BBK: ಬಿಗ್‌ಬಾಸ್‌ ಆಟ ಪ್ರಾರಂಭವಾಗಿ ಎರಡು ವಾರಗಳು ಮುಗಿದಿದೆ. ಎರಡನೇಯ ವಾರ ಬಿಗ್‌ಬಾಸ್‌ ಮನೆಯಲ್ಲಿ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿತ್ತು.  ಅದಕ್ಕೆ ಇಬ್ಬರು ಲೀಡರ್‌ಗಳನ್ನು ಮನೆಯ ಸದಸ್ಯರು ಆಯ್ಕೆ ಮಾಡಿದರು. ವಿನಯ್‌ ಗೌಡ ಹಾಗು ಕಾರ್ತಿಕ್‌ ಮಹೇಶ್‌ ಲೀಡರ್‌ಗಳಾಗಿ ಆಯ್ಕೆಯಾಗದರು. ವಿನಯ್‌ ತಂಡಕ್ಕೆ ಮಾಣಿಕ್ಯ ಅಂತ ಹೆಸರಿಡಲಾಯಿತು. ಹಾಗೆ ಕಾರ್ತಿಕ್‌ ತಂಡಕ್ಕೆ ರಣಶಕ್ತಿ ಎಂದು ಹೆಸರಿಟ್ಟಿದರು. ಟಾಸ್ಕ್‌ಗಳಲ್ಲಿ ಬಿಗ್‌ಬಾಸ್‌ ಎರಡು ತಂಡಗಳ ಸದಸ್ಯರ ಮಧ್ಯೆ ಚೆನ್ನಾಗಿಯೆ ಪೈಪೋಟಿ  ನಡೆದಿದೆ.


COMMERCIAL BREAK
SCROLL TO CONTINUE READING

ಮೊದಲನೆಯ ವಾರ ಬಿಗ್‌ಬಾಸ್‌ ಮನೆಯಲ್ಲಿ ಸ್ನೇಹಿತ್‌ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದರು. ಎರಡನೆಯ ವಾರ ಬಿಗ್‌ಬಾಸ್‌ ಮನೆಯಲ್ಲಿ ರಕ್ಷಕ್‌ ಬುಲೆಟ್‌ ದೊಡ್ಮನೆಯ ಕ್ಯಾಪ್ಟನ್‌ ಆಗಿ ಆಯ್ಕೆಯಾದರು. ಹಾಗೆ ಇಶಾನಿಯನ್ನು ಈ ವಾರದ ಕಳಪೆ ಎಂದು ಬಿಗ್‌ಬಾಸ್‌ ಮನೆಯ ಜೈಲಿಗೆ ಕಳುಹಿಸಲಾಯಿತು. ಬಿಗ್‌ಬಾಸ್‌ ಮನೆಯಲ್ಲಿ ಈ ಎಲ್ಲಾ ವಿಷಯಗಳನ್ನು ನೋಡಿ ಸುದೀಪ್‌ ಗರಂ ಆಗಿದ್ದರು. ಮನೆಯ ಸದಸ್ಯರ ವರ್ತನೆ ಸುದೀಪ್‌ ಅವರಿಗೆ ಕಿರಿಕಿರಿ ಉಂಟಾಗಿದೆ. 


ಇದನ್ನೂ ಓದಿ-ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಅನಾವರಣವಾಯಿತು "ಉಪಾಧ್ಯಕ್ಷ" ಚಿತ್ರದ ಟೀಸರ್ .


ಹೌದು... ನಿನ್ನೆ ನಡೆದ ಬಿಗ್‌ಬಾಸ್‌ ವೇದಿಕೆ ಮೇಲೆ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್‌ ತುಂಬಾನೆ ಕೊಪಗೊಂಡಿದ್ದರು. ಬಿಗ್‌ ಮನೆಯ ಮಂದಿಯನ್ನು ಭೇಟಿ ಮಾಡುತ್ತಲೇ, 'ನೀವು ನೀವೇ ಡಿಸ್ಕಸ್ ಮಾಡಿಕೊಂಡು ಇಬ್ಬರನ್ನು ನಾಮಿನೇಟ್ ಮಾಡಿ' ಎಂದರು. ಆ ವೇಳೆ ಮನೆಯ ಸದಸ್ಯರೆಲ್ಲಾ ಸೇರಿ ಪ್ರತಾಪ್ ಮತ್ತು ಗೌರೀಶ್ ಅಕ್ಕಿ  ಹೆಸರುಗಳನ್ನು ಫೈನಲ್ ಮಾಡಿದರು. ಬಳಿಕ ಸೋಫಾ ಮೇಲೆ ವಿನಯ್‌ ಹಾಗು ಕಾರ್ತಿಕ್‌ ಇಬ್ಬರನ್ನು ಬಿಟ್ಟು ಎಲ್ಲರನ್ನೂ ಸೋಫಾ ಹಿಂದೆ ನಿಲ್ಲಲು ಆದೇಶ ಮಾಡಿದರು. ನಂತರ ಎಲ್ಲರಿಗೂ ಹಿಗ್ಗಾ ಮುಗ್ಗಿ ಕ್ಲಾಸ್‌ ತೆಗೆದುಕೊಂಡರು. 


