Karthik In BBK: ಬಿಗ್‌ಬಾಸ್‌ ಮನೆಯೊಳಗೆ ಬಿಗ್‌ಬಾಸ್‌ ಲಕ್ಷುರಿ ಬಜೆಟ್‌ ಪಡೆಯಲು ಟಾಸ್ಕ್ ಕೊಟ್ಟಿದ್ದು, ಇದರ ಅನುಸಾರ ಟಿವಿಯಲ್ಲಿ ತೋರಿಸುವ ಪದವನ್ನು ಬೋರ್ಡ್‌ ಮೇಲೆ ಬರೆಯಬೇಕಿತ್ತು. ಹೀಗೆ ಬರೆಯುವಾಗ ನಿರ್ದಿಷ್ಟ ಸ್ಥಳದಲ್ಲಿರುವ ಮಾರ್ಕರ್‌ಅನ್ನು ಮುಟ್ಟುವಂತಿರದೆ, ಮಾರ್ಕರ್‌ಗೆ ತಾಗುವಂತೆ ಬೋರ್ಡ್‌ ಅನ್ನು ಅತ್ತಿತ್ತ ಸಾಗಿಸಿ ಅಕ್ಷರಗಳನ್ನು ಬರೆಯಬೇಕಿತ್ತು. ಬರೆದ ನಂತರ ಬರೆದಿರುವುದನ್ನು ಇತರರು ಊಹಿಸಬೇಕಿಸಬೇಕಾಗಿ ಹೇಳಿದ್ದು, 1 ಪದ ಸರಿಯಾಗಿ ಊಹಿಸಿದರೆ 1 ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಪಡೆದಂತೆ.


COMMERCIAL BREAK
SCROLL TO CONTINUE READING

ಬೋರ್ಡ್‌ ಮೇಲೆ ಬರೆಯಲು ಮೊದಲು ಕಾರ್ತಿಕ್ ಬಂದು, ಬೋರ್ಡ್‌ ಮೇಲೆ ಬರೆಯುವಾಗ ಮಾರ್ಕರ್‌ ಮತ್ತು ಬೋರ್ಡ್‌ ಅನ್ನು ನೋಡಿಕೊಂಡು ಕಾರ್ತಿಕ್‌ ಬರೆದರು. ಅದು ಉದ್ದೇಶ ಪೂರ್ವಕವಾಗಿ ಆಗಿರದಿದ್ದರೂ, ಇದನ್ನ ಗಮನಿಸಿದ  ಬಿಗ್‌ಬಾಸ್‌, "ಇಷ್ಟು ವಾರಗಳಲ್ಲಿ ಮನೆಗೆ ಗರಿಷ್ಟ ಎಷ್ಟು ಲಕ್ಷುರಿ ಬಜೆಟ್ ಪಾಯಿಂಟ್ ನೀಡಿದ್ದರು?" ಎಂದು ನಮ್ರತಾರನ್ನ ಪ್ರಶ್ನಿಸಿದರು. ಅದಕ್ಕೆ ನಮ್ರತಾ "10 ಸಾವಿರ" ಎಂದು ಹೇಳಿದಾಗ, ಬಿಗ್‌ಬಾಸ್‌ "ಇಡೀ ಸೀಸನ್‌ನಲ್ಲಿ ಮೊಟ್ಟ ಮೊದಲ ಬಾರಿಗೆ 15 ಸಾವಿರ ಲಕ್ಷುರಿ ಬಜೆಟ್ ಪಾಯಿಂಟ್ ಗಳಿಸೋಕೆ ಬಿಗ್ ಬಾಸ್‌ ಅವಕಾಶ ನೀಡಿದ್ದರು. ಆದರೆ, ಆಟವನ್ನು ಬುದ್ಧಿವಂತಿಕೆಯಿಂದ ಆಡುವುದಕ್ಕೂ ಅಪ್ರಾಮಾಣಿಕತೆಯಿಂದ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ. ಕಾರ್ತಿಕ್ ಬರೆಯುವಾಗ ಬೋರ್ಡ್‌ ಅನ್ನು ನೋಡಿಕೊಂಡು ಬರೆಯೋದ್ರಲ್ಲಿ ಯಾವುದೇ ಜೀನಿಯೆಸ್‌ನೆಸ್‌ ಇಲ್ಲ. ಹಾಗೂ ಅದು ಈ ಆಟದ ಉದ್ದೇಶವೂ ಅಲ್ಲ" ಎಂದರು.


