BBK 10: ಬಿಗ್‌ಬಾಸ್ ಮನೆಗೆ ಬೆಂಕಿ ಆರೋಗ್ಯ ಹೇಗಿದೆ? ತನಿಷಾನ ಮಿಸ್ ಮಾಡಿಕೊಳ್ಳುತ್ತಿರುವ ವರ್ತೂರ್ ಸಂತೋಷ್!
Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Tanisha Health Condition in BBK: ಬಿಗ್‌ಬಾಸ್ ಕನ್ನಡ ಸೀಸನ್ 10 ರ ಶೋನಲ್ಲಿ, ತನಿಷಾ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗೆ ಮನೆಯಿಂದ ಹೊರಗಡೆ ಹೋಗಿದ್ದವರು, ಎರಡು ದಿನವಾದರೂ ಮನೆಗೆ ಮರಳಿಲ್ಲ. ಬೆಂಕಿ ತನಿಷಾ ಕುಪ್ಪಂಡ ಜೊತೆಗೆ ವರ್ತೂರು ಸಂತೋಷ್ ಉತ್ತಮ ಸ್ನೇಹ ಬೆಳೆಸಿದ್ದರಿಂದ, ಈಗ ಈತ ಬೆಂಕಿಯನ್ನು ಮಿಸ್ ಮಾಡಿಕೊಳ್ತಿದ್ದಾರಂತೆ. ತನಿಷಾ ವಿಷಯ ಕುರಿತಯ ನಮ್ರತಾ ಗೌಡ, ವರ್ತೂರು ಸಂತೋಷ್, ಸಿರಿ, ತುಕಾಲಿ ಮಾತುಕಥೆ ನಡೆಸಿದ್ದಾರೆ.
ನಮ್ರತಾ ಗೌಡ ವರ್ತೂರ್ ಸಂತೋಷ್ ಬೆಂಕಿ ಯೋಚನೆಯಲ್ಲಿ ಮುಳುಗಿ ಹೋಗಿದ್ದಾರೆ ಎಂದಾಗ ತುಕಾಲಿ ಈ ರೀತಿ ಒಬ್ಬರಿಗೋಸ್ಕರ ಕನವರಿಸಿಕೊಂಡವರನ್ನು ನಾನು ಇತಿಹಾಸದಲ್ಲಿ ನೋಡಿಲ್ಲ. ಎಷ್ಟು ಸಲ ಬೆಂಕಿ ಹೆಸರು ಹೇಳಿದ್ರು ಗೊತ್ತಾ? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಬೆಂಕಿ ಕರೆದುಕೊಂಡು ಬಂದು ಇವರಿಗೆ ಒಪ್ಪಿಸಬೇಕು ಅಂತ ಅನಿಸಿಬಿಡ್ತು. ಅವರಿಗೆ ಆಗ್ತಾನೇ ಇಲ್ಲ, ದಿಢೀರ್ ಅಂತ ಯಾರಿಗೋ ಹೊಡೆಯೋಕೆ ಹೋಗ್ತಾರೆ, ಕಚ್ಚುತ್ತಾರೆ, ನನ್ನ ಜೊತೆಯೂ ಜಗಳ ಆಡಿದ್ರು. ಅಂತ ಹೇಳಿದರು. ಅವಾಗ ವರ್ತೂರ್ ಸಂತೋಷ್ ತನಿಷಾಗೆ ಏನೂ ಆಗದೆ ಇದ್ರೆ ಸಾಕು ಎಂದರು.ಅದಕ್ಕೆ ಸಿರಿ ಏನೂ ಆಗಿರಲ್ಲ ಎಂದಿದಕ್ಕೆ ನಮ್ರತಾ ಅವರ ಕಾಲಿಗೆ ತುಂಬ ಸಮಸ್ಯೆ ಆಗಿದೆ ಎಂದು ಹೇಳಿದರು. ಆಗ ತುಕಾಲಿ ಸಂತು ಏನಾಗಿರಲಿಲ್ಲ, ಪ್ರಾಬ್ಲಮ್ ಇದ್ದಿದ್ದರೆ ಬಿಗ್‌ಬಾಸ್ ಹೇಳುತ್ತಿದ್ರು. ಒಂದು ಬೆಡ್ ರೆಸ್ಟ್ ಬೇಕಿರತ್ತೆ ಎಂದು ಹೇಳಿದರು.