ಬಿಗ್‌ಬಾಸ್‌ ಆಟದ ಮಂಗಳವಾರದ ಸಂಚಿಕೆಯಲ್ಲಿ, ಮನೆಯಲ್ಲಿ ಇಬ್ಬರನ್ನು ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಬೇಕು ಎಂದು ಹೇಳಿದರು.  ಆಗ ಮನೆಯ ಸದಸ್ಯರು 20 ಸೆಕೆಂಡ್ ಕೂಡ ಯೋಚಿಸದೇ ಕಾರ್ತಿಕ್ ಮತ್ತು ವಿನಯ್ ಹೆಸರನ್ನು ಹೇಳಿದ್ದರು. ಈ ವಿಚಾರ ಸುದೀಪ್‌ಗೆ ಕೋಪಕ್ಕೆ ಕಾರಣವಾಯಿತು. ʼಈ ಮನೆಯನ್ನು ರಕ್ಷಕ್‌ನಂತಹ ಚಿಕ್ಕ ಹುಡುಗನ ಕ್ಯಾಪ್ಟನ್‌ಶಿಪ್‌ನಲ್ಲಿ ಮನೆ ನಡೆಸಲು ನೀವು ರೆಡಿ ಇದ್ದೀರಿ. ಆದರೆ ಒಬ್ಬ ಹೆಣ್ಣಿನ ಮೇಲೆ ನಿಮಗೆ ನಂಬಿಕೆ ಇಲ್ಲʼ. ಇಶಾನಿಗೆ ತರಾಟೆಗೆ ತೆಗೆದುಕೊಳ್ಳತ್ತಾ ʼಡ್ಯಾನ್ಸ್ ಮಾಡಿದ್ರಿ, ಕಾನ್ಫಿಡೆನ್ಸ್‌ ಅಲ್ಲಿ ಮಾತನಾಡಿದ್ರಿ, ಹೊರಗಡೆ ಒಬ್ಬರ ಅವಕಾಶವನ್ನು ಕಿತ್ತುಕೊಂಡು ನೀವು ಒಳಗೆ ಹೋದ್ರಿ. ನೀವಿಲ್ಲ ಇದ್ದಿದ್ದರೆ ಇನ್ನೊಬ್ಬರು ಯಾರಾದರೂ ಹೋಗಿರುತ್ತಿದ್ದರುʼ ಎಂದು ಹೇಳಿದರು. 


ಸುದೀಪ್‌ ಮುಖ್ಯವಾಗಿ ಹೆಣ್ಣುಮಕ್ಕಳಿಗೆ ʼಬಿಗ್ ಬಾಸ್ ಒಂದು ಫಿಸಿಕಲ್ ಟಾಸ್ಕ್‌ಗಳನ್ನು ಮಾಡುವಂತಹ ಶೋ. ಬಿಗ್ ಬಾಸ್ ನಿಮ್ಮಿಂದ ಇದು ಸಾಧ್ಯ ಎಂದು ನಂಬಿಕೆ ಇಟ್ಟು ಮನೆಯೊಳಗೆ ಮಹಿಳೆಯರನ್ನು ಕಳಿಸ್ತಾರೆ. ಆದರೆ ನಿಮಗೆ ನಿಮ್ಮ ಮೇಲೆ ನಂಬಿಕೆ ಇಲ್ವಾ? ನಿಮಗೆ ಗೆಲ್ಲಬೇಕು ಅಂತ ಹಠ ಇದಿಯೋ, ಇಲ್ವೋ ಅಂತ ಡೌಟ್ ಆಗ್ತಾ ಇದೆ. ನೀವಿಲ್ಲಿ ಚಪ್ಪಾಳೆ ಹೊಡೆಯೋಕೆ ಬಂದಿದ್ದೀರಾ? ಅದನ್ನಂತೂ ಎಲ್ರೂ ತುಂಬ ಚೆನ್ನಾಗಿ ಮಾಡ್ತಾ ಇದ್ದೀರಾ. ಕಳೆದ 9 ಸೀಸನ್‌ನಲ್ಲಿ ಒಬ್ಬರು ಶ್ರುತಿ  ಬಿಟ್ಟರೆ ಬೇರೆ ಯಾರೂ ಲೇಡಿಸ್‌ ಗೆದ್ದಿಲ್ಲ. ಯಾಕೆ ಅಂದ್ರೆ ನಿಮಗೆ ಗೆಲ್ಲಬೇಕು ಅಂತ ಅನ್ನಿಸ್ತಾ ಇಲ್ಲ' ಎಂದು ಸುದೀಪ್ ಹೇಳಿದರು.