ಇದನ್ನೂ ಓದಿ: BBK 10: "ಎಲ್ಲರಿಗೂ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲ": ವಿನಯ್‌ ಅಸಮಧಾನ!


ಕಾರ್ತಿಕ್‌ ಬಿಗ್‌ಬಾಸ್‌ ಮಾತಿಗೆ ಬೇಸರಗೊಂಡು, "ಅಪ್ರಾಮಾಣಿಕವಾಗಿ ಆಡಬೇಕು ಅನ್ನುವ ಉದ್ದೇಶ ನನಗೆ ಇರಲಿಲ್ಲ. ಹಾಗೂ ಬರೆಯಬಹುದೇನೋ ಅಂತ ನಾನು ಬರೆದೆ. ನೀವು ಹೇಳಿದ್ಮೇಲೆ ತಪ್ಪು ಅಂತ ಗೊತ್ತಾಯಿತು. ಕ್ಷಮೆ ಇರಲಿ. ಇನ್ನೊಂದು ಅವಕಾಶ ಕೊಡಿ. ನನ್ನ ಪ್ರಾಮಾಣಿಕ ಪ್ರಯತ್ನ ನಾನು ಖಂಡಿತ ಮಾಡ್ತೀನಿ" ಎಂದು  ಹೇಳಿದರು. ಬೋರ್ಡ್‌ ಮೇಲೆ ಬರೆಯುವಾಗ ಮಾರ್ಕರ್‌ ಮತ್ತು ಬೋರ್ಡ್‌ ಅನ್ನು ನೋಡಿಕೊಂಡು ಬರೆದಿದಕ್ಕೆ ಕಾರ್ತಿಕ್‌ ಬಿಗ್‌ಬಾಸ್‌ಗೆ ಕ್ಷಮೆ ಕೇಳಿದರೂ, ಕಾರ್ತಿಕ್ ಗಳಿಸಿದ 5 ಸಾವಿರ ಲಕ್ಷುರಿ ಬಜೆಟ್‌ ಪಾಯಿಂಟ್‌ಗಳನ್ನು ಬಿಗ್‌ಬಾಸ್‌ ಹಿಂಪಡೆದರು.


ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಕೊನೆಗೆ, "ಈ ಆಟದಲ್ಲಿ ಅರಿಯದೆ ಮಾಡಿರುವ ತಪ್ಪನ್ನು ಕ್ಷಮಿಸಿ ಈಗ ಮನೆ ಗಳಿಸಿದ 6 ಸಾವಿರ ಲಕ್ಷುರಿ ಪಾಯಿಂಟ್‌ಗಳ ಜೊತೆಗೆ ಹೆಚ್ಚುವರಿ 2.5 ಸಾವಿರ ಲಕ್ಷುರಿ ಪಾಯಿಂಟ್‌ಗಳನ್ನು ಬಿಗ್ ಬಾಸ್‌ ನೀಡುತ್ತಿದ್ದಾರೆ. ಒಟ್ಟು 8.5 ಸಾವಿರ ಲಕ್ಷುರಿ ಪಾಯಿಂಟ್‌ಗಳನ್ನು ಮನೆ ಗಳಿಸಿದೆ" ಎಂದು ‘ಬಿಗ್ ಬಾಸ್‌’ ಘೋಷಿಸಿದರು. "ಅರಿಯದೆ ಮಾಡಿರುವ ತಪ್ಪು ಎಂದು ಬಿಗ್‌ಬಾಸ್‌ ಹೇಳಿದ್ರಿಂದ ಕಾರ್ತಿಕ್‌ ಕೊಂಚ ಸಮಾಧಾನಗೊಂಡರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.