ಇದನ್ನೂ ಓದಿ: BBK 10: ಬಿಗ್‌ಬಾಸ್ ಮನೆಯಿಂದ ಹೊರನಡೆದ ತನಿಷಾ: ಏನಾಗಿತ್ತು ದೊಡ್ಮನೆಯ ಬೆಂಕಿಗೆ?
ತನಿಷಾ ಕುಪ್ಪಂಡ ಕಾಲಿಗೆ ಪೆಟ್ಟು ಬಿದ್ದಿದ್ದು, ಇದರಿಂದ ಸುಧಾರಿಸಿಕೊಳ್ಳಲು ಇನ್ನು ಎಷ್ಟು ದಿನ ಆಗಬೇಕು, ಆಕೆಯ ಕಾಲಿಗೆ ಏನಾಗಿದೆ ಎಂದು ಬಿಗ್‌ಬಾಸ್ ಇನ್ನೂ ಮಾಹಿತಿ ನೀಡಿಲ್ಲ. ತನಿಷಾ ದೊಡ್ಮನೆಗೆ ಬರದೆ ಎರಡು ದಿನ ಆಗಿದ್ದರಿಂದ ಮೇಜರ್ ಸಮಸ್ಯೆ ಆಗಿದೆಯಾ ಎಂಬ ಪ್ರಶ್ನೆ ವೀಕ್ಷಕರಿಗೂ ಕಾಡುತ್ತಿದೆ. ತನಿಷಾ ಕಾಲಿಗೆ ಮೇಜರ್ ಸಮಸ್ಯೆ ಆಗಿ ಅವರು ಶೋನಿಂದ ಹೊರಗಡೆ ಇರಬೇಕಾದ ಪರಿಸ್ಥಿತಿ ಬಂದರೆ, ಈ ವಾರ ಎಲಿಮಿನೇಶನ್ ಇರಬಹುದು, ಇಲ್ಲದೆಯೂ ಇರಬಹುದು.
ಬಿಗ್‌ಬಾಸ್ 100 ದಿನಗಳ ಆಟವಾಗಿದ್ದು, ಈಗಾಗಲೇ 50 ದಿನ ಕಳೆದು ಹೋಗಿದೆ. ಫಿನಾಲೆಯಲ್ಲಿ 4-5 ಸ್ಪರ್ಧಿಗಳು ಇರುತ್ತಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸೇರಿ 12 ಜನರು ಈ ಮನೆಯಲ್ಲಿ ಇರೋದರಿಂದ ತನಿಷಾ ಮರಳಿ ಮನೆಗೆ ಬಂದರೂ, ಬರದಿದ್ದರೂ ಕೂಡ ಈ ಬಾರಿ ಒಂದು ಎಲಿಮಿನೇಶನ್ ಆಗುವುದು. ಒಂದು ವೇಳೆ ಆಗಿಲ್ಲ ಅಂದರೆ ಡಬಲ್ ಎಲಿಮಿನೇಶನ್ ಆಗುತ್ತದೆ. ತನಿಷಾ ಕುಪ್ಪಂಡ ಪ್ರಬಲ ಸ್ಪರ್ಧಿಯಾಗಿದ್ದು, ಈಕೆಗೆ ಬಿಗ್‌ಬಾಸ್ ಗೆಲ್ಲುವ ಅವಕಾಶ ಜಾಸ್ತಿ ಇತ್ತು, ವೀಕ್ಷಕರು ಕೂಡ ಅವರನ್ನು ಇಷ್ಟಪಟ್ಟಿದ್ದರು. ಇನ್ನು ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡುತ್ತಿದ್ದ ತನಿಷಾ, ಇದ್ದ ವಿಷಯವನ್ನು ಇದ್ದ ಹಾಗೆ ಹೇಳಿ ಎಲ್ಲರ ಮನಸ್ಸಿಗೂ ಹತ್ತಿರ ಆಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.