ಇದನ್ನೂ ಓದಿ-ರಶ್ಮಿಕಾ ʼದಿ ಗರ್ಲ್‌ಫ್ರೆಂಡ್‌ʼ ಫಸ್ಟ್‌ ಲುಕ್‌ ಔಟ್‌..! ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ ಕಿರಿಕ್‌ ಬೆಡಗಿಯ 24ನೇ ಸಿನಿಮಾ 


ಸುದೀಪ್‌ ಕಳೆದ 9 ಸೀಸನಲ್ಲಿ ಉಪಯೋಗಿಸದ ತಮಗಿದ್ದ ಅಧಿಕಾರವನ್ನು ಈ ಸೀಸನ್‌ನಲ್ಲಿ ಬಳಸಿದ್ದಾರೆ. ಮನೆಯ ಸದಸ್ಯರಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾ ʼಎಲ್ರೂ ಏನ್ ಮಾಡಬೇಕು ಅಂತ ಇಲ್ಲಿಗೆ ಬಂದಿದ್ದೀರಿ? ನಾನು ನಿಮಗೆ ಎರಡು ಚಾಯ್ಸ್ ಕೊಡ್ತಿನಿ. ಯಾರಿಗೆ ಹಠ ಇಲ್ಲ, ಯಾರಿಗೆ ಸಿಕ್ಕ ಅವಕಾಶವನ್ನು ಹಾಳು ಮಾಡ್ಕೊಂಡು ಮನೆಗೆ ಹೋಗಬೇಕು ಅಂತ ಆಸೆ ಇದೆಯೋ ಕೈ ಎತ್ತಿ, ಈ ಕ್ಷಣವೇ ನಾನು ಬಾಗಿಲು ತೆರೆಸುತ್ತೇನೆ' ಎಂದು ಬಿಗ್ ಬಾಸ್ ಮನೆಯ ಮೇನ್‌ ಡೋರ್ ಅನ್ನು ಸುದೀಪ್ ತೆರೆಸಿದರು. ಬಿಗ್‌ಬಾಸ್‌ ಮನೆಯ ಮೇನ್‌ ಡೋರ್‌  ತೆರೆಸಿ, ಮನೆಯ ಮಂದಿಗೆ, 'ಯಾರಿಗಾದರೂ ಇಷ್ಟವಿದ್ದರೆ ಹೋಗಬಹುದು' ಎಂದು ನೇರವಾಗಿ ಹೇಳಿದರು.


ಸುದೀಪ್‌ ಅವರ ಮಾತನ್ನು ಕೇಳಿ ಮನೆಯ ಪ್ರತಿ ಸದಸ್ಯರು ಗಪ್‌ ಚುಪ್‌ ಆಗಿ ಇದ್ದರು. ನಂತರ ಸುದೀಪ್‌ ಮನೆಯ ಸದಸ್ಯರಿಗೆ ʼಈ ವಾರ ನಾನು ಮನೆಯೊಳಗೆ ನೋಡಿದ್ದು ಇಷ್ಟ ಆಗಿಲ್ಲ. ಬಿಗ್ ಬಾಸ್ ಮನೆಯೊಳಗೆ ಗೆಲ್ಲುವುದಕ್ಕೆ ಬಂದಿರುವ ನೀವು, ಯಾವುದೇ ಡಿಸ್ಕಸ್‌ ಕೂಡ ಮಾಡದೇ ಇಬ್ಬರ ಹೆಸರನ್ನು ಹೇಳ್ತೀರಾ. ನಿಮ್ಮ ಕರಿಯರ್‌ ಬಗ್ಗೆ ನಿಮ್ಮ ಯೋಚನೆ ಇಲ್ವಾ? ನಾನ್ಯಾಕೆ ಕ್ಯಾಪ್ಟನ್ ಆಗಬಾರದು ಅಂತ ನಿಮಗೆ ಅನ್ನಿಸಲಿಲ್ವಾ? ಯುದ್ಧಕ್ಕೆ ಇಳಿದ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದಾರೂ ಗೆಲ್ಲಿ. ಹೇಗಿರಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ಈ ರೀತಿ ಮಾತ್ರ ಇರಬೇಡಿ' ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.