸಿ ಉತ್ತರಿಸಿದ್ದಾರೆ.
ಅಖಾಡದ ಒಳಗೆ-ಹೊರಗಿನ ಜಟಾಪಟಿಯಲ್ಲಿ ಗೆಲ್ಲುವವರು ಯಾರು? ಸೋತು ಮಣ್ಣು ಮುಕ್ಕುವವರು ಯಾರು? ತಿಳಿಯಲು JioCinemaದಲ್ಲಿ ಉಚಿತ ನೇರ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ವೀಕ್ಷಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.