Drone Prathap : ಪರವಾನಗಿ ಇಲ್ಲದೆ ಡ್ರೋನ್ ಮಾರಾಟ : ಬಿಗ್ಬಾಸ್ ರನ್ನರ್ ಅಪ್ ಪ್ರತಾಪ್ ವಿರುದ್ಧ ದೂರು
Case on Drone Prthap : ಡ್ರೋನ್ ಪ್ರತಾಪ್ ಪರವಾನಗಿ ಪಡೆಯದೆ ಡ್ರೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ನಡೆಸುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಡ್ರೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..
Drone Prathap : ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 10 ಸೀಸನ್ ಮುಕ್ತಾಯಗೊಂಡಿದ್ದು, ವಿನ್ನರ್ ಆಗಿ ನಟ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್ ಗೆಲುವು ಸಾಧಿಸಿದ್ದಾರೆ. ಎಲ್ಲವೂ ಮುಗಿತು ಎನ್ನುವಷ್ಟರಲ್ಲಿ ಪ್ರತಾಪ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ
ಹೌದು.. ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಡ್ರೋನ್ ಪ್ರತಾಪ್ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ಪ್ರತಾಪ್ ಮೋಸಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.
ಇದನ್ನೂ ಓದಿ: ಭಿಕ್ಷುಕನಂತೆ ಸುತ್ತಾಡಿದ ಸ್ಟಾರ್ ನಟ.. ಟ್ರಾಫಿಕ್ ಜಾಮ್, ತಿರುಪತಿ ಭಕ್ತರ ಹಿಡಿಶಾಪ!
ಇದೀಗ ಡ್ರೋನ್ ಪ್ರತಾಪ್ ವಿರುದ್ದ ಮತ್ತೊಂದು ಆರೋಪ ಕೇಳಿ ಬಂದಿದ್ದು, ಈ ಕುರಿತು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಪರಮೇಶ್ ಎಂಬುವವರು ದೂರು ನೀಡಿದ್ದು, ಡ್ರೋನ್ ಪ್ರತಾಪ್ ನಾಗರೀಕ ವಿಮಾನಯಾನ ಇಲಾಖೆ (ಡಿಜಿಸಿಎ) ಡ್ರೋನ್ ಮಾರಾಟ ಮಾಡುತ್ತಿರೋ ಆರೋಪ ಹಿನ್ನೆಲೆ ಈ ದೂರನ್ನು ದಾಖಲಿಸಿದ್ದಾರೆ.
ಡ್ರೋನ್ ಪ್ರತಾಪ್ ಪರವಾನಗಿ ಪಡೆಯದೆ ಡ್ರೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ನಡೆಸುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಡ್ರೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ ಎಂದು ಪರಮೇಶ್ವರ್ ಆರೋಪ ಮಾಡಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.